ನಿರಂತರ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬಿಹಾರದಲ್ಲಿ ಜನರ ಬದುಕು ಅಕ್ಷರಶಃ ಈಗ ನೀರಿನಲ್ಲಿ ನಿಂತಿದೆ.ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಸೈಕಲ್ ರಿಕ್ಷಾ ಎಳೆಯುವ ವ್ಯಕ್ತಿಯೊಬ್ಬ ನೀರಿನಲ್ಲಿ ಸಿಕ್ಕ ರಿಕ್ಷಾಗೊಸ್ಕರ್ ಕಣ್ಣೀರಿಡುತ್ತಿರುವ ದೃಶ್ಯ ಸೆರೆಯಾಗಿದೆ.
ಶನಿವಾರದಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಬಿಹಾರದ ಮುಜಾಫರ್ಪುರ್ ಜಿಲ್ಲೆ ಕೋರ್ಟ್ ನಲ್ಲಿ ಭಾರತದ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಿದ್ದಕ್ಕಾಗಿ ಮತ್ತು ಪರಮಾಣು ಯುದ್ಧದ ಬೆದರಿಕೆ ಹಾಕಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ.
ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಜನ ಅಧಿಕಾರ ಛತ್ರ ಪರಿಷತ್ ಸದಸ್ಯರು ಶುಕ್ರವಾರದಂದು ಎನ್ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್) ಯಿಂದ ಬಳಲುತ್ತಿರುವ ಮಕ್ಕಳಿಗೆ ಹಣವನ್ನು ಸಂಗ್ರಹಿಸಲು ಶೂ ಗಳನ್ನು ಪಾಲಿಶ್ ಮಾಡಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಕ್ಷದ ಮುಖಂಡರೊಂದಿಗೆ ಕುಳಿತಿದ್ದ ವೇದಿಕೆಯತ್ತ ವ್ಯಕ್ತಿಯೊಬ್ಬ ಚಪ್ಪಲಿಯನ್ನು ಎಸೆದಿದ್ದಿದ್ದಾನೆ.ಆದರೆ ಅದೃಷವಶಾತ್ ಚಪ್ಪಲಿ ವೇದಿಕೆಯವರಿಗೂ ತಲುಪಿಲ್ಲ ಎಂದು ತಿಳಿದು ಬಂದಿದೆ,ವ್ಯಕ್ತಿಯನ್ನು ಪೊಲೀಸರು ಚಂದನ್ ಎಂದು ಗುರಿತಿಸಿದ್ದು ಈಗ ಅವನನ್ನು ಬಂಧಿಸಿದ್ದಾರೆ
2019 ರ ಲೋಕಸಭೆಗೂ ಮುನ್ನ ಬಿಜೆಪಿಗೆ ಬಿಹಾರದಲ್ಲಿ ಭಾರಿ ಹಿನ್ನಡೆಯಾಗಿದೆ. ಬಿಜೆಪಿ ನೀಡಿದ್ದ 20-20 ಸೀಟು ಹಂಚಿಕೆ ಸೂತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮೈತ್ರಿಪಕ್ಷದ ನಾಯಕ ಆರ್ಎಲ್ಎಸ್ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ ""ನಾನು ಕ್ರಿಕೆಟ್ ಆಡುತ್ತಿಲ್ಲ ಮತ್ತು ಈ 20-20 ಸೂತ್ರವನ್ನು ನನಗೆ ಅರ್ಥವಾಗುವುದಿಲ್ಲ. ಬದಲಾಗಿ, ನಾನು 'ಗಿಲ್ಲಿ ದಂಡ' ಆಡಲು ಇಷ್ಟಪಡುತ್ತೇನೆ. " ಎಂದು ವ್ಯಂಗವಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.