‘ರೋಹಿತ್ ಟಾಸ್ ಆಯ್ಕೆ ಬಗ್ಗೆ ಡೌಟ್ ಇದೆ’- ಟೀಂ ಇಂಡಿಯಾ ನಾಯಕನ ಬಗ್ಗೆ ಲೈವ್ ಟಿವಿಯಲ್ಲೇ ಆರೋಪ ಮಾಡಿದ ಪಾಕ್ ಆಟಗಾರ

sikander bakht statement about rohit sharma: ಕೆಲ ದಿನಗಳ ಹಿಂದೆ ಭಾರತದ ಬೌಲಿಂಗ್ ವೇಳೆ ಚೆಂಡನ್ನು ಬದಲಾಯಿಸಲಾಗುತ್ತಿದೆಯೇನೋ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಹಸನ್ ರಜಾ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಮಾಜಿ ಆಟಗಾರ ಸಿಕಂದರ್ ಭಕ್ತ್ ಕೂಡ ಅಂತಹದ್ದೇ ಮೂರ್ಖ ಹೇಳಿಕೆ ನೀಡಿದ್ದಾರೆ. ರೋಹಿತ್ ಶರ್ಮಾ ಟಾಸ್ ಮಾಡುವ ತಂತ್ರದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ

Written by - Bhavishya Shetty | Last Updated : Nov 16, 2023, 08:20 PM IST
    • 2023ರ ವಿಶ್ವಕಪ್‌’ನ ಸೆಮಿಫೈನಲ್ ಹಂತವನ್ನೂ ತಲುಪಲು ಸಾಧ್ಯವಾಗಲಿಲ್ಲ.
    • ಮಾಜಿ ಆಟಗಾರ ಸಿಕಂದರ್ ಭಕ್ತ್ ಕೂಡ ಅಂತಹದ್ದೇ ಮೂರ್ಖ ಹೇಳಿಕೆ ನೀಡಿದ್ದಾರೆ.
    • ರೋಹಿತ್ ಶರ್ಮಾ ಟಾಸ್ ಮಾಡುವ ತಂತ್ರದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
‘ರೋಹಿತ್ ಟಾಸ್ ಆಯ್ಕೆ ಬಗ್ಗೆ ಡೌಟ್ ಇದೆ’- ಟೀಂ ಇಂಡಿಯಾ ನಾಯಕನ ಬಗ್ಗೆ ಲೈವ್ ಟಿವಿಯಲ್ಲೇ ಆರೋಪ ಮಾಡಿದ ಪಾಕ್ ಆಟಗಾರ title=
sikander bakht statement about rohit sharma

World Cup 2023: ಪಾಕಿಸ್ತಾನ ಕ್ರಿಕೆಟ್ ತಂಡವು 2023ರ ವಿಶ್ವಕಪ್‌’ನ ಸೆಮಿಫೈನಲ್ ಹಂತವನ್ನೂ ತಲುಪಲು ಸಾಧ್ಯವಾಗಲಿಲ್ಲ. ಆದರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ತಮ್ಮ ವಿರೋಧಾತ್ಮಕ ಹೇಳಿಕೆಗಳನ್ನು ಮಾತ್ರ ನೀಡುವುದನ್ನು ನಿಲ್ಲಿಸುತ್ತಿಲ್ಲ.

ಕೆಲ ದಿನಗಳ ಹಿಂದೆ ಭಾರತದ ಬೌಲಿಂಗ್ ವೇಳೆ ಚೆಂಡನ್ನು ಬದಲಾಯಿಸಲಾಗುತ್ತಿದೆಯೇನೋ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಹಸನ್ ರಜಾ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಮಾಜಿ ಆಟಗಾರ ಸಿಕಂದರ್ ಭಕ್ತ್ ಕೂಡ ಅಂತಹದ್ದೇ ಮೂರ್ಖ ಹೇಳಿಕೆ ನೀಡಿದ್ದಾರೆ. ರೋಹಿತ್ ಶರ್ಮಾ ಟಾಸ್ ಮಾಡುವ ತಂತ್ರದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಇದನ್ನೂ ಓದಿ: “ನಾನು ಟೀಂ ಇಂಡಿಯಾದ ಈ ಆಟಗಾರನ ಫ್ಯಾನ್ ಆಗ್ಬಿಟ್ಟೆ”- ಶೋಯೆಬ್ ಅಖ್ತರ್ ಫಿದಾ ಆಗಿದ್ದು ಯಾರಿಗೆ?

ಸಿಕಂದರ್ ಭಕ್ತ್ ತಮ್ಮ ಎಕ್ಸ್ ಹ್ಯಾಂಡಲ್‌’ನಲ್ಲಿ ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಸಹ ಪೋಸ್ಟ್ ಮಾಡಿದ್ದಾರೆ.

ಸಿಕಂದರ್ ಬಖ್ತ್ ಪಾಕಿಸ್ತಾನದ ವಾಹಿನಿಯೊಂದರಲ್ಲಿ ಈ ಅಸಂಬದ್ಧ ಹೇಳಿಕೆ ನೀಡಿದ್ದಾರೆ. “ಟಾಸ್ ಸಮಯದಲ್ಲಿ ರೋಹಿತ್ ಶರ್ಮಾ ಟಾಸ್ ಕಾಯಿನ್ ಅನ್ನು ತುಂಬಾ ದೂರ ಎಸೆಯುತ್ತಾರೆ. ಇದರಿಂದಾಗಿ ಎದುರಾಳಿ ನಾಯಕನಿಗೆ ಅದನ್ನು ನೋಡಲು ಸಾಧ್ಯವಾಗುವುದಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.

ಆದರೆ ಈ ಹೇಳಿಕೆಯನ್ನು ನೀಡುವ ಮೊದಲು, ಟಾಸ್ ಸಮಯದಲ್ಲಿ ಮ್ಯಾಚ್ ರೆಫರಿ ಕೂಡ ಇರುತ್ತಾರೆ ಎಂಬುದನ್ನು ಸಿಕಂದರ್ ಭಕ್ತ್ ಮರೆತಿರುವಂತೆ ತೋಚುತ್ತಿದೆ. ಸಾಮಾನ್ಯವಾಗಿ ಟಾಸ್ ಸಮಯದಲ್ಲಿ, ಟಾಸ್ ಮಾಡಿದ ನಂತರ ನಾಣ್ಯ ಹೆಡ್ ಅಥವಾ ಟೇಲ್’ನ್ನು ಪಡೆಯುತ್ತದೆಯೇ ಎಂದು ನೋಡಲು ಮ್ಯಾಚ್ ರೆಫರಿ ಹೋಗುತ್ತಾರೆ. ಹಾಗಾಗಿ ಸಿಕಂದರ್ ಭಕ್ತ್ ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಟೀಕೆಗೂ ಗುರಿಯಾಗುತ್ತಿದ್ದಾರೆ.

ಸೆಮಿಫೈನಲ್‌’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಜಯಗಳಿಸಿದ ನಂತರ ಸಿಕಂದರ್ ಈ ಹೇಳಿಕೆ ನೀಡಿದ್ದಾರೆ. ಭಾರತ ನಾಲ್ಕನೇ ಬಾರಿ ಫೈನಲ್ ತಲುಪಿರುವುದನ್ನು ಬಹುಶಃ ಈತನಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇನೋ…

ಸಿಕಂದರ್ ಅವರಿಗಿಂತ ಮೊದಲು ಹಸನ್ ರಜಾ ಭಾರತದ ಬೌಲಿಂಗ್ ಸಮಯದಲ್ಲಿ ಚೆಂಡನ್ನು ಬದಲಾಯಿಸಲಾಗುತ್ತಿದೆ ಎಂಬ ಅಸಂಬದ್ಧ ಆರೋಪಗಳನ್ನು ಮಾಡಿದ್ದರು. ಅಷ್ಟೇ ಅಲ್ಲದೆ ಐಸಿಸಿ ಮತ್ತು ಬಿಸಿಸಿಐ ಕೂಟದ ಬಗ್ಗೆಯೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.

ಇದನ್ನೂ ಓದಿ: ಫೈನಲ್’ಗೂ ಮುನ್ನ ಧೋನಿ ದಾಖಲೆ ಮುರಿದ ರೋಹಿತ್ ಶರ್ಮಾ! 20 ವರ್ಷ ಹಳೆಯ ದಾಖಲೆ ಪುಡಿ

ಈ ವಿಷಯದ ಬಗ್ಗೆ ಮೌನ ಮುರಿದಿದ್ದ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ, ಹಸನ್ ರಾಝಾ ಅವರನ್ನು ತೀವ್ರವಾಗಿ ನಿಂದಿಸಿದ್ದರು. “ನಿಮ್ಮ ಆಟದ ಮೇಲೆ ಗಮನ ಹರಿಸಿ, ನಾಚಿಕೆಯಾಗಬೇಕು ನಿಮಗೆ” ಎಂದು ಶಮಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News