ಜಾಗತಿಕ ಮಾರುಕಟ್ಟೆಯಲ್ಲಿ ಮಂದಗತಿ ಆರಂಭಿಕ ವಹಿವಾಟಿನಿಂದಾಗಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ 300 ಸೂಚ್ಯಂಕ ಕುಸಿತವಾಗಿದೆ.ನಿಫ್ಟಿ ದಿನದ ಕನಿಷ್ಠ ಮಟ್ಟದಲ್ಲಿ 11,257 ಕ್ಕೆ ಇಳಿದಿದೆ.
ದೇಶೀಯ ಷೇರು ಮಾರುಕಟ್ಟೆಗಳು ಮಂಗಳವಾರ ತೀವ್ರ ನಷ್ಟ ಅನುಭವಿಸಿದ್ದು, ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ ಅಸ್ಥಿರ ವ್ಯಾಪಾರದ ಮಧ್ಯೆ 700ಕ್ಕೂ ಅಧಿಕ ಸೂಚ್ಯಂಕ ನಷ್ಟ ಕಂಡಿದೆ. ಎನ್‌ಎಸ್‌ಇ ನಿಫ್ಟಿ ಮಾನದಂಡವು 213.2 ಪಾಯಿಂಟ್‌ಗಳಷ್ಟು ಕುಸಿದು 11,261.25 ಕ್ಕೆ ತಲುಪಿದೆ.
ಬಾಂಬೆ ಶೇರು ಮಾರುಕಟ್ಟೆ ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನ 140 ಪಾಯಿಂಟ್ ಗಳ ಏರಿಕೆಯನ್ನು ಕಂಡಿದೆ.ಬ್ಯಾಂಕಿಂಗ್ ಹಾಗೂ ಆಟೋದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೇರು ಹರಿದು ಬಂದಿದೆ ಎಂದು ತಿಳಿದುಬಂದಿದೆ.