Video: ಪ್ರವಾಹದಲ್ಲಿ ಸಿಲುಕಿದ ಸೈಕಲ್ ರಿಕ್ಷಾಗೋಸ್ಕರ ಕಣ್ಣೀರಿಟ್ಟ ವ್ಯಕ್ತಿ

ನಿರಂತರ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬಿಹಾರದಲ್ಲಿ ಜನರ ಬದುಕು ಅಕ್ಷರಶಃ ಈಗ ನೀರಿನಲ್ಲಿ ನಿಂತಿದೆ.ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಸೈಕಲ್ ರಿಕ್ಷಾ ಎಳೆಯುವ ವ್ಯಕ್ತಿಯೊಬ್ಬ ನೀರಿನಲ್ಲಿ ಸಿಕ್ಕ ರಿಕ್ಷಾಗೊಸ್ಕರ್ ಕಣ್ಣೀರಿಡುತ್ತಿರುವ ದೃಶ್ಯ ಸೆರೆಯಾಗಿದೆ.

Last Updated : Sep 30, 2019, 04:32 PM IST
Video: ಪ್ರವಾಹದಲ್ಲಿ ಸಿಲುಕಿದ ಸೈಕಲ್ ರಿಕ್ಷಾಗೋಸ್ಕರ ಕಣ್ಣೀರಿಟ್ಟ ವ್ಯಕ್ತಿ  title=
screen grab

ನವದೆಹಲಿ: ನಿರಂತರ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬಿಹಾರದಲ್ಲಿ ಜನರ ಬದುಕು ಅಕ್ಷರಶಃ ಈಗ ನೀರಿನಲ್ಲಿ ನಿಂತಿದೆ.ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಸೈಕಲ್ ರಿಕ್ಷಾ ಎಳೆಯುವ ವ್ಯಕ್ತಿಯೊಬ್ಬ ನೀರಿನಲ್ಲಿ ಸಿಕ್ಕ ರಿಕ್ಷಾಗೊಸ್ಕರ್ ಕಣ್ಣೀರಿಡುತ್ತಿರುವ ದೃಶ್ಯ ಸೆರೆಯಾಗಿದೆ.

ಅಪಾರ್ಟ್ಮೆಂಟ್ ಬಾಲ್ಕನಿಯಿಂದ ಸೆರೆಹಿಡಿಯಲಾದ ಈ ವಿಡಿಯೋದಲ್ಲಿ ರಿಕ್ಷಾ-ಎಳೆಯುವವರೊಂದಿಗೆ ಇಬ್ಬರು ವ್ಯಕ್ತಿಗಳು ಮಾತುಕತೆ ನಡೆಸುತ್ತಿದ್ದಾರೆ. ರಿಕ್ಷಾ ಎಳೆಯುವ ವ್ಯಕ್ತಿಯು ಪ್ರವಾಹದ ಮಧ್ಯದಲ್ಲೇ ರಿಕ್ಷಾ ಬಿಡುವ ಯೋಚನೆಯಲ್ಲಿದ್ದಾನೆ.

ಈ ಸಂದರ್ಭದಲ್ಲಿ ಕಣ್ಣೀರಿಡುತ್ತಾ ರಿಕ್ಷಾ ಎಳೆಯುವ ವ್ಯಕ್ತಿಯನ್ನು ಸಮಾಧಾನ ಮಾಡಿಸುವ ಮತ್ತು ಅವನಿಗೆ ಸಹಾಯ ಹಸ್ತ ನೀಡಲು ಮಾತನಾಡುತ್ತಿರುವ ದೃಶ್ಯ ಸೆರೆಯಾಗಿದೆ. ಈ ವೀಡಿಯೋದಲ್ಲಿ ರೆಕಾರ್ಡ್ ಮಾಡುವವರು ರಿಕ್ಷಾವನ್ನು ತಮ್ಮ ಮನೆಯ ಬಳಿ ನಿಲ್ಲಿಸುವಂತೆ ಹೇಳುತ್ತಿದ್ದಾರೆ. ಆದರೆ ಆ ವ್ಯಕ್ತಿ ರಿಕ್ಷಾವನ್ನು ಅಲ್ಲಿ ಬಿಡದೆ ಪ್ರವಾಹದಲ್ಲೇ ಎಳೆಯುತ್ತಿರುವ ಪ್ರಯತ್ನ ಮುಂದುವರೆದಿದ್ದಾನೆ. ಅವನ ಜೀವನಕ್ಕೆ ಇದೊಂದೆ ಆಧಾರ ಎಂದು ಆತನು ಹೇಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
 

Trending News