Kodimatha Swamiji: ʼದುರ್ಯೋಧನ ಗೆಲ್ಲುತ್ತಾನೆ, ಮುಖ್ಯಮಂತ್ರಿಗಳಿಗೆ ನೋವು ಕೊಟ್ಟಾಗಿದೆ. ಅವರ ಪತ್ನಿ ರಂಗ ಪ್ರವೇಶ ಮಾಡಿಯಾಗಿದೆ. ಈ ಮಹಾಭಾರತದಲ್ಲಿ ಮಹಾರಾಜ ಗೆಲ್ಲುತ್ತಾನೆ. ಆದರೆ ದೈವಬಲ ಈಗ ಇಲ್ಲ. ಇನ್ನೂ ಸ್ವಲ್ಪದಿನ ರಾಜಕೀಯದಲ್ಲಿ ಏರುಪೇರು ನಡೆಯುತ್ತದೆʼ ಅಂತಾ ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ.
Renukaswamy Murder Case: ಪರಪ್ಪನ ಅಗ್ರಹಾರ ಜೈಲಿನ ವಿಷೇಶ ಭದ್ರತಾ ಕೊಠಡಿಯಲ್ಲಿದ್ದ ನಟ ದರ್ಶನ್ಗೆ ಅದೇ ಬ್ಯಾರಕ್ನಲ್ಲಿದ್ದ ಕುಖ್ಯಾತ ರೌಡಿ ವಿಲ್ಸನ್ ಗಾರ್ಡನ್ ನಾಗನ ಪರಿಚಯವಾಗಿತ್ತು. ನಾಗನ ಪರಿಚಯದಿಂದ ದರ್ಶನ್ ಏನೇ ಕೇಳಿದರೂ ಅದನ್ನು ವ್ಯವಸ್ಥೆ ಮಾಡಿಕೊಡುವಷ್ಟು ಸ್ನೇಹ ಬೆಳೆದಿತ್ತು. ಆದರೆ ದರ್ಶನ್ಗೆ ಇದೀಗ ಅದುವೇ ಮುಳುವಾಗಿದೆ.
Renukaswamy Murder Case: ನಟ ದರ್ಶನ್ 3 ತಿಂಗಳಲ್ಲಿ ಜೈಲಿನಿಂದ ಹೊರಗೆ ಬರುತ್ತಾರೆ ಅಂದರೆ ಜೈಲಿನಿಂದ ಬಿಡುಗಡೆಯಾಗುತ್ತಾರಂತೆ. ಬಳಿಕ ʼಡೆವಿಲ್ʼ ಸಿನಿಮಾ ಹಿಟ್ ಆಗುವ ಬಗ್ಗೆಯೂ ಪಾಸಿಟಿವ್ ಉತ್ತರ ಬಂದಿದೆ. ನಟ ದರ್ಶನ ಹೊರಬಂದ ಮೇಲೆ ಹೇಗೆ ಅನ್ನೋ ಪ್ರಶ್ನೆಯನ್ನೂ ಕೇಳಲಾಗಿದೆ. ಇದಕ್ಕೂ ಪಾಸಿಟಿವ್ ಉತ್ತರ ಬಂದಿದೆಯಂತೆ.
ಅಂದು ಸಂಜೆ 4.45ಕ್ಕೆ ಶೆಡ್ಗೆ ಬಂದ ದರ್ಶನ್ ಗೆಳತಿ ಪವಿತ್ರಾಗೌಡ ಸಹ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದಿದ್ದಳಂತೆ. ಈ ವೇಳೆ ರೇಣುಕಾಸ್ವಾಮಿಯಿಂದ ಕ್ಷಮೆ ಕೇಳಿಸಿ, ಪವಿತ್ರಾಳ ಕಾಲಿಗೆ ಬೀಳಿಸಲಾಗಿತ್ತು ಎಂದು ತಿಳಿದುಬಂದಿದೆ. ದರ್ಶನ್ ಅಂಡ್ ಗ್ಯಾಂಗ್ ಪಟ್ಟಣಗೆರೆ ಶೆಡ್ಗೆ ಬಂದು ಹೋಗಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Renukaswamy Murder Case: ಈ ಪ್ರಕರಣದ ಪ್ರಮುಖ ಆರೋಪಿ ದರ್ಶನ್ ಗೆಳತಿ ಪವಿತ್ರಾಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ದೂಡುತ್ತಿದ್ದು, ಕೋರ್ಟ್ ಕೆಲ ದಿನಗಳ ಹಿಂದಷ್ಟೇ ಈಕೆಯ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು.
Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಮತ್ತು ಆತನ ಗೆಳತಿ ಪವಿತ್ರಾಗೌಡ ಸೇರಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಆಗಸ್ಟ್ 28ರವರೆಗೆ ವಿಸ್ತರಿಸಿ 24ನೇ ಎಸಿಎಂಎಂ ಕೋರ್ಟ್ ಬುಧವಾರ ಆದೇಶ ಹೊರಡಿಸಿದೆ.
Renukaswamy Murder Case: ಈ ಪ್ರಕರಣದಲ್ಲಿ ಸಾಕ್ಷಿಯಾಗಿ ಹೇಳಿಕೆ ನೀಡಿರುವವರು ಕೂಡ ದರ್ಶನ್ ಅವರನ್ನು ಭೇಟಿ ಮಾಡಿದ್ದರ ಬಗ್ಗೆ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಸುದ್ದಿಗಾರರ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು ಈ ಬಗ್ಗೆ ಮಹತ್ವದ ಮಾಹಿತಿಯನ್ನು ತಿಳಿಸಿದ್ದಾರೆ.
Mukhyamantri Chandru on Darshan Case: ಹಣ ಸಿಗ್ತಿದ್ದಂತೆ ಮೂಲ ದರ್ಶನ್ ಕಳೆದುಹೋಗಿಬಿಟ್ಟ. ನೇಮು ಫೇಮು ಸಿಕ್ತಿದ್ದಂತೆ, ಫ್ಯಾನ್ಸ್ ಜಾಸ್ತಿಯಾಗಿದ್ದಂತೆ ಮೊದಲಿನ ದರ್ಶನ್ ವರ್ತನೆಯಲ್ಲಿ ಬದಲಾವಣೆಯಾಯಿತು. ಸಹವಾಸ ದೋಷವೂ ಇದಕ್ಕೆ ಮುಖ್ಯ ಕಾರಣ. ಆತ ಮನುಷ್ಯತ್ವವನ್ನು ಕಳೆದುಕೊಳ್ಳುತ್ತ ಹೋದ. ನಡವಳಿಕೆಯಲ್ಲಿ ವ್ಯತ್ಯಾಸ ಆಗ್ತಾ ಹೋಯ್ತು. ಮನುಷ್ಯನಾಗಿದ್ದಿದ್ದರೆ ಆತನಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲವೆಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
Renukaswamy Murder Case: ಜೈಲಿನಲ್ಲಿ ನೀಡುತ್ತಿರುವ ಊಟ ದರ್ಶನ್ಗೆ ಜೀರ್ಣವಾಗುತ್ತಿಲ್ಲವಂತೆ. ಅವರಿಗೆ ಫುಡ್ ಪಾಯಿಸನಿಂಗ್ ಆಗುತ್ತಿದ್ದು, ಭೇದಿ ಕೂಡ ಆಗುತ್ತಿದೆಯಂತೆ. ಅತಿಸಾರ-ಭೇದಿಯಿಂದ ದರ್ಶನ್ ತೂಕ ತುಂಬಾ ಕಡಿಮೆಯಾಗಿದೆ.
Renukaswamy Murder Case: ಬೆಂಗಳೂರು ಪೊಲೀಸ್ ಕಮಿಷನರ್ಗೆ ಬರೆದಿರುವ ಪತ್ರದಲ್ಲಿ ವಿಜಯಲಕ್ಷ್ಮೀ ಅವರು, ʼಪವಿತ್ರಾಗೌಡ ನಟ ದರ್ಶನ್ ಅವರ 2ನೇ ಪತ್ನಿಯಲ್ಲವೆಂದು ಹೇಳಿದ್ದಾರೆ. ಕಾನೂನಿನ ಪ್ರಕಾರ ನಾನು ಮಾತ್ರ ನಟ ದರ್ಶನ್ ಅವರ ಏಕೈಕ ಪತ್ನಿ. 2003ರಲ್ಲಿ ಧರ್ಮಸ್ಥಳದಲ್ಲಿ ನಾನು ಮತ್ತು ದರ್ಶನ್ ಮದುವೆಯಾಗಿದ್ದೆವು ಎಂದು ಹೇಳಿದ್ದಾರೆ.
Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಸ್ಯಾಂಡಲ್ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಪ್ರಕರಣದ A2 ಆರೋಪಿಯಾಗಿರುವ ದರ್ಶನ್ ಸೇರಿದಂತೆ ನಾಲ್ವರಿಗೆ ಜುಲೈ 4ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 24ನೇ ACMM ಕೋರ್ಟ್ ಆದೇಶಿಸಿತ್ತು. ಪ್ರಕರಣದ A1 ಆರೋಪಿ ಪವಿತ್ರಾಗೌಡ ಸೇರಿದಂತೆ ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ.
Renukaswamy Murder Case: ಮಗ ವಿನೀಶ್ನನ್ನು ತಬ್ಬಿಕೊಂಡು ಮುದ್ದಾಡಿದ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಬಳಿ ನಡೆದ ಘಟನೆಯ ಬಗ್ಗೆ ಕೆಲ ವಿಚಾರಗಳನ್ನು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಭಾವುಕರಾಗಿಯೇ ವಿಜಯಲಕ್ಷ್ಮಿಯವರ ಜೊತೆಗೆ ದರ್ಶನ್ ಮಾತಾಡಿದ್ದಾರೆಂದು ಹೇಳಲಾಗಿದೆ.
Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಮ್ಮೆ ಜೈಲು ಪಾಲಾಗಿರುವ ನಟ ದರ್ಶನ್ಗೆ ವಿಚಿತ್ರ ಮಾನಸಿಕ ಕಾಯಿಲೆ ಇದೆ ಎಂದು ಬಿಗ್ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಆರೋಪ ಮಾಡಿದ್ದಾರೆ.
Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ವಿನಯ್, ಪ್ರದೋಶ್ ಮತ್ತು ಧನರಾಜ್ಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ನಟ ದರ್ಶನ್ ತನ್ನ ಬಳಿ ಇಟ್ಟುಕೊಂಡಿದ್ದ 40 ಲಕ್ಷ ರೂ. ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸ್ನೇಹಿತ ಮೋಹನ್ರಾಜ್ ಎಂಬುವರ ಬಳಿ ಈ ಹಣ ಪಡೆದುಕೊಂಡಿದ್ದ ದರ್ಶನ್, ಐಡಿಯಲ್ ಹೋಮ್ಸ್ನ ಮನೆಯಲ್ಲಿಟ್ಟಿದ್ದರಂತೆ.
Renukaswamy Murder Case: ರೇಣುಕಾಸ್ವಾಮಿ ಹತ್ಯೆ ವೇಳೆ ನಟ ದರ್ಶನ್ ಧರಿಸಿದ್ದ ದುಬಾರಿ ಬೆಲೆಯ ಪ್ಯಾಂಟ್, ಟಿ-ಶರ್ಟ್ ಮತ್ತು ಶೂವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ. ದರ್ಶನ್ ಧರಿಸಿದ್ದ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ಗೆ 35 ಸಾವಿರ ರೂ. ಆದರೆ, ಶೂ ಬೆಲೆ 12 ಸಾವಿರ ರೂ. ಮತ್ತು 6,500 ರೂ. ಬೆಲೆಯ ಕಪ್ಪು ಬಣ್ಣದ ಟಿ-ಶರ್ಟ್ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
Renukaswamy Murder Case: ನಟ ದರ್ಶನ್ ಕೂದಲಿನ ಮಾದರಿ ಸಂಗ್ರಹಿಸಲು ಪೊಲೀಸರು ಅವರು ಧರಿಸಿದ್ದ ವಿಗ್ಅನ್ನು ತೆಗೆಸಿದ್ದಾರೆಂದು ವರದಿಯಾಗಿದೆ. ಪೊಲೀಸರು ಆರೋಪಿ ದರ್ಶನ್ ರಕ್ತ ಹಾಗೂ ಕೂದಲಿನ ಸ್ಯಾಂಪಲ್ ಪಡೆದುಕೊಂಡಿದ್ದಾರೆ.
Renukaswamy Murder Case: ತಮ್ಮ ಕುಟುಂಬದ ಬಗ್ಗೆ ಟಿವಿ ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾಗಳು ಮಾನಹಾನಿಕರ ಸುದ್ದಿಗಳನ್ನು ಪ್ರಕಟಿಸದಂತೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.
Renukaswamy Murder Case: ತಾನು ಮಾಡಿದ ಕೃತ್ಯಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸುತ್ತಿರುವ ದರ್ಶನ್, ʼಇಂಡಸ್ಟ್ರಿಯಲ್ಲಿ ಇನ್ಮುಂದೆ ಎಲ್ಲರನ್ನೂ ಹೇಗೆ ಫೇಸ್ ಮಾಡಲಿ? ಅಭಿಮಾನಿಗಳನ್ನು ಹೇಗೆ ಎದುರಿಸಲಿ? ನನ್ನಿಂದ ಇಷ್ಟು ಜನರ ಜೀವನ ಹಾಳಾಯ್ತು. ಒಬ್ಬ ಅಭಿಮಾನಿಯ ಸಾವಿಗೆ ನಾನೇ ಕಾರಣನಾದೆ ಅಂತಾ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರಂತೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.