ಗ್ಯಾರೆಂಟಿ ಯೋಜನೆಗಳ ಜಾರಿಯಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಒಬ್ಬೊಬ್ಬರೇ ಕಾಂಗ್ರೆಸ್ ಶಾಸಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಬಸವರಾಜ ರಾಯರೆಡ್ಡಿ ಅವರು ಬಹಿರಂಗವಾಗಿ ಸತ್ಯ ಹೇಳುವ ಧೈರ್ಯ ತೋರಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ರಾಜಕೀಯದಲ್ಲಿ ಸಿನಿಯರ್ ಜೂನಿಯರ್ ಪ್ರಶ್ನೆ ಬರಲ್ಲ. ಅಡ್ವಾಣಿ ಪಕ್ಷ ಕಟ್ಟಿದರು, ಮೋದಿ ಪ್ರಧಾನಿ ಆದ್ರು. ಬೊಮ್ಮಾಯಿ ಅವರು ಸಿಎಂ ಆದ್ರು, ದೇವೆಗೌಡರ ಕ್ಯಾಬಿನೇಟ್ ನಲ್ಲಿ ಸಚಿವನಾಗಿದ್ದೆ, ಅವರ ಮಗ ನಮಗಿಂತ ಮೊದಲು ಸಿಎಂ ಆದ್ರು. ಸಿದ್ದರಾಮಯ್ಯ ಜೆಡಿಎಸ್ ನಿಂದ ಬಂದು ಸಿಎಂ ಆದ್ರು ಅಂತಾ ಹೇಳಿದೆ ಎಂದು ತಮ್ಮ ಹೇಳಿಕೆಗೆ ಬಸವರಾಜ ರಾಯರೆಡ್ಡಿ ಸ್ಪಷ್ಟನೆ ನೀಡಿದರು.
ನೀವು ಮಂತ್ರಿ ಆಗುವುದು ಯಾವಾಗ ಎಂಬ ಕಾರ್ಯಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ನ ಹಿರಿಯ ಶಾಸಕ ಬಸವರಾಜ್ ರಾಯರೆಡ್ಡಿ, ‘ನೀವು ದುಃಖ ಪಡುವ ಅಗತ್ಯವಿಲ್ಲ. ಒಮ್ಮೊಮ್ಮೆ ಸಚಿವನಾಗಲು ಸಾಧ್ಯವಿಲ್ಲ. ಅದಕ್ಕೂ ಹಣೆಬರಹ ಬೇಕಾಗುತ್ತದೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
ಉದಯಪುರದಲ್ಲಿ ನಡೆದ ಟೈಲರ್ ಹತ್ಯೆಯನ್ನು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಖಂಡಿಸಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಬಸವರಾಜ ರಾಯರೆಡ್ಡಿ, ಧರ್ಮದ ಹೆಸರಲ್ಲಿ ಕೆಲ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ. ನಾನು ವೈಯಕ್ತಿಕವಾಗಿ ಇದನ್ನು ಖಂಡಿಸುತ್ತೇನೆ. ಪ್ರಧಾನಿ ಮೋದಿ ಎಲ್ಲ ಧರ್ಮದ ಸೌಹಾರ್ದತೆ ಸಭೆ ಮಾಡೋ ಅವಶ್ಯಕತೆ ಇದೆ. ಪ್ರಧಾನಿ ಹತ್ಯೆ ಮಾಡ್ತೀನಿ ಅನ್ನೋದು ತಪ್ಪು. ಅವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ರಾಯರೆಡ್ಡಿ ಆಗ್ರಹಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.