ಉತ್ತರ ಪ್ರದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸುವ ಬಗ್ಗೆ ಜೀ ನ್ಯೂಸ್ ಗೆ ಮಾಹಿತಿ ಲಭ್ಯವಾಗಿದೆ. ಅಯೋಧ್ಯೆ ಮತ್ತು ಗೋರಖ್ಪುರದಲ್ಲಿ ಭಯೋತ್ಪಾದಕರು ತಲೆಮರೆಸಿಕೊಂಡಿರುವ ಸಾಧ್ಯತೆ ಇದೆ. ಏಳು ಭಯೋತ್ಪಾದಕರು ಅಡಗಿರುವ ಶಂಕೆ ವ್ಯಕ್ತವಾಗಿದ್ದು ಈ ಗುಂಪಿನಲ್ಲಿ ಐವರು ಭಯೋತ್ಪಾದಕರನ್ನು ಗುರುತಿಸಲಾಗಿದೆ.
ಅಯೋಧ್ಯಾ ಮಧ್ಯಸ್ಥಿಕೆ ಸಮಿತಿ ಸುಪ್ರೀಂ ಕೋರ್ಟ್ನಲ್ಲಿ ಒಪ್ಪಿಗೆ ವರದಿಯನ್ನು ಸಲ್ಲಿಸಿದ್ದು, ಇದರಲ್ಲಿ ವಿವಾದಿತ ಭೂಮಿ ಬದಲಿಗೆ ಬೇರೆಡೆ ಭೂಮಿ ಪಡೆಯಲು ಸುನ್ನಿ ವಕ್ಫ್ ಮಂಡಳಿ ಸಮ್ಮತಿಸಿದೆ. ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ 1947 ರ ಸ್ಥಾನಮಾನವನ್ನು ಕಾಯ್ದುಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ. ಅನೇಕ ಪ್ರಮುಖ ಹಿಂದೂ ಮತ್ತು ಮುಸ್ಲಿಂ ಪಕ್ಷಗಳು ಈ ಚರ್ಚೆಯಲ್ಲಿ ಭಾಗವಹಿಸಲಿಲ್ಲ.
ಮಸೀದಿಯನ್ನು ಬೇರೆಡೆಗೆ ಸ್ಥಳಾಂತರಿಸುವುದಕ್ಕೆ ಇಸ್ಲಾಮ್ ನಲ್ಲಿ ಅವಕಾಶ ಇದೆ ಎಂದು ಅಖಿಲ ಭಾರತದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮೌಲಾನಾ ಸಯ್ಯದ್ ಸಲ್ಮಾನ್ ಹುಸೇನಿ ನದ್ವಿ ಹೇಳಿದ್ದಾರೆ.
ಆಚರಣೆಗಳಿಗೂ ರಾಮಜನ್ಮಭೂಮಿ ವಿವಾದಗಳಿಗೂ ಯಾವುದೇ ಸಂಬಂಧವಿಲ್ಲ. ಅಯೋಧ್ಯೆಯ ಸುಪ್ರಸಿದ್ಧ ಗತಕಾಲದೊಂದಿಗೆ ಸಂಪರ್ಕ ಸಾಧಿಸುವುದು ಹೆಮ್ಮೆಯ ವಿಷಯ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಝೀ ನ್ಯೂಸ್ಗೆ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.