ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಸುರಕ್ಷತೆಗೆ ಹಕ್ಕಿಗಳ ಡಿಕ್ಕಿ ಒಂದು ಕಳವಳಕಾರಿ ಅಂಶವಾಗಿದೆ. ಪೈಲಟ್‌ಗಳಿಗೆ ಹಕ್ಕಿಗಳ ಗುಂಪನ್ನು ತಪ್ಪಿಸಿ ಹಾರಾಟ ನಡೆಸಲು ತರಬೇತಿ ನೀಡಲಾಗಿರುತ್ತದೆ. ಅದರೊಡನೆ, ವಿಮಾನಗಳನ್ನೂ ಹಕ್ಕಿಗಳ ದಾಳಿಯಿಂದ ಹೆಚ್ಚು ಅಪಾಯಕ್ಕೆ ಒಳಗಾಗದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ. ಆದರೆ, ಹಕ್ಕಿಗಳು ಡಿಕ್ಕಿ ಹೊಡೆಯುವುದು ಇಂದಿಗೂ ಅಪಾಯಕಾರಿಯಾಗಿದೆ.