ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಹಿಳಾ ಪ್ರೀಮಿಯರ್ ಲೀಗ್ (WPL 2023) ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಾರ್ಚ್ 4 ರಿಂದ ಲೀಗ್ ಆರಂಭವಾಗಲಿದ್ದು, ಈ ಋತುವಿನ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯ ಮಾರ್ಚ್ 26 ರಂದು ನಡೆಯಲಿದೆ. ಈ ಪಂದ್ಯಗಳ ಸಂಪೂರ್ಣ ವೇಳಾ ಪಟ್ಟಿ ಇಲ್ಲಿದೆ.
ಮಹಿಳೆಯರ ಪ್ರೀಮಿಯರ್ ಲೀಗ್ 5 ತಂಡಗಳನ್ನು ಒಳಗೊಂಡಿದೆ :
WPL 2023ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ಸೇರಿ ಐದು ತಂಡಗಳು ಹಣಾ ಹಣಿಯಾಗಲಿವೆ.
ಇದನ್ನೂ ಓದಿ : GameOver: ರೋಹಿತ್ ಶರ್ಮಾ T20 ವೃತ್ತಿಜೀವನ ಎಂಡ್.! Zee N
WPL ಯಾವಾಗ ಪ್ರಾರಂಭವಾಗುತ್ತದೆ? :
ಮಹಿಳೆಯರ ಪ್ರೀಮಿಯರ್ ಲೀಗ್ ಮಾರ್ಚ್ 4 ರಿಂದ ಪ್ರಾರಂಭವಾಗುತ್ತದೆ. ಮಹಿಳೆಯರ ಪ್ರೀಮಿಯರ್ ಲೀಗ್ ನ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ಸೆಣೆಸಲಿವೆ. ಮಹಿಳಾ ಪ್ರೀಮಿಯರ್ ಲೀಗ್ ನ ಫೈನಲ್ ಪಂದ್ಯ ಮಾರ್ಚ್ 26 ರಂದು ನಡೆಯಲಿದೆ. ಈ ಲೀಗ್ ನ ಎಲ್ಲಾ ಪಂದ್ಯಗಳನ್ನು ಮುಂಬೈನ ಎರಡು ಕ್ರೀಡಾಂಗಣಗಳಾದ DY ಪಾಟೀಲ್ ಮತ್ತು ಬ್ರಬೋರ್ನ್ ನಲ್ಲಿ ಆಡಲಾಗುತ್ತದೆ.
ಮಹಿಳೆಯರ ಪ್ರೀಮಿಯರ್ ಲೀಗ್ನಲ್ಲಿ ಒಟ್ಟು ಎಷ್ಟು ಪಂದ್ಯಗಳು ನಡೆಯಲಿವೆ? :
ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಎಲ್ಲಾ 5 ತಂಡಗಳ ನಡುವೆ ಒಟ್ಟು 22 T20 ಪಂದ್ಯಗಳು ನಡೆಯಲಿವೆ. ಇದು 20 ಪಂದ್ಯಗಳ ಲೀಗ್, ಒಂದು ಎಲಿಮಿನೇಟರ್ ಮತ್ತು ಒಂದು ಫೈನಲ್ ಪಂದ್ಯವನ್ನು ಒಳಗೊಂಡಿದೆ. 11 ಪಂದ್ಯಗಳು ಡಿವೈ ಪಾಟೀಲ್ ಮತ್ತು 11 ಪಂದ್ಯಗಳು ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿವೆ.
ಪಂದ್ಯದ ಸಂಪೂರ್ಣ ವೇಳಾ ಪಟ್ಟಿ ಇಲ್ಲಿದೆ :
ಇದನ್ನೂ ಓದಿ : WPL RCB ತಂಡಕ್ಕೆ ಸಾನಿಯಾ ಮಿರ್ಜಾ ಮೆಂಟರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.