Cristiano Ronaldo Crying Video: FIFA ವಿಶ್ವಕಪ್ 2022 ರ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ತಂಡ ಸೋಲನ್ನು ಕಂಡು ಹೊರಬಿದ್ದಿದೆ. ಇದು ಫುಟ್ ಬಾಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಅವರ ಅಂತಿಮ ಪಂದ್ಯವಾಗಿದ್ದು, ಸೋಲಿನ ಬಳಿಕ ಕಣ್ಣೀರು ಸುರಿಸುತ್ತಾ ಹೊರಬಂದಿದ್ದಾರೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಫ್ಯಾನ್ಸ್ ಎದೆಗುಂದಿದ್ದಾರೆ.
ಇದನ್ನೂ ಓದಿ: ಕಿಂಗ್ ಕೊಹ್ಲಿ ಶತಕದ ಬರ ನೀಗಿಸಲು ಕನ್ನಡಿಗನ ನಾಯಕತ್ವವೇ ಬೇಕಾಯಿತಾ?
ಮೊರೊಕ್ಕೊ ಪೋರ್ಚುಗಲ್‌ನ ಕನಸನ್ನು ಬ್ರೇಕ್ ಮಾಡಿ ಈ ಜಾಗತಿಕ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಸೋಲಿನ ಬಳಿಕ ಅನುಭವಿ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅಳುತ್ತಾ ಮೈದಾನದಿಂದ ಹೊರ ಬಂದಿದ್ದಾರೆ. ತಮ್ಮ ನೆಚ್ಚಿನ ಆಟಗಾರ ಹೀಗೆ ಎಲ್ಲರ ಮುಂದೆ ಅಳುತ್ತಿರುವುದನ್ನು ಕಂಡು ಅಭಿಮಾನಿಗಳ ಮನವೂ ನಲುಗಿ ಹೋಗಿತ್ತು. ಮೊರಾಕ್ಕೊ ಪಂದ್ಯವನ್ನು 1-0 ಅಂತರದಿಂದ ಗೆದ್ದುಕೊಂಡಿತು.
ಮೊರೊಕನ್ ಸೆಮೀಸ್ ಪ್ರವೇಶ:
ಬಹುನಿರೀಕ್ಷಿತ FIFA ವಿಶ್ವ ಟ್ರೋಫಿಯನ್ನು ಎತ್ತಿಹಿಡಿಯುವ ಗುರಿಯೊಂದಿಗೆ ಪೋರ್ಚುಗಲ್ ಈ ವಿಶ್ವಕಪ್ ಪ್ರವೇಶಿಸಿತ್ತು. ಆದರೆ ಅದರ ಕನಸನ್ನು ಮೊರಾಕೊ ಕ್ವಾರ್ಟರ್ ಫೈನಲ್‌ನಲ್ಲಿ ಭಗ್ನಗೊಳಿಸಿತು. 1-0 ಅಂತರದಲ್ಲಿ ಗೆದ್ದು ಮೊದಲ ಬಾರಿಗೆ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಫಿಫಾ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯಕ್ಕೆ ಪ್ರವೇಶಿಸಿದ ಮೊದಲ ಆಫ್ರಿಕನ್ ದೇಶ ಇದಾಗಿದೆ. ಈ ಸೋಲಿನ ನಂತರ ಕ್ರಿಸ್ಟಿಯಾನೊ ರೊನಾಲ್ಡೊ ಕಣ್ಣಲ್ಲಿ ನೀರು ಬಂದಿತ್ತು.
ಅಂತಿಮ ವಿಶ್ವಕಪ್:
ಮೊರಾಕೊ ವಿರುದ್ಧದ ಗೆಲುವಿನೊಂದಿಗೆ, ರೊನಾಲ್ಡೊ ಅವರ ಮಹತ್ವದ ಟ್ರೋಫಿ ಎತ್ತುವ ಎಲ್ಲಾ ಭರವಸೆಗಳು ಕೊನೆಗೊಂಡವು. ‘CR7’ ಎಂದೇ ಖ್ಯಾತರಾಗಿರುವ ರೊನಾಲ್ಡೊ ನಿವೃತ್ತಿಯ ಯಾವುದೇ ಸೂಚನೆ ನೀಡದಿದ್ದರೂ ಪೋರ್ಚುಗೀಸ್ ಸೂಪರ್ ಸ್ಟಾರ್ ಗೆ ಕತಾರ್ ವಿಶ್ವಕಪ್ ಕೊನೆಯ ವಿಶ್ವಕಪ್ ಆಗುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: FIFA WC 2022: ಪೋರ್ಚುಗಲ್‌ಗೆ ಆಘಾತ ನೀಡಿದ ಮೊರೊಕ್ಕೊ, ರೊನಾಲ್ಡೊ ವಿಶ್ವಕಪ್ ಕನಸು ಭಗ್ನ!
ಕ್ರಿಸ್ಟಿಯಾನೊ ರೊನಾಲ್ಡೊಗೆ ಸತತ ಎರಡನೇ ಪಂದ್ಯದಲ್ಲಿ ಆರಂಭಿಕ ಪ್ಲೇಯಿಂಗ್ XI ನಲ್ಲಿ ಅವಕಾಶ ನೀಡಲಿಲ್ಲ. ಪೋರ್ಚುಗಲ್‌ನ ಮ್ಯಾನೇಜರ್ ಫರ್ನಾಂಡೊ ಸ್ಯಾಂಟೋಸ್, ರೊನಾಲ್ಡೋ ಅವರನ್ನು ಕ್ವಾರ್ಟರ್-ಫೈನಲ್ ಪಂದ್ಯದಲ್ಲೂ ದ್ವಿತೀಯಾರ್ಧದಲ್ಲಿ ಫೀಲ್ಡ್ ಮಾಡಿದರು. ಹಿಂದಿನ ಪಂದ್ಯದಲ್ಲಿ ಅದ್ಭುತ ಹ್ಯಾಟ್ರಿಕ್ ಗಳಿಸಿದ್ದ ಯುವ ಗೊಂಜಾಲೊ ರಾಮೋಸ್‌ಗೆ ಸ್ಯಾಂಟೋಸ್ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ನೀಡಿದರು. ನಂತರ ರೂಬೆನ್ ನೆವೆಸ್ ಬದಲಿಗೆ ರೊನಾಲ್ಡೊ ಅವರನ್ನು ದ್ವಿತೀಯಾರ್ಧದಲ್ಲಿ ಫೀಲ್ಡ್ ಮಾಡಲಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.