ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭಾರತದ ಆರ್ಥಿಕತೆಯನ್ನು ಈ ವರ್ಷ ಶೇಕಡಾ 6.1 ಕ್ಕೆ ಇಳಿಸಿದ ನಂತರ ಈಗ ಅದು 2020 ರಲ್ಲಿ ಶೇಕಡಾ 7ಕ್ಕೆ ವೃದ್ದಿಯಾಗುವ ನಿರೀಕ್ಷೆಯಿದೆ ಎಂದು ಐಎಂಎಫ್ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.
"ಕಳೆದ ಐದು ವರ್ಷಗಳಿಂದ ಭಾರತ ಆರ್ಥಿಕತೆ ಶೇಕಡಾ ಏಳು ರಷ್ಟು ಏರಿಕೆಯಾಗುತ್ತಿದೆ ಎಂಬ ಕಾರಣದಿಂದಾಗಿ, ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕ ವ್ಯವಸ್ಥೆಗಳಲ್ಲಿ ಒಂದಾಗಿದೆ" ಎಂದು ಐಎಮ್ಎಫ್ ಕಮ್ಯುನಿಕೇಷನ್ಸ್ ನಿರ್ದೇಶಕ ಗೆರ್ರಿ ರೈಸ್ ಗುರುವಾರ ಹೇಳಿದ್ದಾರೆ.
ಮೈಸೂರು ಮೂಲದ ಹಾರ್ವರ್ಡ್ ಯೂನಿವರ್ಸಿಟಿ ಪ್ರಾಧ್ಯಾಪಕ ಗೀತಾ ಗೋಪಿನಾಥ್ ಅನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ನ ಮುಖ್ಯ ಅರ್ಥಶಾಸ್ತ್ರಜ್ಞರನ್ನಾಗಿ ನೇಮಕ ಮಾಡಲಾಗಿದೆ ಎಂದು ಅಂತರಾಷ್ಟ್ರೀಯ ಸಂಸ್ಥೆ ಟ್ವೀಟ್ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.