close

News WrapGet Handpicked Stories from our editors directly to your mailbox

ಶ್ರೀರಾಮನ ನಗರದಲ್ಲಿ ಹಿಂದೂ-ಮುಸಲ್ಮಾನ್ ಸಹೋದರತ್ವ; ಸೀತಾ ರಾಮ ಮಂದಿರದಲ್ಲಿ ರೋಜಾ ಇಫ್ತಾರ್

ಶ್ರೀ ಸೀತಾ ರಾಮ ಮಂದಿರದಲ್ಲಿ ರೋಜಾ ಇಫ್ತಾರ್ ಆಯೋಜಿಸಲಾಗಿತ್ತು. ಈ ರೋಜಾ ಇಫ್ತಾರ್ನಲ್ಲಿ ಮುಸ್ಲಿಂ ಸಮುದಾಯದ ಜನರನ್ನು ಹೊರತುಪಡಿಸಿ, ನಗರದ ಕೆಲವು ಸಾಧು-ಸಂತರು ಕೂಡ ಭಾಗಿಯಾಗಿದ್ದರು.

Updated: May 21, 2019 , 10:00 AM IST
ಶ್ರೀರಾಮನ ನಗರದಲ್ಲಿ ಹಿಂದೂ-ಮುಸಲ್ಮಾನ್ ಸಹೋದರತ್ವ; ಸೀತಾ ರಾಮ ಮಂದಿರದಲ್ಲಿ ರೋಜಾ ಇಫ್ತಾರ್

ಅಯೋಧ್ಯಾ: ರಂಜಾನ್ ತಿಂಗಳು ಇಸ್ಲಾಮೀ ಕ್ಯಾಲೆಂಡರಿನ 9ಮೇ ತಿಂಗಳು. ಇಸ್ಲಾಮಿನ ಐದು ಕಡ್ಡಾಯ ರಂಜಾನ್ ತಿಂಗಳ ಉಪವಾಸ ಕೂಡ ಒಂದು. ಈ ಮಾಸದಲ್ಲಿ ಬೆಳಿಗ್ಗೆ ಸೂರ್ಯೋದಯಕ್ಕೆ ಮೊದಲು ಆಹಾರಸೇವನೆ(ಸಹ್ರಿ) ಮುಗಿಸಿ ದಿನವಿಡೀ ಒಂದು ಗುಟುಕು ನೀರನ್ನೂ ಸೇವಿಸದೆ, ಎಲ್ಲಾ ರೀತಿಯ ಮನರಂಜನೆಯನ್ನು ತ್ಯಜಿಸಿ ಸೂರ್ಯಾಸ್ತದ ಬಳಿಕ ಆಹಾರ ಸೇವಿಸುವುದು(ಇಫ್ತಾರ್) ಇಸ್ಲಾಮಿನ ಉಪವಾಸದ ವಿಧಾನ. ಇದೊಂದು ಆಚರಣೆ ಎನ್ನುವುದಕ್ಕಿಂತ ಆರಾಧನೆಯಾಗಿದೆ. ಒಂದು ತಿಂಗಳ ಉಪವಾಸ ವರ್ಷದ ಉಳಿದ ತಿಂಗಳುಗಳ ಜೀವನಕ್ಕೆ ಸ್ಫೂರ್ತಿ ತುಂಬಬಲ್ಲದು ಎಂಬುದು ಅವರ ನಂಬಿಕೆಯಾಗಿದೆ.

ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಅಯೋಧ್ಯೆ ವಿವಾದ ದಶಕಗಳಿಂದ ಬಗೆಹರಿಯದೆ ಉಳಿದಿದೆ. ಅದಾಗ್ಯೂ ಶ್ರೀರಾಮ ಹುಟ್ಟಿದ ನೆಲದಲ್ಲಿ ಅಂದರೆ ಅಯೋಧ್ಯಾದಲ್ಲಿ ಮತ್ತೊಮ್ಮೆ ಹಿಂದೂ-ಮುಸಲ್ಮಾನ್ ಸಹೋದರತ್ವ, ಏಕತೆಯನ್ನು ಬಿಂಬಿಸುವ ಸಾಮುದಾಯಿಕ ಸಾಮರಸ್ಯದ ಉದಾಹರಣೆ ಕಂಡುಬಂದಿದೆ. ಮಾಹಿತಿ ಪ್ರಕಾರ, ಸೀತಾ ರಾಮ ದೇವಾಲಯದಲ್ಲಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಮುಸ್ಲಿಂ ಸಮುದಾಯಕ್ಕೆ ಸಂಘಟಿತ ರೋಜಾ ಇಫ್ತಾರ್ ಆಯೋಜಿಸಲಾಗಿತ್ತು. ಈ ರೋಜಾ ಇಫ್ತಾರ್ನಲ್ಲಿ ಮುಸ್ಲಿಂ ಸಮುದಾಯದ ಜನರನ್ನು ಹೊರತುಪಡಿಸಿ, ನಗರದ ಕೆಲವು ಸಾಧು-ಸಂತರು ಕೂಡ ಭಾಗಿಯಾಗಿದ್ದರು. 

ದೇವಸ್ಥಾನದ ಟ್ರಸ್ಟ್ ವತಿಯಿಂದ ಮೂರನೇ ಬಾರಿಗೆ ರೋಜಾ ಇಫ್ತಾರ್ ಏರ್ಪಡಿಸಲಾಗಿದೆ. ಇದು ಮುಂದೆಯೂ ಹೀಗೆ ಮುಂದುವರೆಯಲಿದೆ ಎಂದು ದೇವಾಲಯದ ಟ್ರಸ್ಟಿಗಳು ಹೇಳಿದ್ದಾರೆ. ನಾವು ಸಾಮುದಾಯಿಕ ಸಾಮರಸ್ಯದ ಉದಾಹರಣೆಗಳನ್ನು ನೀಡಬೇಕು ಮತ್ತು ಪ್ರತಿ ಉತ್ಸವವನ್ನು ಸಂತೋಷಭರಿತ ಆಚರಣೆಯನ್ನು ಒಗ್ಗೂಡಿ ಆಚರಿಸಬೇಕೆಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಧರ್ಮದ ಹೆಸರಿನಲ್ಲಿ ರಾಜಕೀಯ:
ರೋಜಾ ಇಫ್ತಾರ್ಗೆ ಬಂದಿದ್ದ ಮುಜಾಲ್ ಫಿಜಾ ಎಂಬುವವರು ಮಾತನಾಡಿ, ದೇಶದಲ್ಲಿ ಧರ್ಮದ ಹೆಸರಿನಲ್ಲಿ ರಾಜಕೀಯವಿದೆ. ಅಂತಹವರಿಗೆ ಮಹಾಂತ ದಂಪತಿ ಉತ್ತಮ ಉದಾಹರಣೆ, ಅವರು ದೇಶದಲ್ಲಿ ಶಾಂತಿ ಮತ್ತು ಕೋಮು ಸಾಮರಸ್ಯದ ಉದಾಹರಣೆಗಳನ್ನು ನೀಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಅಲ್ಪಸಂಖ್ಯಾತರಾಗಿದ್ದರೂ ನಾವು ಎಂದಿಗೂ ಹೆದರಿಲ್ಲ ಎಂದು ಅವರು ಹೇಳಿದರು.

ರೋಜಾ ಇಫ್ತಾರ್ ಗಾಳಿ ಸಾಧುಗಳು ಮುಸ್ಲಿಮರಿಗೆ ಕರ್ಜೂರದ ಜೊತೆಗೆ ದೇವಾಲಯದ ಪ್ರಸಾದ ಲಡ್ಡುವನ್ನು ಕೂಡ ನೀಡಿದ್ದಾರೆ. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಹಾಜರಿದ್ದ ಎಲ್ಲಾ ಹಿಂದು-ಮುಸ್ಲಿಂ ಮತ್ತು ಸಿಖ್ ಪ್ರತಿನಿಧಿಗಳು ಕೋಮು ಸಾಮರಸ್ಯ ಮತ್ತು ಶಾಂತಿಗಾಗಿ ಶಪಥ ಮಾಡಿದರು.