ಹಣ ಕೊಟ್ಟ ತಕ್ಷಣ ಬಡತನ ದೂರವಾಗುವುದಿಲ್ಲ. ಕರ್ನಾಟಕದಲ್ಲೂ ಕಡು ಬಡವರು, ಅಸಹಾಯಕರು ಇದ್ದಾರೆ. ಅವರಿಗೆ ಒಳಿತು ಮಾಡುವ ಉದ್ದೇಶವನ್ನು ನಾವು ಹೊಂದಿದ್ದೇವೆ. ಹಾಗಾಗಿ ಬಿಎಸ್ಪಿ ಬಡವರಿಗೆ ಉದ್ಯೋಗ ಕೊಟ್ಟು ಬಡತನ ನಿರ್ಮೂಲನ ಮಾಡುವ ಪಣ ತೊಟ್ಟಿದೆ ಎಂದು ಮಾಯಾವತಿ ಹೇಳಿದರು.
ಒಂದು ವೇಳೆ ಕೇಂದ್ರದಲ್ಲಿ ಸರ್ಕಾರ ರಚಿಸುವ ಅವಕಾಶ ಸಿಕ್ಕರೆ, ಉತ್ತರಪ್ರದೇಶದ ವಿಧಾನವನ್ನು ಅಳವಡಿಸಿಕೊಂಡು ಎಲ್ಲಾ ದೃಷ್ಟಿಕೋನಗಳಿಂದಲೂ ಉತ್ತಮ ಸರ್ಕಾರ ನೀಡುತ್ತೇವೆ ಎಂದು ಮಾಯಾವತಿ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಈಗಾಗಲೇ ಎಸ್ಪಿ-ಬಿಎಸ್ಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಸೀಟು ಹಂಚಿಕೆ ಮಾಡಿಕೊಂಡಿವೆ. ಈ ಪ್ರಕಾರ ಉತ್ತರಪ್ರದೇಶದ 80 ಲೋಕಸಭಾ ಸ್ಥಾನಗಳಲ್ಲಿ ಬಿಎಸ್ಪಿ 38, ಎಸ್ಪಿ 37 ಸ್ಥಾನಗಳನ್ನು ಹಂಚಿಕೊಂಡಿದ್ದು, ಮಥುರಾ, ಮುಜಾಫರ್ ಪುರ ಹಾಗೂ ಬಾಗಪತ್ ಕ್ಷೇತ್ರಗಳನ್ನು ಆರ್ ಎಲ್ ಡಿ ಪಕ್ಷಕ್ಕೆ ಬಿಟ್ಟುಕೊಟ್ಟಿವೆ.
ಲೋಕಸಭೆ ಚುನಾವಣೆಯಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ಮಾಡಿಕೊಂಡಿದ್ದು, ಮೊದಲ ಜಂಟಿ ರ್ಯಾಲಿ ಏಪ್ರಿಲ್ 7ರಂದು ಮುಸ್ಲಿಂ ಸಮುದಾಯದ ಪ್ರಧಾನವಾಗಿರುವ ಸಹರಾನ್ಪುರದ ದೇವಬಂದ್ನಲ್ಲಿ ನಡೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.