ಪಾಟ್ನಾದಲ್ಲಿ ಯುವಕನಿಂದ ಸಿಎಂ ನಿತೀಶ್ ಕುಮಾರಗೆ ಚಪ್ಪಲಿ ಎಸೆತ!

ಬಿಹಾರ ಮುಖ್ಯಮಂತ್ರಿ  ನಿತೀಶ್ ಕುಮಾರ್ ಪಕ್ಷದ ಮುಖಂಡರೊಂದಿಗೆ ಕುಳಿತಿದ್ದ ವೇದಿಕೆಯತ್ತ ವ್ಯಕ್ತಿಯೊಬ್ಬ ಚಪ್ಪಲಿಯನ್ನು ಎಸೆದಿದ್ದಿದ್ದಾನೆ.ಆದರೆ ಅದೃಷವಶಾತ್ ಚಪ್ಪಲಿ ವೇದಿಕೆಯವರಿಗೂ ತಲುಪಿಲ್ಲ ಎಂದು ತಿಳಿದು ಬಂದಿದೆ,ವ್ಯಕ್ತಿಯನ್ನು ಪೊಲೀಸರು ಚಂದನ್ ಎಂದು ಗುರಿತಿಸಿದ್ದು ಈಗ ಅವನನ್ನು ಬಂಧಿಸಿದ್ದಾರೆ

Updated: Oct 11, 2018 , 05:30 PM IST
ಪಾಟ್ನಾದಲ್ಲಿ ಯುವಕನಿಂದ ಸಿಎಂ ನಿತೀಶ್ ಕುಮಾರಗೆ ಚಪ್ಪಲಿ ಎಸೆತ!

ಪಾಟ್ನಾ: ಬಿಹಾರ ಮುಖ್ಯಮಂತ್ರಿ  ನಿತೀಶ್ ಕುಮಾರ್ ಪಕ್ಷದ ಮುಖಂಡರೊಂದಿಗೆ ಕುಳಿತಿದ್ದ ವೇದಿಕೆಯತ್ತ ವ್ಯಕ್ತಿಯೊಬ್ಬ ಚಪ್ಪಲಿಯನ್ನು ಎಸೆದಿದ್ದಿದ್ದಾನೆ.ಆದರೆ ಅದೃಷವಶಾತ್ ಚಪ್ಪಲಿ ವೇದಿಕೆಯವರಿಗೂ ತಲುಪಿಲ್ಲ ಎಂದು ತಿಳಿದು ಬಂದಿದೆ,ವ್ಯಕ್ತಿಯನ್ನು ಪೊಲೀಸರು ಚಂದನ್ ಎಂದು ಗುರಿತಿಸಿದ್ದು ಈಗ ಅವನನ್ನು ಬಂಧಿಸಿದ್ದಾರೆ

ಈ ಘಟನೆಯು  ಪ್ರಮುಖವಾಗಿ ಜೆಡಿ (ಯು) ಮುಖ್ಯಸ್ಥ ವಶಿಷ್ಠ ನಾರಾಯಣ್ ಸಿಂಗ್ರೊಂದಿಗೆ ವೇದಿಕೆಯ ಮೇಲೆ ಕುಳಿತಾಗ ಘಟನೆಯು ನಡೆದಿದೆ. ಬಾಪು ಸಭಾಗಾರ್ ಆಡಿಟೋರಿಯಂನಲ್ಲಿ  ಲೋಕ ನಾಯಕ  ಜಯಪ್ರಕಾಶ ನಾರಾಯಣ್ ಅವರ ಜನ್ಮ ದಿನದ ಆಚರಣೆ ಸಂದರ್ಭದಲ್ಲಿ ಜೆಡಿ (ಯು) ಸಂಘಟಿಸಿದ 'ಛತ್ರ ಸಮಾಗಂ' (ವಿದ್ಯಾರ್ಥಿಗಳ ಸಭೆ) ಸಂದರ್ಭದಲ್ಲಿ ನಡೆದಿದೆ.

ಚಪ್ಪಲಿ ಎಸೆದಿರುವ ಚಂದನ ಮಾತನಾಡಿ ನಾನು ಮೀಸಲಾತಿಯ ತಾರತಮ್ಯದ ನೀತಿಯ ವಿರುದ್ದವಾಗಿ ಪ್ರತಿಭಟಿಸಲು ಈ ಕ್ರಮ ತೆಗೆದುಕೊಂಡಿದ್ದೇನೆ.ಮೀಸಲಾತಿಯು ಪ.ಜಾತಿ ಪ.ಪ  ಮತ್ತು ಹಿಂದುಳಿದ ವರ್ಗಗಗಳಲ್ಲಿ  ಉತ್ತಮ ಇದ್ದವರಿಗೂ ಸಹ ಅನೂಕೂಲ ಮಾಡುತ್ತದೆ ಎಂದು ಅವರು ಆರೋಪಿಸಿದ್ದಾರೆ.