ಒಳ್ಳೆಯವರಿಗೆ ನಾವೂ ಒಳ್ಳೆಯವರು, ಟೈಂ ಬಂದಾಗ ಬಡ್ಡಿ ಸಮೇತ ರಿಟರ್ನ್ ಕೊಡ್ತಿರೋದೆ!: ಪಾಕ್ ವಿರುದ್ಧ ಖಡಕ್ ಹೇಳಿಕೆ ಕೊಟ್ಟ ಸೆಹ್ವಾಗ್

Virender Sehwag Statement Against Pakistan: ವೀರೇಂದ್ರ ಸೆಹ್ವಾಗ್, ಕಳೆದ ವರ್ಷ ನವೆಂಬರ್ 10ರ ಫೋಟೋವೊಂದನ್ನು ಸ್ಕ್ರೀನ್‌ ಶಾಟ್ ಮಾಡಿ ಹಂಚಿಕೊಂಡಿದ್ದಾರೆ. ಅದೇ ದಿನ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋತು ಟಿ20 ವಿಶ್ವಕಪ್‌’ನಿಂದ ಹೊರಬಿದ್ದಿತ್ತು. ಆ ಸಮಯದಲ್ಲಿ ಪಾಕಿಸ್ತಾನಿಗಳು ಭಾರತವನ್ನು ಗೇಲಿ ಮಾಡುತ್ತಿದ್ದರು.

Written by - Bhavishya Shetty | Last Updated : Nov 12, 2023, 01:41 PM IST
    • ಭಾರತ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್
    • ಪಾಕಿಸ್ತಾನ ಸೆಮಿಫೈನಲ್ ತಲುಪುವ ಕನಸು ಅಂತ್ಯ
    • ಆದರೆ ಆ ಟ್ವೀಟ್’ನ್ನು ಸೇರಿಸಿ ಹಲವರು ಸೆಹ್ವಾಗ್ ಅವರನ್ನು ಟ್ರೋಲ್ ಮಾಡಿದ್ದರು
ಒಳ್ಳೆಯವರಿಗೆ ನಾವೂ ಒಳ್ಳೆಯವರು, ಟೈಂ ಬಂದಾಗ ಬಡ್ಡಿ ಸಮೇತ ರಿಟರ್ನ್ ಕೊಡ್ತಿರೋದೆ!: ಪಾಕ್ ವಿರುದ್ಧ ಖಡಕ್ ಹೇಳಿಕೆ ಕೊಟ್ಟ ಸೆಹ್ವಾಗ್  title=
Virender Sehwag Statement Against Pakistan

Virender Sehwag Tweet against Pakistan: ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಗೆಲುವಿನ ನಂತರ ಭಾರತ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದರು. ಅದರಲ್ಲಿ “ಪಾಕಿಸ್ತಾನ್ ಜಿಂದಾ ಭಾಗ್. ಸುರಕ್ಷಿತವಾಗಿ ಮನೆಗೆ ಹಿಂತಿರುಗಿ” ಎಂದು ಬರೆದಿದ್ದರು. ಅಂದರೆ ನ್ಯೂಜಿಲೆಂಡ್ ಗೆಲುವಿನಿಂದಾಗಿ ಪಾಕಿಸ್ತಾನ ಸೆಮಿಫೈನಲ್ ತಲುಪುವ ಕನಸು ಅಂತ್ಯಗೊಂಡಿದೆ. ಇದೇ ಕಾರಣದಿಂದ ಪಾಕ್ ಕಾಲೆಳೆದು ಟ್ವೀಟ್ ಮಾಡಿದ್ದಾರೆ.

ಆದರೆ ಆ ಟ್ವೀಟ್’ನ್ನು ಸೇರಿಸಿ ಹಲವರು ಸೆಹ್ವಾಗ್ ಅವರನ್ನು ಟ್ರೋಲ್ ಮಾಡಿದ್ದರು. ಇದಕ್ಕೆ ಸೆಹ್ವಾಗ್ ಸುದೀರ್ಘ ಪೋಸ್ಟ್ ಹಾಕುವ ಮೂಲಕ ಎಲ್ಲರಿಗೂ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ಮೊಹಮ್ಮದ್ ಶಮಿ: ಯಾವೊಬ್ಬ ಬೌಲರ್ ಕೂಡ ಮಾಡಲಾಗದ ಶ್ರೇಷ್ಠ ದಾಖಲೆ ಇದು

ವೀರೇಂದ್ರ ಸೆಹ್ವಾಗ್, ಕಳೆದ ವರ್ಷ ನವೆಂಬರ್ 10ರ ಫೋಟೋವೊಂದನ್ನು ಸ್ಕ್ರೀನ್‌ ಶಾಟ್ ಮಾಡಿ ಹಂಚಿಕೊಂಡಿದ್ದಾರೆ. ಅದೇ ದಿನ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋತು ಟಿ20 ವಿಶ್ವಕಪ್‌’ನಿಂದ ಹೊರಬಿದ್ದಿತ್ತು. ಆ ಸಮಯದಲ್ಲಿ ಪಾಕಿಸ್ತಾನಿಗಳು ಭಾರತವನ್ನು ಗೇಲಿ ಮಾಡುತ್ತಿದ್ದರು.

ಈ ಫೋಟೋದ ಕೆಳಗೆ, “ಪ್ರತಿ ಕ್ರಿಯೆಯು ಸಮಾನ ಮತ್ತು ವಿರುದ್ಧವಾದ ಪ್ರತಿಕ್ರಿಯೆಯನ್ನು ಹೊಂದಿರುತ್ತದೆ. 21 ನೇ ಶತಮಾನದಲ್ಲಿ 6 ಏಕದಿನ ವಿಶ್ವಕಪ್‌’ಗಳು ನಡೆದಿವೆ. 6 ಪ್ರಯತ್ನಗಳಲ್ಲಿ, 2007 ರಲ್ಲಿ ಒಮ್ಮೆ ಮಾತ್ರ ನಾವು ಸೆಮಿಫೈನಲ್‌’ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದೇವೆ. ಅಂದರೆ 6 ವಿಶ್ವಕಪ್‌’ಗಳಲ್ಲಿ 5 ರಲ್ಲಿ ನಾವು ಅರ್ಹತೆ ಪಡೆದಿದ್ದೇವೆ. ಆದರೆ ಪಾಕಿಸ್ತಾನವು 2011ರಲ್ಲಿ 6 ಪ್ರಯತ್ನಗಳಲ್ಲಿ ಒಮ್ಮೆ ಮಾತ್ರ ಸೆಮಿಫೈನಲ್‌’ಗೆ ಅರ್ಹತೆ ಗಳಿಸಿದೆ” ಎಂದು ಬರೆದಿದ್ದಾರೆ.

“ಐಸಿಸಿ ಮತ್ತು ಬಿಸಿಸಿಐ ವಿರುದ್ಧ ಬಾಲ್ ಹಾಗೂ ಪಿಚ್ ಅನ್ನು ಬದಲಾಯಿಸುವಂತಹ ಹಾಸ್ಯಾಸ್ಪದ ಆರೋಪಗಳನ್ನು ಮಾಡಬಹುದು. ಅವರನ್ನು ಸೋಲಿಸಿ, ಬಳಿಕ ನಾವು ಇನ್ನೊಂದು ತಂಡದ ವಿರುದ್ಧ ಸೋತರೆ ಅವರ ಪ್ರಧಾನಿಯೇ ನಮ್ಮನ್ನು ಗೇಲಿ ಮಾಡಬಹುದು. ಪಾಕ್ ಆಟಗಾರರು ನಮ್ಮ ಸೈನಿಕರನ್ನು ಸಹ ತಮಾಷೆ ಮಾಡಬಹುದು!” ಎಂದು ಟ್ರೋಲ್ ಮಾಡಿದವರಿಗೆ ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಟೀಂ ಇಂಡಿಯಾ ದೀಪಾವಳಿ ಸೆಲೆಬ್ರೇಷನ್: ಕಲರ್ಫುಲ್ ಡ್ರೆಸ್’ನಲ್ಲಿ ಆಟಗಾರರು ಮಿಂಚಿಂಗೋ ಮಿಂಚಿಂಗ್! ಫೋಟೋಸ್

“ಯಾರು ಒಳ್ಳೆಯವರೋ ಅವರಿಗೆ ಒಳ್ಳೆಯವರು, ಆದರೆ ಈ ರೀತಿ ವರ್ತಿಸುವವರಿಗೆ ಬಡ್ಡಿ ಸಮೇತ ಕೊಡ್ತಿರೋದೇ… ಪಿಸಿಬಿ ಮುಖ್ಯಸ್ಥರು ನಮ್ಮ ದೇಶವನ್ನು ಶತ್ರು ದೇಶ ಎಂದು ಕ್ಯಾಮರಾದ ಮುಂದೆ ಬಂದು ಹೇಳುತ್ತಾರೆ. ನಮ್ಮ ಜೊತೆ ಚೆನ್ನಾಗಿ ಇರುವವರಿಗೆ ನಾವು ತುಂಬಾ ಒಳ್ಳೆಯವರು ಮತ್ತು ಯಾರಾದರೂ ಈ ರೀತಿ ವರ್ತಿಸಿದರೆ ಅದನ್ನು ಸರಿಯಾದ ಸಮಯದಲ್ಲಿ ಬಡ್ಡಿಯೊಂದಿಗೆ ಹಿಂದಿರುಗಿಸುವುದು ನನ್ನ ಮಾರ್ಗ. ಮೈದಾನದಲ್ಲಾಗಲಿ, ಮೈದಾನದ ಹೊರಗಾಗಲಿ” ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ವೀರೂ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News