ಕೊಹ್ಲಿ 6 ವರ್ಷಗಳಲ್ಲಿ ಪೂರೈಸಿದ ಆ ದಾಖಲೆಯನ್ನ ಜಸ್ಟ್ 7 ತಿಂಗಳಲ್ಲೇ ತಲುಪಿದ ಯಶಸ್ವಿ: ಕ್ರಿಕೆಟ್ ಇತಿಹಾಸದಲ್ಲೇ ಇದು ಶ್ರೇಷ್ಠ ದಾಖಲೆ

IND vs ENG 5th test: 2016-17ರ ಟೆಸ್ಟ್ ಸರಣಿಯಲ್ಲಿ ಕೊಹ್ಲಿ 655 ರನ್ ಗಳಿಸಿದ್ದರು. ಅಚ್ಚರಿ ಏನೆಂದರೆ ಟೆಸ್ಟ್‌’ಗೆ ಪದಾರ್ಪಣೆ ಮಾಡಿದ ನಂತರ ಕೊಹ್ಲಿ ಈ ರನ್ ಗಳಿಸಲು 6 ವರ್ಷಗಳನ್ನು ತೆಗೆದುಕೊಂಡಿದ್ದರು. ಆದರೆ, ಜೈಸ್ವಾಲ್ ಚೊಚ್ಚಲ ಪಂದ್ಯವನ್ನಾಡಿ 7 ತಿಂಗಳಲ್ಲೇ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.

Written by - Bhavishya Shetty | Last Updated : Mar 7, 2024, 05:36 PM IST
    • ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಕೊನೆಯ ಪಂದ್ಯ
    • ವಿರಾಟ್ ಕೊಹ್ಲಿಯ 7 ವರ್ಷಗಳ ಹಳೆಯ ದಾಖಲೆ ಬ್ರೇಕ್
    • ಚೊಚ್ಚಲ ಪಂದ್ಯವನ್ನಾಡಿ 7 ತಿಂಗಳಲ್ಲೇ ಕೊಹ್ಲಿ ದಾಖಲೆ ಮುರಿದ ಜೈಸ್ವಾಲ್
ಕೊಹ್ಲಿ 6 ವರ್ಷಗಳಲ್ಲಿ ಪೂರೈಸಿದ ಆ ದಾಖಲೆಯನ್ನ ಜಸ್ಟ್ 7 ತಿಂಗಳಲ್ಲೇ ತಲುಪಿದ ಯಶಸ್ವಿ: ಕ್ರಿಕೆಟ್ ಇತಿಹಾಸದಲ್ಲೇ ಇದು  ಶ್ರೇಷ್ಠ ದಾಖಲೆ  title=
Yashasvi Jaiswal

IND vs ENG 5th test: ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಕೊನೆಯ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ 1 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಅವರ 7 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಜೊತೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ಕೊಹ್ಲಿ ಹೆಸರಿನಲ್ಲಿತ್ತು.

ಇದನ್ನೂ ಓದಿ: “ನನ್ನ ಬದುಕನ್ನೇ ಹಾಳು ಮಾಡಿದ, ಇದು ಕೊನೆಯ ವಿಡಿಯೋ; ನನ್ನ ಸಾವಿಗೆ ಆತನೇ ಕಾರಣ”- ನಟಿ ವಿಜಯಲಕ್ಷ್ಮಿ

2016-17ರ ಟೆಸ್ಟ್ ಸರಣಿಯಲ್ಲಿ ಕೊಹ್ಲಿ 655 ರನ್ ಗಳಿಸಿದ್ದರು. ಅಚ್ಚರಿ ಏನೆಂದರೆ ಟೆಸ್ಟ್‌’ಗೆ ಪದಾರ್ಪಣೆ ಮಾಡಿದ ನಂತರ ಕೊಹ್ಲಿ ಈ ರನ್ ಗಳಿಸಲು 6 ವರ್ಷಗಳನ್ನು ತೆಗೆದುಕೊಂಡಿದ್ದರು. ಆದರೆ, ಜೈಸ್ವಾಲ್ ಚೊಚ್ಚಲ ಪಂದ್ಯವನ್ನಾಡಿ 7 ತಿಂಗಳಲ್ಲೇ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.

ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಮೊದಲ 3 ಎಸೆತಗಳಲ್ಲಿ 1 ರನ್ ಗಳಿಸುವ ಮೂಲಕ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಯಾವುದೇ ಏಕೈಕ ಟೆಸ್ಟ್ ಸರಣಿಯಲ್ಲಿ ಕೊಹ್ಲಿ 655 ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದರು. ಇದೀಗ ಈ ದಾಖಲೆ ಯಶಸ್ವಿ ಜೈಸ್ವಾಲ್ ಹೆಸರಿನಲ್ಲಿದೆ. ಈ ಪಂದ್ಯಕ್ಕೂ ಮೊದಲು, ಜೈಸ್ವಾಲ್ ಸರಣಿಯಲ್ಲಿ 655 ರನ್ ಗಳಿಸಿದ್ದರು.

ಇಂಗ್ಲೆಂಡ್ ಇನ್ನಿಂಗ್ಸ್ 218 ರನ್‌’ಗೆ ಕೊನೆ:

ಈ ಟೆಸ್ಟ್ ಪಂದ್ಯದ ಮೊದಲ ದಿನದ ಆರಂಭದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ, ಟಾಸ್ ಗೆದ್ದ ತಂಡ ಲಾಭ ಪಡೆಯಲು ಸಾಧ್ಯವಾಗದೆ 218 ರನ್‌ಗಳಿಗೆ ಆಲೌಟ್ ಆಯಿತು. ಕುಲದೀಪ್ ಯಾದವ್ (5 ವಿಕೆಟ್) ಮತ್ತು ರವಿಚಂದ್ರನ್ ಅಶ್ವಿನ್ (4 ವಿಕೆಟ್) ಡೆಡ್ಲಿ ಬೌಲಿಂಗ್ ಮುಂದೆ ಇಂಗ್ಲೆಂಡ್ ಬ್ಯಾಟಿಂಗ್ ಕ್ರಮಾಂಕ ಸೋತಿತ್ತು.

ಕುಲದೀಪ್ 50 ವಿಕೆಟ್ ಸಾಧನೆ:

ಟೀಂ ಇಂಡಿಯಾದ ಲೆಗ್ ಸ್ಪಿನ್ ಬೌಲರ್ ಕುಲದೀಪ್ ಯಾದವ್ ಮೊದಲ ಇನ್ನಿಂಗ್ಸ್’ನಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದಾರೆ. ನಾಯಕ ಬೆನ್ ಸ್ಟೋಕ್ಸ್, ಬೆನ್ ಡಕೆಟ್, ಒಲ್ಲಿ ಪೋಪ್, ಜಾನಿ ಬೈರ್‌ಸ್ಟೋವ್ ಮತ್ತು ಜ್ಯಾಕ್ ಕ್ರಾಲಿ ವಿಕೆಟ್ ಪಡೆದು, ಆಂಗ್ಲರ ಟಾಪ್ ಕ್ರಮಾಂಕವನ್ನೇ ಕೆಡವಿದರು. ಅಂದಹಾಗೆ ಈ ವಿಕೆಟ್‌’ಗಳನ್ನು ಕಬಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌’ನಲ್ಲಿ 50 ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ತೆಂಗಿನೆಣ್ಣೆಗೆ ಈ ಹಣ್ಣಿನ ರಸ ಬೆರೆಸಿ ಹಚ್ಚಿ: ಬಿಳಿಕೂದಲು 10 ನಿಮಿಷದಲ್ಲಿ ಗಾಢ ಕಪ್ಪಾಗಿ ರೇಷ್ಮೆಯಂತೆ ಹೊಳೆಯುತ್ತೆ!

ಬೌಲಿಂಗ್ ವಿಷಯದಲ್ಲಿ 50 ಟೆಸ್ಟ್‌ ವಿಕೆಟ್‌’ಗಳನ್ನು ಪೂರೈಸಿದ ಭಾರತೀಯ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕುಲದೀಪ್ ಯಾದವ್ 1871 ಎಸೆತಗಳಲ್ಲಿ 50 ಟೆಸ್ಟ್ ವಿಕೆಟ್ ಪಡೆದಿದ್ದಾರೆ. ಅಕ್ಷರ್ ಪಟೇಲ್ 2205 ಎಸೆತಗಳಲ್ಲಿ 50 ಟೆಸ್ಟ್ ವಿಕೆಟ್ ಪೂರೈಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News