ಬುಮ್ರಾ, ಶಮಿ, ಕುಲ್ದೀಪ್ ಅಲ್ಲ..‌ ಈ ಆಟಗಾರ ಗೋಲ್ಡನ್ ಬಾಲ್ ಗೆಲ್ಲುವುದು ಖಚಿತ.!

ICC World Cup 2023 Golden Ball : ವಿಶ್ವಕಪ್‌ 2023 ರಲ್ಲಿ ಗೋಲ್ಡನ್‌ ಬಾಲ್‌ ವಿನ್ನರ್‌ ಯಾರಾಗಬಹುದೆಂಬ ಕುತೂಹಲ ಹೆಚ್ಚಾಗಿದೆ. ವಿಶ್ವಕಪ್‌ನ ಗೋಲ್ಡನ್ ಬಾಲ್ ಅನ್ನು ಭಾರತೀಯ ಬೌಲರ್‌ಗಳು ಗೆಲ್ಲಬಹುದೆಂಬ ನಿರೀಕ್ಷೆಯಿದೆ.   

Written by - Chetana Devarmani | Last Updated : Nov 12, 2023, 07:32 AM IST
  • ಐಸಿಸಿ ಏಕದಿನ ವಿಶ್ವಕಪ್‌ 2023
  • ಕ್ರಿಕೆಟ್ ವಿಶ್ವಕಪ್‌ನ ಗೋಲ್ಡನ್ ಬಾಲ್ ವಿನ್ನರ್‌
  • ಯಾರಾಗಬಹುದು ಗೋಲ್ಡನ್‌ ಬಾಲ್‌ ವಿನ್ನರ್‌?
ಬುಮ್ರಾ, ಶಮಿ, ಕುಲ್ದೀಪ್ ಅಲ್ಲ..‌ ಈ ಆಟಗಾರ ಗೋಲ್ಡನ್ ಬಾಲ್ ಗೆಲ್ಲುವುದು ಖಚಿತ.!  title=
ICC World Cup 2023

Most Wickets in World Cup 2023 : ವಿಶ್ವಕಪ್‌ 2023 ರಲ್ಲಿ ಗೋಲ್ಡನ್‌ ಬಾಲ್‌ ವಿನ್ನರ್‌ ಯಾರಾಗಬಹುದೆಂಬ ಕುತೂಹಲ ಹೆಚ್ಚಾಗಿದೆ. ವಿಶ್ವಕಪ್‌ನ ಗೋಲ್ಡನ್ ಬಾಲ್ ಅನ್ನು ಭಾರತೀಯ ಬೌಲರ್‌ಗಳು ಗೆಲ್ಲಬಹುದೆಂಬ ನಿರೀಕ್ಷೆಯಿದೆ. ಆದರೆ ಈ ಬೌಲರ್‌ ಪ್ರತಿ ಪಂದ್ಯದಲ್ಲೂ ವಿಕೆಟ್ ಪಡೆಯುತ್ತಿದ್ದಾರೆ. 20 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಈಗಾಗಲೇ ಪಡೆದಿದ್ದಾರೆ. ಇದು ಟೀಮ್‌ ಇಂಡಿಯಾ ಬೌಲರ್‌ಗಳಾದ ಬುಮ್ರಾ, ಶಮಿ ಮತ್ತು ಕುಲ್ದೀಪ್ ಗೋಲ್ಡನ್ ಬಾಲ್ ಗೆಲ್ಲುವ ಕನಸಿಗೆ ಅಡ್ಡಲಾಗಿದೆ.  

ಈ ಬಾರಿ ವಿಶ್ವಕಪ್‌ ಭಾರತದಲ್ಲಿ ನಡೆಯುತ್ತಿದೆ. ಭಾರತದ ಪಿಚ್‌ ಗಳು ಬ್ಯಾಟ್ಸ್‌ಮನ್‌ಗಳಿಗೆ ಸಹಾಯಕವಾಗಿವೆ. ಆದರೂ ಅನೇಕ ಬೌಲರ್‌ಗಳು ತಮ್ಮ ಬೌಲಿಂಗ್‌ ಕಲೆಯಿಂದ ಬ್ಯಾಟ್ಸ್‌ಮನ್‌ಗಳಿಗೆ ದುಸ್ವಪ್ನರಾಗಿದ್ದಾರೆ. ಪ್ರಸಕ್ತ ವಿಶ್ವಕಪ್‌ನಲ್ಲಿ ತಮ್ಮ ಬೌಲಿಂಗ್‌ನಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದ ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ಮೂವರು ಬೌಲರ್‌ಗಳು ಸಹ ಸೇರಿದ್ದಾರೆ. 

ಇದನ್ನೂ ಓದಿ : IPL 2024 ರಲ್ಲಿ ಈ ತಂಡಕ್ಕಾಗಿ ಆಡಲಿದ್ದಾರೆ ರಚಿನ್ ರವೀಂದ್ರ.. ಹೊಸ ಇತಿಹಾಸ ಬರೆಯೋದು ಫಿಕ್ಸ್‌!! 

ಟೀಮ್‌ ಇಂಡಿಯಾದ ಬುಮ್ರಾ, ಶಮಿ ಮತ್ತು ಕುಲ್ದೀಪ್ ಆಟ ನೋಡಿದರೆ  ಬಾರಿ ಗೋಲ್ಡನ್ ಬಾಲ್ ಪ್ರಶಸ್ತಿ ಇವರಿಗೆ ಸಿಗಬಹುದೆಂಬ ನಿರೀಕ್ಷೆಯಿದೆ. ಆದರೆ ಆಸ್ಟ್ರೇಲಿಯದ ಸ್ಪಿನ್ನರ್ ಆಡಮ್ ಝಂಪಾ ತಮ್ಮ ಮ್ಯಾಜಿಕಲ್‌ ಸ್ಪಿನ್‌ ಮೂಲಕ ಗೋಲ್ಡನ್ ಬಾಲ್ ಪ್ರಶಸ್ತಿಗೆ ಹತ್ತಿರವಾಗುತ್ತಿದ್ದಾರೆ. 

ಆಸ್ಟ್ರೇಲಿಯದ ಅನುಭವಿ ಸ್ಪಿನ್ನರ್ ಆಡಮ್ ಝಂಪಾ ಪ್ರಸಕ್ತ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಕಾರಣದಿಂದ ಅವರೇ ಗೋಲ್ಡನ್ ಬಾಲ್ ಗೆಲ್ಲಬಹುದು ಎಂದು ಹಲವರು ಊಹಿಸಿದ್ದಾರೆ. ಝಂಪಾ ಇದುವರೆಗೆ 9 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 22 ವಿಕೆಟ್ ಪಡೆದಿದ್ದಾರೆ. ವಿಶ್ವಕಪ್‌ನಲ್ಲಿ ಇನ್ನೂ ಪಂದ್ಯಗಳು ನಡೆಯಲಿರುವ ಕಾರಣ‌ ಈ ಪಟ್ಟಿಯಲ್ಲಿ ಸಾಕಷ್ಟು ಏರಿಳಿತಗಳನ್ನು ಕಾಣುವ ಸಾಧ್ಯತೆಯಿದೆ. 

ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್ ಮತ್ತು ಮೊಹಮ್ಮದ್ ಶಮಿ ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತದ ಪರ ಮೊಹಮ್ಮದ್ ಶಮಿ ಆಡಿದ 4 ಪಂದ್ಯಗಳಲ್ಲಿ 16 ವಿಕೆಟ್ ಪಡೆದಿದ್ದಾರೆ. 8 ಪಂದ್ಯಗಳನ್ನು ಆಡಿರುವ ಬುಮ್ರಾ 15 ಮತ್ತು ಕುಲ್ದೀಪ್ 12 ವಿಕೆಟ್ ಪಡೆದಿದ್ದಾರೆ. ‌ 

ಇದನ್ನೂ ಓದಿ : ಇವರೇ ಟೀಮ್‌ ಇಂಡಿಯಾದ ಮುಂದಿನ ಹಾರ್ದಿಕ್ ಪಾಂಡ್ಯ.. ಭಾರತದ ಆಲ್ ರೌಂಡರ್ ಆಗಿ ಮಿಂಚ್ತಾರಾ ಈ ಯುವ ಆಟಗಾರ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News