Renukaswamy Murder Case: ನಟ ದರ್ಶನ್‌ಗೆ ಇದೆಯಂತೆ ವಿಚಿತ್ರ ಮಾನಸಿಕ ಕಾಯಿಲೆ!

Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಮ್ಮೆ ಜೈಲು ಪಾಲಾಗಿರುವ ನಟ ದರ್ಶನ್‌ಗೆ ವಿಚಿತ್ರ ಮಾನಸಿಕ ಕಾಯಿಲೆ ಇದೆ ಎಂದು ಬಿಗ್​ಬಾಸ್ ಕನ್ನಡ ಸೀಸನ್​ 8ರ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರ್ಗಿ ಆರೋಪ ಮಾಡಿದ್ದಾರೆ. 

Written by - Puttaraj K Alur | Last Updated : Jun 22, 2024, 11:49 PM IST
  • ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧ ಮತ್ತೆ ಜೈಲುಪಾಲಾದ ನಟ ದರ್ಶನ್‌
  • ಸ್ಯಾಂಡಲ್‌ವುಡ್‌ ಸ್ಟಾರ್ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಇದೀಗ ಕೈದಿ ನಂಬರ್‌ 6106‌
  • ನಟ ದರ್ಶನ್‌ಗೆ ವಿಚಿತ್ರ ಮಾನಸಿಕ ಕಾಯಿಲೆ ಇದೆ ಎಂದು ಆರೋಪಿಸಿದ ಪ್ರಶಾಂತ್‌ ಸಂಬರ್ಗಿ
Renukaswamy Murder Case: ನಟ ದರ್ಶನ್‌ಗೆ ಇದೆಯಂತೆ ವಿಚಿತ್ರ ಮಾನಸಿಕ ಕಾಯಿಲೆ! title=
ದರ್ಶನ್‌ಗೆ ವಿಚಿತ್ರ ಮಾನಸಿಕ ಕಾಯಿಲೆ?

Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ A2 ಆರೋಪಿಯಾಗಿರುವ ನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತೊಮ್ಮೆ ಜೈಲುಪಾಲಾಗಿದ್ದಾರೆ. ನಟ ದರ್ಶನ್‌, ವಿನಯ್, ಪ್ರದೂಶ್, ಧನರಾಜ್‌ಗೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯವು ಶನಿವಾರ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಜುಲೈ 4ರವರೆಗೂ ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿರಬೇಕಾಗಿದೆ.   

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ವಿಚಾರಣಾಧೀನ ಕೈದಿ ನಂಬರ್‌ 6106 ನೀಡಲಾಗಿದ್ದು, ಭದ್ರತಾ ದೃಷ್ಟಿಯಿಂದ ಜೈಲಿನಲ್ಲಿ ದರ್ಶನ್‌ರನ್ನು ವಿಶೇಷ ಬ್ಯಾರಕ್‌ನಲ್ಲಿರಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ A1 ಆರೋಪಿ ಪವಿತ್ರಾ ಗೌಡ, ದರ್ಶನ್ ಸೇರಿದಂತೆ ೧೭ ಆರೋಪಿಗಳನ್ನು ಜೂನ್‌ 11ರಂದು ಬಂಧಿಸಲಾಗಿತ್ತು. ವಿಚಾರಣೆ ಅಂತ್ಯಗೊಂಡ ನಂತರ ಜೂನ್‌ 20ರಂದು ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಹೆಚ್ಚಿನ ವಿಚಾರಣೆ ಅವಶ್ಯಕತೆ ಇದ್ದ ಕಾರಣ ದರ್ಶನ್‌, ವಿನಯ್, ಪ್ರದೋಶ್ ಹಾಗೂ ಧನರಾಜ್‌ರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಇಂದು ಪೊಲೀಸ್ ಕಸ್ಟಡಿ ಅವಧಿ ಅಂತ್ಯಗೊಂಡ ಕಾರಣ ನಾಲ್ವರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.

ಇದನ್ನೂ ಓದಿ: Darshan Thoogudeepa: ರೇಣುಕಾಸ್ವಾಮಿ ಮೇಲಿನ ಹಲ್ಲೆಯ ದೃಶ್ಯ ಸಿಸಿಟಿವಿ, ಮೊಬೈಲ್ ನಲ್ಲಿ ರೆಕಾರ್ಡ್!

ವಿಚಾರಣೆ ಮುಕ್ತಾಯವಾಗಿದ್ದರಿಂದ ಆರೋಪಿಗಳಿಗೆ ನ್ಯಾಯಾಂಗ ಬಂಧನ ಕೋರಿ ಪೊಲೀಸರು ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಧೀಶರು ನಾಲ್ವರು ಆರೋಪಿಗಳಿಗೆ 13 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದರು. ಹೀಗಾಗಿ ನಟ ದರ್ಶನ್‌ 13 ವರ್ಷಗಳ ಬಳಿಕ ಮತ್ತೆ ಜೈಲು ಪಾಲಾಗಿದ್ದಾರೆ. 

ದರ್ಶನ್‌ಗೆ ಇದೆಯಂತೆ ವಿಚಿತ್ರ ಮಾನಸಿಕ ಕಾಯಿಲೆ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಮ್ಮೆ ಜೈಲು ಪಾಲಾಗಿರುವ ನಟ ದರ್ಶನ್‌ಗೆ ವಿಚಿತ್ರ ಮಾನಸಿಕ ಕಾಯಿಲೆ ಇದೆ ಎಂದು ಬಿಗ್​ಬಾಸ್ ಕನ್ನಡ ಸೀಸನ್​ 8ರ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರ್ಗಿ ಆರೋಪ ಮಾಡಿದ್ದಾರೆ. ಈ ಬಗ್ಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ಅವರು ದರ್ಶನ್‌ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ದರ್ಶನ ಕರ್ಮ ಕಾಂಡ Part 4. ಸೈಕೋ ಮುಲಾಮ್ ರಾಜಾ. ರೇಣುಕಾಸ್ವಾಮಿಗೆ ನ್ಯಾಯ ಸಿಗಲಿ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. 

ಡಿ ಬಾಸ್ IED (Intermittent Explosive Disorder) ಎಂಬ ಮಾನಸಿಕ ಅಸ್ವಸ್ಥತೆಯಿಂದ ಬಳತಾದ್ದಾನೆ. ಕನ್ನಡದಲ್ಲಿ ಈ ಮಾನಸಿಕ ಕಾಯಿಲೆಯನ್ನು ಮರುಕಳಿಸುವ ಸ್ಫೋಟಕ ಅಸ್ವಸ್ಥತೆ ಅಂತ ಕರೀತಾರೆ. ನಿಂದನೀಯ, ಆಕ್ರಮಣಕಾರಿ ಮತ್ತು ಹಿಂಸ್ಮಾಕರಾದ ಪ್ರವೃತಿ ಈ ಕಾಹಿಲೆಯ ಲಕ್ಷಣ. ಇನ್ನು ಈ ಸ್ಥಿತಿನಲ್ಲಿ ಇವನು ಕುಡಿದು ಮಾದಕ ಸೇವನೆ ಮಾಡಿದಾಗ ಈತನ ಕೈಗೆ ಸಿಕಾಡ್ಕೊಂಡ್ಬಿಟ್ರೆ ಶತಕೋಟಿ ದೇವರುಗಳು ಬಡಪಾಯಿಗಳನ್ನು ಉಳಿಸಕ್ಕೆ ಆಗಲ್ಲ. ಫ್ರೆಂಡ್ಸ್ ನೀವು ಗಮನಿಸಿ ಈ ಸೈಕೋ ವ್ಯಕ್ತಿಯ ಎಲ್ಲಾ ಟಿವಿ ಸಂದರ್ಶನಗಳು ಮತ್ತು ಸಾರ್ವಜನಿಕ ಜಾಲತಾಣದಲ್ಲಿ ಲಭ್ಯವಿರುವ ಫೋಟೋಗಳನ್ನು ಸರಿಯಾಗಿ ಗಮನಿಸಿ, ಇವನ ಬಲಗೈನಲ್ಲಿ ಬ್ಯಾಂಡೇಜ್ ಇರತ್ತೆ, ಯಾಕೆ ಅಂದ್ರೆ ಇವನ ಹಿಂದಿನ ರಾತ್ರಿ ಯಾರೋ ಬಡಪಾಯಿಗೆ ಇವನ ವಿಶ್ವರೂಪ ನೋಡಿಸಿರ್ತಾನೆ ಅಂತಾ ಆರೋಪಿಸಿದ್ದಾರೆ.

ಇದನ್ನೂ ಓದಿ: ನಟಿ ಪವಿತ್ರಾ ಗೌಡ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಇವರೇ!? ಈಕೆಗೆ ಮೊದಲ ಸಿನಿಮಾ ಅವಕಾಶ ಸಿಕ್ಕಿದ್ದೇಗೆ ಗೊತ್ತಾ?

ಇವನ ಈ ವಿಚಿತ್ರ ನಡವಳಿಕೆ, ರೌಡಿಸಂ ಕೃತ್ಯಗಳು, ಅನೇಕರ ಮೇಲೆ ಹಲ್ಲೆಗಳು ಎಷ್ಟೋ ಜನರು ನೋಡಿದ್ದಾರೆ. ಈ ಹಿಂಸಾ ಕೃತ್ಯವನ್ನು ಹಲವಾರು ಬಾರಿ ಪೊಲೀಸ್ ದೂರಿನ ಮೂಲಕ ದಾಖಲಿಸಲಾಗಿದೆ ಮತ್ತು ಈ ರಾಕ್ಷಸನಿಂದ ಹಲ್ಲೆ ಮತ್ತು ನಿಂದನೆಗೊಳಗಾದ ಜನರ ಪಟ್ಟಿ ದಿನದಿನಕ್ಕೆ ಹನುಮಂತನ ಬಾಲ ತರ ಬೆಳಿತಾಯಿದೆ. ಇನ್ನೊಂದು ಈ ಸೈಕೋದ ವಿಚಿತ್ರ ನಡವಳಿಕೆ ಗೊತ್ತಾ? ಹೇಳ್ತಿನಿ ಕೇಳಿ... ಮಾಡೋದೆಲ್ಲಾ ಮಾಡ್ಬಿಟ್ಟು ಇವನು ಮರುದಿನ ಬೆಳಗ್ಗೆ ತನ್ನ ಕೊಳಕು ವರ್ತನೆಗೆ ಪಶ್ಚಾತ್ತಾಪ ಮಾಡ್ಕೊಂಡು, ಅವನೇ ಖುದ್ದಾಗಿ ಹಲ್ಲೆ ಮಾಡಿದ ಬಲಿಪಶುವಿಗೆ ಮುಲಾಮು ಹಚ್ತಾನಂತೆ. ಈ ಮುಲಾಮು ರಾಜಾ ಮತ್ತೆ ರಾತ್ರಿಯಲ್ಲಿ ಅದೇ ಕ್ರೂರ ದಾಳಿಯನ್ನು ಪುನರಾವರ್ತಿಸುತ್ತಾನೆ. Dasa is psyco he needs treatment. ಇವಾಗ ನೀವೇ ಹೇಳಿ ಇವನ್ನನ ಬಿಡಬೇಕಾ? ಒಂದ್ angleನಲ್ಲಿ ನೋಡಿದ್ರೆ ಪಾಪ ಅನ್ಸತ್ತೆ. Dasa needs treatment ಅಂತಾ ಸಂಬರ್ಗಿ ಬರೆದುಕೊಂಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News