ಷೇರು ಮಾರುಕಟ್ಟೆಯಲ್ಲಿ 700ಕ್ಕೂ ಅಧಿಕ ಸೂಚ್ಯಂಕ ನಷ್ಟ

ದೇಶೀಯ ಷೇರು ಮಾರುಕಟ್ಟೆಗಳು ಮಂಗಳವಾರ ತೀವ್ರ ನಷ್ಟ ಅನುಭವಿಸಿದ್ದು, ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ ಅಸ್ಥಿರ ವ್ಯಾಪಾರದ ಮಧ್ಯೆ 700ಕ್ಕೂ ಅಧಿಕ ಸೂಚ್ಯಂಕ ನಷ್ಟ  ಕಂಡಿದೆ. ಎನ್‌ಎಸ್‌ಇ ನಿಫ್ಟಿ ಮಾನದಂಡವು 213.2 ಪಾಯಿಂಟ್‌ಗಳಷ್ಟು ಕುಸಿದು 11,261.25 ಕ್ಕೆ ತಲುಪಿದೆ.

Last Updated : Oct 1, 2019, 03:04 PM IST
ಷೇರು ಮಾರುಕಟ್ಟೆಯಲ್ಲಿ 700ಕ್ಕೂ ಅಧಿಕ ಸೂಚ್ಯಂಕ ನಷ್ಟ   title=
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶೀಯ ಷೇರು ಮಾರುಕಟ್ಟೆಗಳು ಮಂಗಳವಾರ ತೀವ್ರ ನಷ್ಟ ಅನುಭವಿಸಿದ್ದು, ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ ಅಸ್ಥಿರ ವ್ಯಾಪಾರದ ಮಧ್ಯೆ 700ಕ್ಕೂ ಅಧಿಕ ಸೂಚ್ಯಂಕ ನಷ್ಟ  ಕಂಡಿದೆ. ಎನ್‌ಎಸ್‌ಇ ನಿಫ್ಟಿ ಮಾನದಂಡವು 213.2 ಪಾಯಿಂಟ್‌ಗಳಷ್ಟು ಕುಸಿದು 11,261.25 ಕ್ಕೆ ತಲುಪಿದೆ.

ಸೆನ್ಸೆಕ್ಸ್ ತನ್ನ ಹಿಂದಿನ ಅಂತ್ಯಕ್ಕೆ  ಹೋಲಿಸಿದಲ್ಲಿ 726.13 ಸೂಚ್ಯಂಕ ನಷ್ಟ ಅನುಭವಿಸಿದ ನಂತರ 37,941.20 ಕ್ಕೆ ಇಳಿದಿದೆ. ಬ್ಯಾಂಕಿಂಗ್ ಮತ್ತು ಲೋಹದ ಷೇರುಗಳ ಮಾರಾಟವು ಮಾರುಕಟ್ಟೆಯಲ್ಲಿ ಗಣನೀಯವಾಗಿ ಕುಸಿತ ಕಂಡಿದೆ. ಈಗ ಮಾರುಕಟ್ಟೆಯಲ್ಲಿ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಮುಂಬರುವ ದ್ವಿ-ಮಾಸಿಕ ಪರಿಶೀಲನೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರವನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಯೆಸ್ ಬ್ಯಾಂಕ್, ಜೀ ಎಂಟರ್‌ಟೈನ್‌ಮೆಂಟ್, ಇಂಡಸ್ಇಂಡ್ ಬ್ಯಾಂಕ್, ಎಸ್‌ಬಿಐ ಮತ್ತು ಗ್ರಾಸಿಮ್ ಸೂಚ್ಯಂಕದಲ್ಲಿ ಹೆಚ್ಚಿನ ಶೇಕಡಾವಾರು ಮಂದಗತಿಯಾಗಿದ್ದು, ಶೇಕಡಾ 5.49 ರಿಂದ 26.09 ರಷ್ಟು ಕಡಿಮೆ ವಹಿವಾಟು ನಡೆಸಿದೆ ಎನ್ನಲಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್, ಎಸ್‌ಬಿಐ, ಇಂಡಸ್ಇಂಡ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಸೆನ್ಸೆಕ್ಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದು, ಸೂಚ್ಯಂಕದಲ್ಲಿ ನಷ್ಟ ಅನುಭವಿಸಿದ ಅಗ್ರ ಕಂಪನಿಗಳಾಗಿವೆ. ಒಟ್ಟಾರೆಯಾಗಿ ಇವು ಸುಮಾರು 300 ಅಂಕಗಳನ್ನು ಕಳೆದುಕೊಂಡಿದೆ ಎನ್ನಲಾಗಿದೆ.

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಕಳೆದ ತಿಂಗಳು ಒಟ್ಟು ದೇಶೀಯ ಮಾರಾಟದಲ್ಲಿ ಶೇ 26.73 ರಷ್ಟು ಕುಸಿತ ಕಂಡಿದ್ದು, ಇದು ಮಾರಾಟ ಕುಸಿತದ ಹನ್ನೊಂದನೇ ತಿಂಗಳಾಗಿದೆ.ಮಾರುತಿ ಸುಜುಕಿ ಷೇರುಗಳು ಮಧ್ಯಾಹ್ನ ವ್ಯಾಪಾರದಲ್ಲಿ ಸಮತಟ್ಟಾಗಿದ್ದವು. 
 

Trending News