ಟೀಂ ಇಂಡಿಯಾದ ಈ ಇಬ್ಬರು ವಿಶ್ವದ ಅತ್ಯಂತ ಶಕ್ತಿಶಾಲಿ ಬೌಲರ್’ಗಳು- ಶೋಯೆಬ್ ಅಖ್ತರ್ ಹೊಗಳಿದ್ದು ಯಾರನ್ನು ಗೊತ್ತಾ?

Shoaib Akhtar Reaction: ಝೀ ನ್ಯೂಸ್‌ನೊಂದಿಗೆ ಮಾತನಾಡಿದ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್, “ವಿಶ್ವಕಪ್‌’ನಲ್ಲಿ ಯಾವುದೇ ಅರ್ಥವಿಲ್ಲ” ಎಂದಿದ್ದಾರೆ.

Written by - Bhavishya Shetty | Last Updated : Nov 1, 2023, 07:08 PM IST
    • ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್
    • ಟೀಂ ಇಂಡಿಯಾದ ಈ ಇಬ್ಬರು ವಿಶ್ವದ ಅತ್ಯಂತ ಶಕ್ತಿಶಾಲಿ ಬೌಲರ್’ಗಳು
    • ಝೀ ನ್ಯೂಸ್‌ನೊಂದಿಗೆ ಮಾತನಾಡಿದ ಪಾಕಿಸ್ತಾನದ ಮಾಜಿ ವೇಗದ ಬೌಲರ್
ಟೀಂ ಇಂಡಿಯಾದ ಈ ಇಬ್ಬರು ವಿಶ್ವದ ಅತ್ಯಂತ ಶಕ್ತಿಶಾಲಿ ಬೌಲರ್’ಗಳು- ಶೋಯೆಬ್ ಅಖ್ತರ್ ಹೊಗಳಿದ್ದು ಯಾರನ್ನು ಗೊತ್ತಾ? title=
Shoaib Akhtar

Shoaib Akhtar Reaction: ವಿಶ್ವಕಪ್ 2023 ಟೂರ್ನಿಯಲ್ಲಿ ಇದುವರೆಗೆ 31 ಪಂದ್ಯಗಳನ್ನು ಆಡಲಾಗಿದೆ. ಅದರಲ್ಲಿ 6 ಪಂದ್ಯಗಳನ್ನು ಭಾರತ ಆಡಿದ್ದು, ಎಲ್ಲಾ ಮ್ಯಾಚ್’ಗಳಲ್ಲಿ ಗೆಲುವು ಸಾಧಿಸಿ, 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ವಿಶ್ವಕಪ್ ಟೂರ್ನಿ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

ಇದನ್ನೂ ಓದಿ: ಎದುರಾಳಿಗೆ ಸಿಂಹಸ್ವಪ್ನವಾದ ಕ್ವಿಂಟನ್ ಡಿ ಕಾಕ್! ವಿಶ್ವಕಪ್’ನಲ್ಲಿ ನಾಲ್ಕು ಶತಕ ಸಿಡಿಸಿ ಇತಿಹಾಸ

ಝೀ ನ್ಯೂಸ್‌ನೊಂದಿಗೆ ಮಾತನಾಡಿದ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್, “ವಿಶ್ವಕಪ್‌’ನಲ್ಲಿ ಯಾವುದೇ ಅರ್ಥವಿಲ್ಲ” ಎಂದಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಭಾರತದ ಬೌಲರ್‌’ಗಳನ್ನು ಶ್ಲಾಘಿಸಿದ ಅಖ್ತರ್, “ಶಮಿ ಮತ್ತು ಬುಮ್ರಾ ಅವರು ವಿಶ್ವದ ಅತ್ಯಂತ ಶಕ್ತಿಶಾಲಿ ಬೌಲರ್‌ಗಳು ಎಂಬುದನ್ನು ತೋರಿಸಿದ್ದಾರೆ. ಬ್ಯಾಟಿಂಗ್ ಉತ್ತಮವಾಗಿತ್ತು. ಆದರೆ ಬೌಲರ್‌ಗಳು ಸಹ ತಮ್ಮ ಪ್ರತಿಭೆಯನ್ನು ತೋರಿಸಿದ್ದರು” ಎಂದು ಕೊಂಡಾಡಿದ್ದಾರೆ.

ಇದನ್ನೂ ಓದಿ: 14 ವರ್ಷಗಳ ಕ್ರಿಕೆಟ್ ಬದುಕು ಅಂತ್ಯ: ವಿಶ್ವಕಪ್ ಮಧ್ಯೆಯೇ ನಿವೃತ್ತಿ ಘೋಷಿಸಿದ 33ರ ಹರೆಯದ ಬೌಲರ್

“ಭಾರತ ತಂಡ ಅತ್ಯಂತ ಕೆಟ್ಟದಾಗಿ ಇಂಗ್ಲೆಂಡ್‌ ತಂಡವನ್ನು ಸೋಲಿಸಿದೆ. ಏಕದಿನ ಕ್ರಿಕೆಟ್‌’ನಲ್ಲಿ ಇಂಗ್ಲೆಂಡ್ ತಂಡ ಟಿ20 ಕ್ರಿಕೆಟ್‌ ಆಡುತ್ತಿದೆ. ಇದೇ ಕಾರಣದಿಂದ ನಿರೀಕ್ಷಿತ ಯಶಸ್ಸು ಪಡೆಯಲು ಸಾಧ್ಯವಾಗುತ್ತಿಲ್ಲ. ಇನಿಂಗ್ಸ್ ಅನ್ನು ಯಾವ ರೀತಿ ಬೆಳೆಸಬೇಕೆಂಬ ಯೋಚನೆಯೇ ಇಲ್ಲ" ಎಂದು ಹೇಳಿಕೆ ನೀಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News