Renukaswamy Murder Case: ನನಗೆ ಮನೆ ಊಟ ಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್..!

Renukaswamy Murder Case: ಜೈಲಿನಲ್ಲಿ ನೀಡುತ್ತಿರುವ ಊಟ ದರ್ಶನ್‌ಗೆ ಜೀರ್ಣವಾಗುತ್ತಿಲ್ಲವಂತೆ. ಅವರಿಗೆ ಫುಡ್ ಪಾಯಿಸನಿಂಗ್ ಆಗುತ್ತಿದ್ದು, ಭೇದಿ ಕೂಡ ಆಗುತ್ತಿದೆಯಂತೆ. ಅತಿಸಾರ-ಭೇದಿಯಿಂದ ದರ್ಶನ್ ತೂಕ ತುಂಬಾ ಕಡಿಮೆಯಾಗಿದೆ.

Written by - Puttaraj K Alur | Last Updated : Jul 9, 2024, 08:59 PM IST
  • ಜೈಲುವಾಸದಿಂದ ಬಸವಳಿದಿರುವ ದರ್ಶನ್‌ ತಿಂಗಳೊಳಗೆ 10KG ತೂಕ ಕಳೆದುಕೊಂಡಿದ್ದಾರೆ
  • ಜೈಲೂಟ ಸೇರದ ನಟ ದರ್ಶನ್‌ಗೆ ಫುಡ್ ಪಾಯಿಸನಿಂಗ್, ಅತಿಸಾರ-ಭೇದಿಯಾಗುತ್ತಿದೆ
  • ಮನೆಯಿಂದ ಊಟ, ಹಾಸಿಗೆ, ಪುಸ್ತಕ, ಬಟ್ಟೆ, ಚಮಚ ಬೇಕೆಂದು ಕೋರ್ಟ್‌ಗೆ ದರ್ಶನ್ ಬೇಡಿಕೆ
Renukaswamy Murder Case: ನನಗೆ ಮನೆ ಊಟ ಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್..! title=
ಮನೆಯೂಟ ಬೇಕೆಂದ ದರ್ಶನ್!

Renukaswamy Murder Case: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸದ್ಯ ಪರಪ್ಪನ ಅಗ್ರಹಾರದ ಸೆಂಟ್ರಲ್‌ ಜೈಲಿನಲ್ಲಿದ್ದಾರೆ. ಜೈಲುಪಾಲಾಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ, ಆಗಲೇ ಸ್ಯಾಂಡಲ್‌ವುಡ್‌ನ ʼದಾಸʼ ಹೈರಾಣಾಗಿದ್ದಾರೆ. ಜೈಲುವಾಸದಿಂದ ಬಸವಳಿದಿರುವ ದರ್ಶನ್‌ ತಿಂಗಳೊಳಗೆ ಬರೋಬ್ಬರಿ 10KG ದೇಹದ ತೂಕವನ್ನು ಕಳೆದುಕೊಂಡಿದ್ದಾರಂತೆ.

ತೂಕ ಕಳೆದುಕೊಂಡು ಸುಸ್ತಾಗಿರುವ ದರ್ಶನ್‌ಗೆ ಮತ್ತಷ್ಟು ಚಿಂತೆಗೆ ಈಡಾಗಿದ್ದಾರೆ. ತೂಕ ಕಳೆದುಕೊಂಡು ಆತಂಕಕ್ಕೊಳಗಾಗಿರುವ ದರ್ಶನ್ ಇದೇ ವಿಚಾರವಾಗಿ ಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ನನಗೆ ಮನೆಯಿಂದಲೇ ಊಟ ಬೇಕು ಅಂತಾ ಮನವಿ ಮಾಡಿಕೊಂಡಿದ್ದಾರಂತೆ. 

ಇದನ್ನೂ ಓದಿ: ಜೀವನದಲ್ಲಿ ನಾನು ಬಾಸ್ ಎಂದು ಕರೆಯೋದು ಇಬ್ಬರಿಗೆ ಮಾತ್ರ’ : ಸುದೀಪ್‌

ಹೌದು, ನಟ ದರ್ಶನ್‌ ಅವರು ನನಗೆ ಮನೆ ಊಟ, ಬಟ್ಟೆ, ಹಾಸಿಗೆ ಮತ್ತು ಪುಸ್ತಕಗಳು ಬೇಕು ಅಂತಾ ಕೋರಿ ಕೋರ್ಟ್‌ಗೆ ಮನವಿ ಮಾಡಿದ್ದಾರಂತೆ. ಬಾಕ್ಸ್‌ ಆಫೀಸ್‌ ಸುಲ್ತಾನ್‌ ಖ್ಯಾತಿಯ ನಟ ದರ್ಶನ್‌ ಹೊರಗಡೆ ಇದ್ದಾಗ ಐಷಾರಾಮಿ ಜೀವನ ನಡೆಸುತ್ತಿದ್ದರು. ಕೋಟಿ ಕೋಟಿ ಬೆಲೆ ಬಾಳುವ ಕಾರುಗಳಲ್ಲಿ ಓಡಾಡುತ್ತಾ, ಆಗಾಗ ಪಾರ್ಟಿ ಮಾಡಿಕೊಂಡು ಮಸ್ತ್‌ ಮಸ್ತ್‌ ಎಂಜಾಯ್‌ ಮಾಡಿಕೊಂಡಿದ್ದರು. ಆದರೆ ಇದೀಗ ಕೊಲೆ ಕೇಸ್‌ನಲ್ಲಿ ಜೈಲುಪಾಲಾಗಿರುವ ದರ್ಶನ್‌ಗೆ ಕಾರಾಗೃಹದಲ್ಲಿ ಯಾವುದೇ ವ್ಯವಸ್ಥೆಯಿಲ್ಲ. ಹೀಗಾಗಿ ಅವರಿಗೆ ಜೈಲೂಟ ಸೇರುತ್ತಿಲ್ಲ. ಇದೇ ಕಾರಣಕ್ಕೆ ಅವರು ಮಂಕಾಗಿದ್ದು, ಮನೆಯ ಊಟಕ್ಕಾಗಿ ಪರಿತಪಿಸುತ್ತಿದ್ದಾರಂತೆ. ಅವರಿಗೆ ತಮ್ಮ ದೇಹದ ತೂಕ ಇಳಿಕೆ ಆಗುತ್ತಿರುವ ಬಗ್ಗೆ ಭಯ ಉಂಟಾಗಿದೆ ಎನ್ನಲಾಗಿದೆ. 

ಜೈಲಿನಲ್ಲಿ ನೀಡುತ್ತಿರುವ ಊಟ ದರ್ಶನ್‌ಗೆ ಜೀರ್ಣವಾಗುತ್ತಿಲ್ಲವಂತೆ. ಅವರಿಗೆ ಫುಡ್ ಪಾಯಿಸನಿಂಗ್ ಆಗುತ್ತಿದ್ದು, ಭೇದಿ ಕೂಡ ಆಗುತ್ತಿದೆಯಂತೆ. ಅತಿಸಾರ-ಭೇದಿಯಿಂದ ದರ್ಶನ್ ತೂಕ ತುಂಬಾ ಕಡಿಮೆಯಾಗಿದೆ. ಹೀಗಾಗಿ ಮನೆ ಊಟಕ್ಕೆ ಅನುಮತಿ ಕೋರಿದ್ದಕ್ಕೆ ಕೋರ್ಟ್ ಆದೇಶವಿಲ್ಲವೆಂದು ಜೈಲು ಅಧಿಕಾರಿಗಳು ಅನುಮತಿ ನೀಡಿಲ್ಲ ಅಂತಾ ದರ್ಶನ್ ಪರ ವಕೀಲರು ಹೇಳಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿರುವ ದರ್ಶನ್ ಕಳೆದ 16 ದಿನದಲ್ಲಿ ಎಷ್ಟು ಕೆಜಿ ತೂಕ ಕಳೆದುಕೊಂಡಿದ್ದಾರೆ ಗೊತ್ತಾ? ತಿಳಿದ್ರೆ ಪ್ಯಾನ್ಸ್‌ ಶಾಕ್‌ ಆಗ್ತಾರೆ

ತನಗೆ ಊಟ, ಹಾಸಿಗೆ, ಪುಸ್ತಕ, ಬಟ್ಟೆ, ಚಮಚವನ್ನು ಮನೆಯಿಂದ ತರಿಸಿಕೊಳ್ಳಲು ದರ್ಶನ್ ಕೋರ್ಟ್ ಮುಂದೆ ಬೇಡಿಕೆ ಇಟ್ಟಿದ್ದಾರೆ. ಆದರೆ ಇದಕ್ಕೆ ಜೈಲು ಅಧಿಕಾರಿಗಳು ಅನುಮತಿಸಿಲ್ಲ. ಜೈಲು ಅಧಿಕಾರಿಗಳ ನಿರಾಕರಣೆ ಕಾನೂನು ಬಾಹೀರ, ಅಮಾನವೀಯ. ಹೀಗೇ ಮುಂದುವರಿದರೆ ದರ್ಶನ್ ಮತ್ತಷ್ಟು ತೂಕ ಕಳೆದುಕೊಳ್ಳಬಹುದು. ಇದು ದರ್ಶನ್ ಅನಾರೋಗ್ಯಕ್ಕೂ ಕಾರಣವಾಗಬಹುದು. ಮನೆ ಊಟಕ್ಕೆ ಅನುಮತಿ ನೀಡಿದರೆ ಯಾರಿಗೂ ತೊಂದರೆಯಾಗಲ್ಲ. ಹೀಗಾಗಿ ಮನೆ ಊಟ ಪಡೆಯಲು ಅನುಮತಿ ನೀಡಬೇಕು’ ಅಂತಾ ದರ್ಶನ್ ಪರ ವಕೀಲರು ಕೇಳಿಕೊಂಡಿದ್ದಾರಂತೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News