ನವದೆಹಲಿ: ಭಾರತ ಕ್ರಿಕೆಟ್‌ಗೆ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜೇ ಶಾ ಅವರು ಜೂನ್ 25 ಭಾರತೀಯ ಕ್ರಿಕೆಟ್‌ಗೆ ಕೆಂಪು ಪತ್ರದ ದಿನ ಎಂದು ಹೇಳಿದ್ದಾರೆ.
ಲಾರ್ಡ್ಸ್‌ನಲ್ಲಿ ಸಿ.ಕೆ.ನಾಯುಡು ಅವರ ನಾಯಕತ್ವದಲ್ಲಿ ಭಾರತ ತನ್ನ ಟೆಸ್ಟ್ ಪ್ರಯಾಣವನ್ನು ಜೂನ್ 25, 1932 ರಂದು ಪ್ರಾರಂಭಿಸಿತು ಮತ್ತು ಅದೇ ದಿನವೇ ಕಪಿಲ್ ದೇವ್ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ 1983 ರಲ್ಲಿ ಕ್ರಿಕೆಟ್ ವಿಶ್ವಕಪ್ ಗೆದ್ದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದನ್ನೂ ಓದಿ: ಏಕಾಏಕಿ 'ಬಿಗ್ ಬ್ರದರ್' ಮಹೇಶ್ ಬಾಬು, ರಣವೀರ್ ಸಿಂಗ್ ಟ್ರೆಂಡಿಂಗ್ ನಲ್ಲಿರುವುದೇಕೆ?
June 25 is a Red Letter Day for Indian Cricket.
On this day in 1932, India began its Test journey under CK Nayudu's captaincy at @HomeOfCricket, the historic venue where @therealkapildev's men produced a magical performance in 1983 to bring home the World Cup. 🏆
— Jay Shah (@JayShah) June 25, 2021
ಈ ಕುರಿತಾಗಿ ಟ್ವೀಟ್ ಮಾಡಿರುವ ಶಾ "ಜೂನ್ 25 ಭಾರತೀಯ ಕ್ರಿಕೆಟ್‌ಗೆ ಕೆಂಪು ಪತ್ರ ದಿನವಾಗಿದೆ.1932 ರಲ್ಲಿ ಈ ದಿನ, ಭಾರತವು ತನ್ನ ಟೆಸ್ಟ್ ಪ್ರಯಾಣವನ್ನು ಸಿಕೆ ನಾಯ್ಡು ಅವರ ನಾಯಕತ್ವದಲ್ಲಿ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಪ್ರಾರಂಭಿಸಿತು, ಅಂತಹ ಐತಿಹಾಸಿಕ ಸ್ಥಳದಲ್ಲಿ ಕಪಿಲ್ ದೇವ್ (Kapil Dev) ನೇತೃತ್ವದ ತಂಡವು ತನ್ನ ಅದ್ಬುತ ಪ್ರದರ್ಶನದಿಂದಾಗಿ 1983 ರ ವಿಶ್ವಕಪ್ ನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು." ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಭಾರತದ ಸಾರ್ವಕಾಲಿಕ ನಂ 1 ಆಟಗಾರ ಇವರೇ ಎಂದ ಸುನಿಲ್ ಗವಾಸ್ಕರ್...? ಯಾರವರು ?
ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡವು 1932 ರಲ್ಲಿ ಲಾರ್ಡ್ಸ್‌ನಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಿದ ನಂತರ ಟೆಸ್ಟ್ ಸ್ಥಾನಮಾನವನ್ನು ಪಡೆದ ಆರನೇ ತಂಡವಾಯಿತು. ಪಂದ್ಯವು ಕೇವಲ 3 ದಿನಗಳಲ್ಲಿ ಆಡಿದರೂ ಟೆಸ್ಟ್ ಸ್ಥಾನಮಾನವನ್ನು ನೀಡಲಾಯಿತು. ಭಾರತ ಕೊನೆಯ ಇನಿಂಗ್ಸ್‌ನಲ್ಲಿ 187 ರನ್‌ಗಳಿಗೆ ಆಲೌಟ್ ಆಗಿತ್ತು ಮತ್ತು ಆತಿಥೇಯ ಇಂಗ್ಲೆಂಡ್‌ಗ ವಿರುದ್ಧ 158 ರನ್‌ಗಳಿಂದ ಸೋಲನ್ನು ಅನುಭವಿಸಬೇಕಾಯಿತು. 1932 ರಿಂದ ಭಾರತವು ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲಲು 20 ವರ್ಷಗಳು ಕಾಯಬೇಕಾಯಿತು.1952 ರಲ್ಲಿ ಭಾರತ ತಂಡವು ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.
ಇದನ್ನೂ ಓದಿ: ರಣವೀರ್ ಸಿಂಗ್ ನ್ಯೂ ಲುಕ್ ಕಂಡು ಉತ್ಸುಕರಾದ ಫ್ಯಾನ್ಸ್, ನಟ ಕ್ರೆಡಿಟ್ ನೀಡಿದ್ಯಾರಿಗೆ?
ಇನ್ನೂ 1983 ಕ್ಕೆ ಬಂದಾಗ ಭಾರತ ತಂಡವು ಸತತ ಎರಡು ವಿಶ್ವಕಪ್ ಗೆಲ್ಲುವ ಮೂಲಕ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸುವ ಮೂಲಕ ಚೊಚ್ಚಲ ವಿಶ್ವಕಪ್ ನ್ನು ಗೆದ್ದಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.