ನಟ ಝೈದ್ ಖಾನ್ ಕನ್ನಡ ಪ್ರೇಮ: ಝೈದ್ ಖಾನ್ ಅವರಿಗೆ ಬಾಲಿವುಡ್ಡಿನಿಂದ ಬಿಗ್ ಆಫರ್ ಒಂದು ಬಂದಿದೆ. ಹಿಂದಿಯ ಖ್ಯಾತ ನಿರ್ದೇಶಕರೋರ್ವರು ಒಂದೊಳ್ಳೆ ಕಥೆ ಹಿಡಿದು ಝೈದ್ ಖಾನ್ ಅವರನ್ನು ಸಂಪರ್ಕಿಸಿದ್ದಾರೆ. ಅದು ದೊಡ್ಡ ಬಜೆಟ್ಟಿನ ಚಿತ್ರ. ಪ್ರಸಿದ್ಧ ನಟಿಯೋರ್ವರು ಅದರಲ್ಲಿ ನಟಿಸಲಿದ್ದಾರಂತೆ. ಈ ಅವಕಾಶವನ್ನು ಝೈದ್ ಸೇರಿದಂತೆ ಯಾವ ನಾಯಕನೂ ನಿರಾಕರಿಸಲು ಸಾಧ್ಯವಿರಲಿಲ್ಲ.
ಝೈದ್ ಖಾನ್ ನಾಯಕನಾಗಿ ನಟಿಸಿರುವ ಚೊಚ್ಚಲ ಸಿನಿಮಾ ಬನಾರಸ್ ಯಶಸ್ವಿಯಾಗಿ ಮೂರನೇ ವಾರದತ್ತ ದಾಪುಗಾಲಿಟ್ಟಿದೆ. ಈಗಲೂ ಅದೇ ಪ್ರೀತಿಯಿಂದ ಪ್ರೇಕ್ಷಕರು ಬನಾರಸ್ ಅನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಇದರೊಂದಿಗೆ ಮೊದಲ ಹೆಜ್ಜೆಯಲ್ಲಿಯೇ ನಾಯಕನಾಗಿ ನೆಲೆ ಕಂಡುಕೊಂಡ ಖುಷಿ ಝೈದ್ ಪಾಲಿಗೆ ದಕ್ಕಿದೆ. ಇದಕ್ಕೆಲ್ಲ ಕಾರಣರಾದ ಸಮಸ್ತ ಕನ್ನಡ ನಾಡಿನ ಜನತೆಗೆ, ಸಹಕಾರ ನೀಡಿದ ಮಾಧ್ಯಮ ಮಿತ್ರರಿಗೆ ಝೈದ್ ಖಾನ್ ಮನಃಪೂರ್ವಕವಾಗಿ ಧನ್ಯವಾದ ಸಲ್ಲಿಸಿದ್ದಾರೆ.
ಮೊದಲ ಸಿನಿಮಾದಲ್ಲಿಯೇ ಝೈದ್ ಖಾನ್ ಅನುಭವಿ ಹೀರೋ ರೀತಿ ನಟಿಸಿದ್ದಾರೆ. ಅವರ ಮತ್ತು ಸೋನಲ್ ಮಂಥೆರೋ ಜೋಡಿ ಚೆನ್ನಾಗಿದೆ. ಸಿನಿಮಾ ಎಲ್ಲಿಯೂ ಬೋರ್ ಆಗಲ್ಲವೆಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಿಜ ಕಣ್ರೀ.. ಡಿ ಬಾಸ್ ದರ್ಶನ್ ಹೇಳಿದಂತೆ ಜಮೀರ್ ಅಹಮದ್ ಅವರ ಪುತ್ರನ ನಟನೆ ಸಖತ್ ಕಿಕ್ಕೇರಿಸಿಬಿಟ್ಟಿದೆ. ಆಕ್ಟಿಂಗ್ ಬಗ್ಗೆ ಏನೂ ಗೊತ್ತಿಲ್ಲದ Zaid Khan ಸೂಪರ್ ಆಗಿ ನಟನೆ ಕಲಿತು ಯಾರಿಗೂ ಕಮ್ಮಿ ಇಲ್ಲ ಅನ್ನೋ ಲೆವೆಲ್ಲಿಗೆ ಮೊದಲ ಸಿನಿಮಾದಲ್ಲಿ ಮಿಂಚಿದ್ದಾರೆ.ಪಟಪಟ ಅಂತ ಪಂಚಿಂಗ್ ಡೈಲಾಗ್ ಹೇಳೋ ಸಿದ್ದಾರ್ಥ್ (Zaid khan) ಎಂಟ್ರಿ ಮಾತ್ರ ಸಿನಿಮಾದಲ್ಲಿ ಜಬರ್ದಸ್ತ್ ಆಗಿದೆ. ಹೀರೋಯಿನ್ ಧನಿ (ಸೋನಲ್) ಯನ್ನ ತಮಾಷೆಗೆ ಪಟಾಯಿಸಲು ಮಾಡಿದ ತುಂಟಾಟ ಹೀರೋ Zaid ಗೆ ದೊಡ್ಡ ತಲೆನೋವಾಗಿ ಕಾಡುತ್ತೆ. ತಂದೆಯ (ದೇವರಾಜ್ )ಮಾತಿನಂತೆ ಆ ಹುಡುಗಿಯನ್ನ ಬೆಂಗಳೂರರಿಂದ ಬನಾರಸ್ ಗೆ ಕ್ಷಮೆ ಕೇಳಲು ಹೊರಟೆಬಿಡ್ತಾನೆ ಸಿದ್ದಾರ್ಥ್ (Zaid Khan). ಆಮೇಲೆ ನಿಜವಾದ ಕಥೆ ಏನೂ ಅನ್ನೋದು ಎಳೆಎಳೆಯಾಗಿ ತೆರೆದುಕೊಳ್ಳುತ್ತಾ ಹೋಗುತ್ತೆ.
Banaras Prerelease Event: ಈಗಾಗಲೇ ತನ್ನ ಸುಂದರ ಹಾಡುಗಳು ಹಾಗೂ ಟ್ರೈಲರ್ ಮೂಲಕ ಜನಪ್ರಿಯವಾಗಿರುವ ಬನಾರಸ್ ಚಿತ್ರದ ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿನೋದ್ ಪ್ರಭಾಕರ್, ನೆನಪಿರಲಿ ಪ್ರೇಮ್, ವಿ.ನಾಗೇಂದ್ರ ಪ್ರಸಾದ್, ನಿರ್ದೇಶಕ ಜಯತೀರ್ಥ ಸೇರಿದಂತೆ ಚಿತ್ರರಂಗದ ಹಲವಾರು ಪ್ರಮುಖರು ಭಾಗವಹಿಸಿದ್ದರು.
ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಮಾಯಾಗಂಗೆ ಎಂಬ ಹಾಡಿನ ಮೋಡಿಗೆ ಸಿಲುಕದವರೇ ಇಲ್ಲ. ಸಾಹಿತ್ಯ, ಸಂಗೀತ, ದೃಶ್ಯೀಕರಣ ಸೇರಿದಂತೆ ಎಲ್ಲದರಲ್ಲಿಯೂ ಸೈ ಅನ್ನಿಸಿಕೊಂಡಿದ್ದ ಮಾಯಾಗಂಗೆ ಈವತ್ತಿಗೂ ಟ್ರೆಂಡಿಂಗ್‌ನಲ್ಲಿದೆ. ಇದೇ ಹೊತ್ತಿನಲ್ಲೀಗ ಲಿರಿಕಲ್ ವೀಡಿಯೋ ಸಾಂಗ್ ಒಂದು ಬಿಡುಗಡೆಗೊಂಡಿದೆ.
ಝೈದ್ ಖಾನ್ ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ ‘ಬನಾರಸ್’ ಈಗಾಗಲೇ ‘ಮಾಯಗಂಗೆ’ ಎಂಬ ಮೋಹಕ ಹಾಡಿನ ಮೂಲಕ ಎಲ್ಲರನ್ನೂ ಆವರಿಸಿಕೊಂಡಿದೆ. ಸಾಮಾನ್ಯವಾಗಿ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆದರೆ, ಚಿತ್ರ ಸಹ ದೊಡ್ಡ ಗೆಲುವು ಸಾಧಿಸುತ್ತದೆ ಎಂಬ ನಂಬಿಕೆ ಚಿತ್ರರಂಗದಲ್ಲಿದೆ. ‘ಬನಾರಸ್’ ವಿಚಾರದಲ್ಲಿ ಅದು ನಿಜವಾಗುವ ಲಕ್ಷಣಗಳು ದಟ್ಟವಾಗಿವೆ. ‘ಬನಾರಸ್’ ಚಿತ್ರವು ಯಾವಾಗ ಬಿಡುಗಡೆಯಾಗಲಿದೆ ಎಂಬ ಪ್ರಶ್ನೆಯೊಂದು ಕಳೆದ ಕೆಲವು ದಿನಗಳಿಂದ ಚಿತ್ರಪ್ರೇಮಿಗಳಲ್ಲಿ ಮನೆಮಾಡಿತ್ತು. ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಇದೇ ನವೆಂಬರ್ ನಾಲ್ಕರಂದು ಚಿತ್ರವು ಜಗತ್ತಿನಾದ್ಯಂತ ಅದ್ದೂರಿಯಾಗಿ ತೆರೆಗಾಣಲಿದೆ.
‘ಸೋಮನಾಥನಿಂದ ಹಿಡಿದು ವಿಶ್ವನಾಥನವರೆಗಿನ ಹನ್ನೆರಡನೆಯ ಜ್ಯೋತಿರ್ಲಿಂಗವನ್ನು ಸ್ಮರಿಸುವುದರಿಂದ ಅದು ಇಡೀ ಭಾರತವನ್ನು ಆವರಿಸಿರುವುದರಿಂದ ಎಲ್ಲ ಕಾರ್ಯಗಳು ನೆರವೇರುತ್ತವೆ’ ಎಂದು ಪ್ರಧಾನಿ ಮೋದಿ ಹೇಳಿದರು.