ಆರ್ಸಿಬಿ ಫ್ರಾಂಚೈಸಿ ಟ್ರೋಫಿ ಗೆಲುವಿನೊಂದಿಗೆ ಕೆಲವು ಕಷ್ಟದ ದಿನಗಳನ್ನು ಎದುರಿಸಿತ್ತು. ಈಗ ಐಪಿಎಲ್ನ ಈ ಸೀಸನ್ನಲ್ಲಿ ಟ್ರೋಫಿ ಗೆಲ್ಲುವ ಫೆವರಿಟ್ ಟೀಮ್ ಎನಿಸಿದೆ.
Today ipl match prasidh krishna vilan for Rcb: ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ನಮ್ಮ ಆರ್ಸಿಬಿ ಆಟಗಾರರಿಗೆ ಗುಜರಾತ್ ಟೈಟಾನ್ಸ್ನ ಸ್ಟಾರ್ ಬೌಲರ್ ಕನ್ನಡಿಗ ಪ್ರಸಿದ್ಧ್ ಕೃಷ್ಣ ಮಾರಕ ಆಗ್ತಾರ ಅನ್ನೋ ಚರ್ಚೆ ಶುರುವಾಗಿದೆ. ಸದ್ಯ ಆಡಿ ಬೆಳೆದ ಮೈದಾನದಲ್ಲಿಪ್ರಸಿದ್ಧ್ ಕೃಷ್ಣ ಮೋಡಿ ಮಾಡಲು ರೆಡಿಯಾಗಿದ್ದಾರೆ.
RCB players: ಇಂದು RCB ತವರು ಮೈದಾನವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿದೆ..ಆದರೆ ಈ ನಡುವೆ ಆರ್ಸಿಬಿ ಪಡೆಗಳು ಬ್ಲಾಕ್ ಬಣ್ಣದ ಜರ್ಸಿ ತೊಟ್ಟು ಕಣಕ್ಕೆ ಇಳಿಯಲಿದ್ದಾರೆ.
Mohammed Siraj: ಮೊಹಮ್ಮದ್ ಸಿರಾಜ್ ತಮ್ಮ ಸಾಮಾನುಗಳು ಕಾಣೆಯಾಗಿವೆ ಎಂದು ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಸಾಮಾನುಗಳು ಎಲ್ಲಿ ಕಳೆದುಹೋಗಿವೆ ಎಂಬುದನ್ನು ಅವರು ತಿಳಿಸಿಲ್ಲವಾದರೂ, ಆದರೆ ವಸ್ತುಗಳನ್ನು ಖರೀದಿಸಲು ಸಲಹೆ ಕೇಳಿದ್ದಾರೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಎಂದರೆ ಸಾಕಷ್ಟು ಜನರು ನೋಡುತ್ತಿರುತ್ತಾರೆ. ಅದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ಪಂದ್ಯಕ್ಕೆ ಇನ್ನು ಹೆಚ್ಚು ಜನ ನೋಡುತ್ತಾರೆ.
ಸೀಸನ್ಗೂ ಮೊದಲೇ ಪಂದ್ಯಗಳಲ್ಲಿ ನಾನು ಯಾವ ರೀತಿ ಕಾಣಿಸಿಕೊಳ್ಳಬೇಕು ಎಂದು ವಿರಾಟ್ ಕೊಹ್ಲಿ ಅವರು ಮೊದಲೇ ಯೋಜನೆ ಹಾಕಿಕೊಂಡಿರುತ್ತಾರಾ?.
RCB vs SRH Highlights: IPL 2026 ಸೀಸನ್ ಅದ್ದೂರಿಯಾಗಿ ಆರಂಭವಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಆರು ವಿಕೆಟ್ಗಳಿಂದ ಸೋಲಿಸಿತು. ವಿರಾಟ್ ಕೊಹ್ಲಿ ಅದ್ಭುತ ಇನ್ನಿಂಗ್ಸ್ನೊಂದಿಗೆ ಮಿಂಚಿದರೆ, SRH ನಾಯಕ ಇಶಾನ್ ಕಿಶನ್ ತಮ್ಮ ಸೋಲಿಗೆ ಕಾರಣಗಳನ್ನು ವಿಶ್ಲೇಷಿಸಿದರು.
Rcb vs srh highlights: IPl 2026 ರ ಮೊದಲ ಪಂದ್ಯದ ಗೆಲುವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದು, ಈ ಗೆಲುವಿನ ಸಿಂಹವಾಲು ಇವರಿಗೆ ಸಲ್ಲುತ್ತೆ ಅದ್ಹೇಗೆ ಅಂತಾ ತಿಳಿಯಲು ಈ ಸ್ಟೋರಿ ಓದಿ.
IPL 2026: ಕ್ರಿಕೆಟ್ ಟೂರ್ನಿ ಐಪಿಎಲ್ ಇಂದಿನಿಂದ ಶುರುವಾಗಲಿದೆ. ಮೊದಲ ಪಂದ್ಯವು ಬೆಂಗಳೂರಿನಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್ರರೈಸರ್ಸ್ ಹೈದರಾಬಾದ್ (SRH) ತಂಡಗಳು ಕಣಕ್ಕಿಳಿಯಲಿವೆ. ಆದರೆ ಈ ಪಂದ್ಯಕ್ಕೆ ಆರ್ಸಿಬಿ ತಂಡದ ಪ್ರಮುಖ ಮೂವರು ಆಟಗಾರರು ಅಲಭ್ಯರಾಗಿದ್ದಾರೆ.
IPL 2026: ನಾಳೆ IPL ಸೀಸನ್ 19 ಅದ್ದೂರಿಯಾಗಿ ಆರಂಭಗೊಳ್ಳು ಸಜ್ಜಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ನಾಳೆ ನಡೆಯಲಿರುವ ಈ ಪಂದ್ಯದ ಮೇಲೆ ಮಳೆ ಪರಿಣಾಮ ಬೀರುವ ಸಾಧ್ಯತೆಯಿದೆ.
IPL 2026 updates : 19ನೇ ಸೀಜನ್ ನ ಐಪಿಎಲ್ ಮ್ಯಾಚ್ ಗೆ ಇನ್ನು ಎರಡೇ ದಿನ ಬಾಕಿ. ಕಳೆದ ಬಾರಿಯ ಅವಘಡದಿಂದ ಎಚ್ಚತ್ತಿರೋ ಪೊಲೀಸ್ ಇಲಾಖೆ, ಕೆಎಸ್ ಸಿಎ, ಆರ್ ಸಿಬಿ ಮ್ಯಾನೆಜ್ಮೆಂಟ್ ಈ ಬಾರಿ ಸಾಕಷ್ಟು ಮುಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ. ಇವತ್ತು ಪೊಲೀಸ್ ಅಧಿಕಾರಿಗಳು ಇವತ್ತು ಮಾಕ್ ಡ್ರಿಲ್ ಮಾಡಿದ್ರು.
Virat kohli strategy:ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕಳೆದ ಸೀಸನ್ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸತತ ಎರಡನೇ ಬಾರಿಗೆ ಐಪಿಎಲ್ ಕಿರೀಟಕ್ಕೆ ಮುತ್ತಿಕ್ಕುವ ತವಕದಲ್ಲಿದೆ. ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಭ್ಯಾಸಕ್ಕಾಗಿ ಮಾರ್ಚ್ 18 ರಂದು ತಂಡವನ್ನು ಸೇರಿಕೊಂಡರು. ಸದ್ಯ ಹೊಸ ಹೇರ್ಸ್ಟೈಲ್ನಲ್ಲಿ ಆಗಮಿಸಿರುವುದು ಅಭಿಮಾನಿಗಳ ಗಮನ ಸೆಳೆದಿದ್ದು,ಮಾರ್ಚ್ 28 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ ಈ ನಡುವೆ IPL ಸೀಸನ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಆ ಪ್ರಖ್ಯಾತವ್ಯಕ್ತಿಯನ್ನ ಭೇಟಿಯಾಗಿದ್ದು, ಇದರ ಹಿಂದಿನ ರಹಸ್ಯ ತಿಳಿಯಲು ಈ ಸ್ಟೋರಿ ಓದಿ..
ಬಿಸಿಸಿಐ ಐಪಿಎಲ್ 2026ರ ಸೀಸನ್ನ ಅಧಿಕೃತ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ. ಮಾರ್ಚ್ 28ರಂದು ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ರೈಸರ್ಸ್ ಹೈದರಾಬಾದ್ ನಡುವಿನ ಉದ್ಘಾಟನಾ ಪಂದ್ಯದೊಂದಿಗೆ ಟೂರ್ನಿ ಪ್ರಾರಂಭವಾಗಲಿದೆ. ಚುನಾವಣೆಗಳ ಕಾರಣ ಬಿಸಿಸಿಐ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನ ಮಾತ್ರ ಘೋಷಿಸಿದೆ.
IPL 2026: 2025ರ ಋತುವಿನ ಐಪಿಎಲ್ ಟೂರ್ನಿ ಗೆದ್ದ ಬಳಿಕ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿ ತಂಡದ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದರು. ಈ ಹಿನ್ನಲೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳ ಆಯೋಜನೆಯನ್ನ ನಿಷೇಧಿಸಲಾಗಿತ್ತು. ಹೀಗಾಗಿ ಕಳೆದೊಂದು ವರ್ಷದಿಂದ ಈ ಕ್ರೀಡಾಂಗಣದಲ್ಲಿ ರಣಜಿ ಸೇರಿದಂತೆ ಯಾವುದೇ ಪಂದ್ಯಗಳು ನಡೆದಿರಲಿಲ್ಲ. ಇದೀಗ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಮ್ಯಾಚ್ ನಡೆಸಲು ಅನುಮತಿ ಸಿಕ್ಕಿದೆ. ಇದು ಆರ್ಸಿಬಿ ಅಭಿಮಾನಿಗಳಿಗೆ ಭರ್ಜರಿ ಖುಷಿ ನೀಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಐಪಿಎಲ್ ಪಂದ್ಯಗಳನ್ನ ವೀಕ್ಷಿಸಲು ಲಕ್ಷಾಂತರ ಫ್ಯಾನ್ಸ್ ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ. ಷರತ್ತುಗಳೊಂದಿಗೆ ಪಂದ್ಯಗಳನ್ನ ಆಯೋಜಿಸಲು ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಚುಟುಕು ಕ್ರಿಕೆಟ್ ಸೌಂಡ್ ಮಾಡಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನಲ್ಲಿ ಆಡುವುದು ಅಧಿಕೃತವಾಗಿದೆ. ಇಷ್ಟು ದಿನಗಳು ಆದರೂ ಆರ್ಸಿಬಿ ಪಂದ್ಯಗಳನ್ನು ಎಲ್ಲಿ ಆಡುತ್ತದೆ ಎನ್ನುವುದು ಯಕ್ಷ ಪ್ರಶ್ನೆಯಾಗಿತ್ತು.
ಐಪಿಎಲ್ ನಲ್ಲಿ ಆರ್ ಸಿಬಿ ಟೀಮ್ ಗೆದ್ದ ಬಳಿಕ ಸಂಭ್ರಾಚರಣೆಯ ದೊಡ್ಡ ಅನಾಹುತೇ ಆಗಿದೆ. ಇದಾದ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಪಂದ್ಯ ನಡೆಯುತ್ತಾ ಇಲ್ವಾ ಎಂಬ ಚರ್ಚೆ ಜೋರಾಗಿತ್ತು. ನಡೆಸೋದಾದ್ರೆ ಏನೆಲ್ಲಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಂತ ಸಭೆಯನ್ನ ನಡೆಸಲಾಗಿದೆ.. ಇಂದು ಗೃಹ ಸಚಿವರು ಮಹತ್ವದ ಸಭೆ ಮಾಡಿ ಮ್ಯಾಚ್ ನಡೆಸೋ ಸಂಬಂಧ ಚರ್ಚೆ ನಡೆಸಿದ್ದಾರೆ.ಆದ್ರೆ ಪಂದ್ಯಕ್ಕೆ ಅನುಮತಿ ಕೊಡುವ ವಿಚಾರ ಕ್ಯಾಬಿನೆಟ್ ಅಂಗಳಕ್ಕೆ ಬಂದು ನಿಂತಿದೆ.
Cricket Matches In Bengaluru: ಐಪಿಎಲ್ 2025ರಲ್ಲಿ ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ ದುರಂತದ ಕಹಿ ನೆನಪು ಹಾಗೆಯೇ ಇದೆ. ಈ ಮಧ್ಯೆ 2026ರ ಐಪಿಎಲ್ ಪಂದ್ಯಗಳು ಅದರಲ್ಲೂ ಮುಖ್ಯವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತದೆಯೋ ಅಥವಾ ಇಲ್ಲವೋ ಎನ್ನುವ ಅನುಮಾನಗಳಿಗೆ ಇನ್ನೂ ಸಹ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಏತನ್ಮಧ್ಯೆ, ಕೆಎಸ್ಸಿಎ, ಆರ್ಸಿಬಿ ನೇತೃತ್ವದ ನಿಯೋಗ ಇಂದು ಗೃಹ ಸಚಿವರನ್ನು ಭೇಟಿಯಾಗಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಗುತ್ತಾ ಎನ್ನುವ ಕುತೂಹಲವನ್ನು ಹೆಚ್ಚಿಸಿದೆ.