India vs Bangladesh 1st ODI Weather: ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಇದೀಗ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಇಂದಿನಿಂದ ಆರಂಭವಾಗುವ ಸರಣಿಯ ಮೊದಲ ಏಕದಿನ ಪಂದ್ಯವು ಢಾಕಾದ ಶೇರ್-ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವಿಶ್ರಾಂತಿ ಪಡೆದಿರುವ ಅನುಭವಿ ಆರಂಭಿಕ ಆಟಗಾರ ಮತ್ತು ನಾಯಕ ರೋಹಿತ್ ಶರ್ಮಾ ಈ ಸರಣಿಯ ಮೂಲಕ ಮೈದಾನಕ್ಕೆ ಮರಳಲಿದ್ದಾರೆ. ಇನ್ನೊಂದೆಡೆ, ತಮೀಮ್ ಇಕ್ಬಾಲ್ ಗಾಯಗೊಂಡ ಕಾರಣ ಲಿಟನ್ ದಾಸ್ ಅವರಿಗೆ ಬಾಂಗ್ಲಾದೇಶದ ನಾಯಕತ್ವವನ್ನು ನೀಡಲಾಗಿದೆ.
ಇದನ್ನೂ ಓದಿ: Babar Azam Record: ವಿರಾಟ್-ರೋಹಿತ್ ಜೊತೆಯಾಗಿ ಮಾಡಲಾಗದ್ದನ್ನು ಮಾಡಿ ಮತ್ತೊಂದು ದಾಖಲೆ ಬರೆದ ಬಾಬರ್ ಅಜಮ್!
ಹಿರಿಯ ಆಟಗಾರರ ಮರಳುವಿಕೆ:
ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಲವು ಹಿರಿಯ ಆಟಗಾರರು ಈ ಸರಣಿಯ ಮೂಲಕ ಮೈದಾನಕ್ಕೆ ಮರಳಲಿದ್ದಾರೆ. ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅವರಂತಹ ಹಿರಿಯ ಆಟಗಾರರು ಟಿ20 ವಿಶ್ವಕಪ್ 2022 ರ ನಂತರ ಮೊದಲ ಬಾರಿಗೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಈ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ಏಕದಿನ ಸ್ವರೂಪದಲ್ಲಿ ಶಿಖರ್ ಧವನ್ ತಂಡದ ನಾಯಕತ್ವವನ್ನು ವಹಿಸಿಕೊಂಡರು. ಇನ್ನೊಂದೆಡೆ T20 ಸರಣಿಯಲ್ಲಿ, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ನಾಯಕತ್ವವನ್ನು ನೀಡಲಾಗಿತ್ತು. ಆದರೆ ಟಿ20 ಸರಣಿ ಗೆದ್ದ ಟೀಂ ಇಂಡಿಯಾ, ಏಕದಿನದಲ್ಲಿ ಸೋಲು ಕಾಣುವಂತಾಯಿತು.
ಹವಾಮಾನ ಹೇಗಿದೆ?
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ, ಮಳೆ ಮತ್ತು ಕೆಟ್ಟ ಹವಾಮಾನದ ಕಾರಣ 3 ODIಗಳಲ್ಲಿ 2 ರದ್ದಾಗಿದೆ. ಹೀಗಿರುವಾಗ 50 ಓವರ್‌ಗಳ ಸಂಪೂರ್ಣ ಪಂದ್ಯ ಢಾಕಾದಲ್ಲಿ ನಡೆಯಲಿದೆಯೇ ಅಥವಾ ಮಳೆಯಿಂದ ಪಂದ್ಯಕ್ಕೆ ಮತ್ತೆ ತೊಂದರೆಯಾಗಲಿದೆಯೇ ಎಂದು ಕ್ರಿಕೆಟ್ ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ. ಆದರೆ ಈ ಪಂದ್ಯಕ್ಕೆ ಮಳೆಯಿಂದ ಸಮಸ್ಯೆ ಇಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಷ್ಟೇ ಅಲ್ಲದೆ ಕ್ರಿಕೆಟ್ ಅಭಿಮಾನಿಗಳಿಗೆ ಇಡೀ ಪಂದ್ಯವನ್ನು ಆನಂದಿಸುವ ಅವಕಾಶ ಸಿಗಲಿದೆ. ಅಕ್ಯುವೆದರ್ ವರದಿಯ ಪ್ರಕಾರ, ಮೀರ್‌ಪುರದಲ್ಲಿ ಸಂಜೆಯ ವೇಳೆಗೆ ವಾತಾವರಣ ತಂಪಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹಗಲಿನಲ್ಲಿ ಇಲ್ಲಿ ತಾಪಮಾನವು 29-30 ಡಿಗ್ರಿ ಸೆಲ್ಸಿಯಸ್ ಇರುತ್ತದೆ.
ಇದನ್ನೂ ಓದಿ: Paige Spiranac: ಮೈದಾನದಲ್ಲಿಯೇ ಬಟ್ಟೆ ಬಿಚ್ಚಿ ರೊನಾಲ್ಡೋ ಗೆಲುವನ್ನು ಸಂಭ್ರಮಿಸಿದ ಆಟಗಾರ್ತಿ!!
ಸ್ಪಿನ್ನರ್‌ಗಳಿಗೆ ಅನುಕೂಲ:
ಮೀರ್‌ಪುರ ಸ್ಟೇಡಿಯಂನ ಪಿಚ್ ಸ್ಪಿನ್ ಬೌಲರ್‌ಗಳಿಗೆ ಸಹಾಯಕವಾಗಿದೆ. ಇದನ್ನು ಈ ಹಿಂದೆಯೂ ನೋಡಲಾಗಿದೆ. ಕ್ರಿಕೆಟ್ ಪ್ರೇಮಿಗಳು ದೊಡ್ಡ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಬಹುದು. ಈ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 53 ಪಂದ್ಯಗಳನ್ನು ಗೆದ್ದಿದ್ದರೆ, ಗುರಿ ಬೆನ್ನಟ್ಟಿದ ತಂಡ 59 ಪಂದ್ಯಗಳನ್ನು ಗೆದ್ದಿದೆ. ಢಾಕಾದಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 228 ರನ್. ಇಲ್ಲಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡಲು ಬಯಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.