ಸಿಎಂ ಸಿದ್ದರಾಮಯ್ಯ ಅವರಿಗೆ ಜನವರಿ 2ರವರೆಗೆ ರಜೆ ಬೇಕಂತೆ; ಏಕೆ ಗೊತ್ತಾ?

CM Siddaramaiah: ಸತತವಾಗಿ ಪ್ರವಾಸ ಮಾಡುತ್ತಿರುವ ಮತ್ತು ನಿರಂತರವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಜನವರಿ 2ನೇ ತಾರೀಖಿನವರೆಗೆ ಯಾವುದೇ ಕಾರ್ಯಕ್ರಮಗಳನ್ನು ಇಟ್ಟುಕೊಂಡಿಲ್ಲ.

Written by - Yashaswini V | Last Updated : Dec 30, 2024, 01:20 PM IST
  • ಒಂದು ತಿಂಗಳಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟಿಪಿ (ಟೂರ್ ಪ್ರೋಗ್ರಾಮ್) ನೋಡಿದರೆ ಆಶ್ಚರ್ಯ ಆಗುತ್ತೆ.
  • ಅಷ್ಟೊಂದು ಪ್ರವಾಸ, ಅಷ್ಟೊಂದು ಕಾರ್ಯಕ್ರಮಗಳಿದ್ದವು. ಬೆಳಗಾವಿಯ ವಿಧಾನ ಮಂಡಲದ ಅಧಿವೇಶನದಿಂದ ಹಿಡಿದು ಬ್ಯಾಕ್ ಟು ಬ್ಯಾಕ್ ಬ್ಯುಸಿ ಇದ್ದರು.
  • ಮುಂದೆ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸಬೇಕಿದೆ. ಸಿದ್ದರಾಮಯ್ಯ ಬೇರೆಯವರ ರೀತಿ ಅಲ್ಲ, ಡಿಟೈಲ್ ಆಗಿ ಬಜೆಟ್ ಸಭೆಗಳನ್ನು ಮಾಡುತ್ತಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ  ಜನವರಿ 2ರವರೆಗೆ ರಜೆ ಬೇಕಂತೆ; ಏಕೆ ಗೊತ್ತಾ? title=

CM Siddaramaiah: ಸಿಎಂ ಸಿದ್ದರಾಮಯ್ಯ ಅವರಿಗೆ  ಜನವರಿ 2ರವರೆಗೆ ರಜೆ ಬೇಕಂತೆ ಎಂದು ಕೇಳಿದೊಡನೆ, ಇದೇನಪ್ಪ ಮುಖ್ಯಮಂತ್ರಿಯಾದವರಿಗೆ ರಜೆ ಸೌಲಭ್ಯ ಇರುತ್ತದೆಯಾ? ಅವರು ರಜೆಯನ್ನು ಕೇಳಿ ಪಡೆಯಬೇಕಾಗುತ್ತಾ ಅಂದುಕೊಳ್ಳಬೇಡಿ. ಸತತವಾಗಿ ಪ್ರವಾಸ ಮಾಡುತ್ತಿರುವ ಮತ್ತು ನಿರಂತರವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವೈದ್ಯರು ಸ್ವಲ್ಪ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರಂತೆ. ಹಾಗಾಗಿ ಅವರು ಜನವರಿ 2ನೇ ತಾರೀಖಿನವರೆಗೆ ಯಾವುದೇ ಕಾರ್ಯಕ್ರಮಗಳನ್ನು ಇಟ್ಟುಕೊಂಡಿಲ್ಲ.

ಒಂದು ತಿಂಗಳಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟಿಪಿ (ಟೂರ್ ಪ್ರೋಗ್ರಾಮ್) ನೋಡಿದರೆ ಆಶ್ಚರ್ಯ ಆಗುತ್ತೆ. ಅಷ್ಟೊಂದು ಪ್ರವಾಸ, ಅಷ್ಟೊಂದು ಕಾರ್ಯಕ್ರಮಗಳಿದ್ದವು. ಬೆಳಗಾವಿಯ ವಿಧಾನ ಮಂಡಲದ ಅಧಿವೇಶನದಿಂದ ಹಿಡಿದು ಬ್ಯಾಕ್ ಟು ಬ್ಯಾಕ್ ಜಿಲ್ಲಾ ಪ್ರವಾಸಗಳು ಮತ್ತು ಸಭೆ -ಸಮಾರಂಭಗಳಿದ್ದವು. ನಂತರ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಿಂದ ಹಿಡಿದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನದಿಂದಾಗಿ ದೆಹಲಿ ಪ್ರವಾಸದವರೆಗೆ ಓಡಾಡುತ್ತಲೇ ಇದ್ದರು.

ಇದನ್ನೂ ಓದಿ- ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಕಡಿವಾಣ: ಖಾಸಗಿ ರೆಸಾರ್ಟ್​ಗಳಿಗೆ ಹಲವು ನಿಯಮ ಜಾರಿ

ಇದಲ್ಲದೆ ಮುಂದಕ್ಕೆ ನೋಡುವುದಾದರೆ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸಬೇಕಿದೆ. ಸಿದ್ದರಾಮಯ್ಯ ಬೇರೆಯವರ ರೀತಿ ಬಜೆಟ್ ಪೂರ್ವಸಭೆ ನಡೆಸಲ್ಲ. ಪ್ರತಿ ಇಲಾಖೆಯ ಬಗ್ಗೆಯೂ ಡಿಟೈಲ್ ಆಗಿ ಸಭೆ ನಡೆಸುತ್ತಾರೆ. ಹಣಕಾಸು ಇಲಾಖೆ ಜೊತೆ ಹಲವಾರು ಸುತ್ತಿನ ಸಭೆ ನಡೆಸುತ್ತಾರೆ. ಇದಲ್ಲದೆ ಬೇರೆ ಬೇರೆ ಕ್ಷೇತ್ರದ ಜನರ ಜೊತೆ ಸಮಾಲೋಚನೆ ನಡೆಸುತ್ತಾರೆ. ಹಾಗಾಗಿ ವೈದ್ಯರು ಸಿಎಂ ಸಿದ್ದರಾಮಯ್ಯ ಅವರಿಗೆ ಸ್ವಲ್ಪ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರಂತೆ. 

ಇದನ್ನೂ ಓದಿ- ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆಯಾಗುತ್ತಾ? ದೆಹಲಿ ಭೇಟಿ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ವೈದ್ಯರ ಸಲಹೆಯ ಮೇರೆಗೆ ನಿನ್ನೆಯಿಂದಲೇ (ಭಾನುವಾರ) ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದು, ಜನವರಿ 2ನೇ ತಾರೀಖಿನವರೆಗೂ ಯಾವುದೇ ಅಧಿಕೃತ ಕಾರ್ಯಕ್ರಮಗಳನ್ನು ಇಟ್ಟುಕೊಂಡಿಲ್ಲ. ಹೇಗೂ ಡಾ. ಮನಮೋಹನ್ ಸಿಂಗ್ ನಿಧನದಿಂದ ಶೋಕಾಚರಣೆ ಇರುವುದರಿಂದ ಈ ಸಂದರ್ಭದಲ್ಲಿ ವಿಶ್ರಾಂತಿ ತೆಗೆದುಕೊಂಡು ನಂತರ ಸತತವಾಗಿ ಬಜೆಟ್ ತಯಾರಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News