ಇಂದು ರಾಜ್ಯದ ಹಲವು ಕಡೆ ಭಾರಿ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲ್ಬರ್ಗಿ ವಿಜಯಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ, ಗ್ರಾಮಾಂತರ, ಹಾಸನ, ಮಂಡ್ಯ, ಮೈಸೂರು, ತುಮಕೂರು, ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಸಿಡೋಣಿ ಗ್ರಾಮದ ಸರ್ಕಾರಿ ಶಾಲೆಯ 239 ಮಕ್ಕಳಿಗೆ ಫಾಲಿಕ್ ಆಸಿಡ್ ಮಾತ್ರೆ ನೀಡಲಾಗಿತ್ತು. ಮಾತ್ರೆ ಸೇವಿಸಿದ ಕೆಲ ಹೊತ್ತಿನಲ್ಲೇ ಕೆಲವು ವಿದ್ಯಾರ್ಥಿಗಳು ಹೊಟ್ಟೆ ನೋವಿನ ಬಗ್ಗೆ ದೂರು ನೀಡಿದ್ದು ಅಸ್ವಸ್ಥಗೊಂಡಿದ್ದರು.
ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ತೊಡಕು ನಿವಾರಣೆ ಆಗಿದೆ ಎಂದು ಬಿಜೆಪಿ ಶಾಸಕ ಅಭಯ ಪಾಟೀಲ್ ಹೇಳಿಕೆ ನೀಡಿದ್ದಾರೆ. ದಶಕಗಳ ಬಳಿಕ ಎಂಇಎಸ್ ಹಿಡಿತದಿಂದ ಪಾಲಿಕೆ ಆಡಳಿತ ಮುಕ್ತ ಆಗಲಿದೆ ಎಂದ ಅಭಯ ಪಾಟೀಲ್, ಈ ಬಾರಿ ಮೇಯರ್ ಕೈಯಿಂದ ಧ್ವಜಾರೋಹಣ ಆಗಲಿದೆ ಅನ್ನೋ ಮೂಲಕ ಶೀಘ್ರ ಮೇಯರ್ ಚುನಾವಣೆ ಆಗಲಿದೆ ಎಂಬ ಸುಳಿವು ನೀಡಿದ್ದಾರೆ.
ಈ ಬಗ್ಗೆ ಮೃತ ಸಂತೋಷ ಪತ್ನಿ ರೇಣುಕಾ ಪಾಟೀಲ್ ಅವರು ರಾಜ್ಯಪಾಲರಿಗೆ ಪತ್ರದ ಮೂಲಕ ಆತ್ಮಹತ್ಯೆ ಪ್ರಕರಣದ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿ, ಈ ಪ್ರಕರಣದ ತನಿಖೆ ಪ್ರಮುಖ ಆರೋಪಿ ಈಶ್ವರಪ್ಪ ನಿರ್ದೇಶನದಂತೆ ನಡೆಯುತ್ತಿದೆಯಂತೆ.
ಸಿದ್ದರಾಮೋತ್ಸವ ಅಭಿಮಾನಿಗಳ ಬ್ಯಾನರ್ನಲ್ಲಿ ನಡೆಯುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.. ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಸಿದ್ದರಾಮೋತ್ಸ ಮೊದಲು ಪಕ್ಷದ ಬದಲಾಗಿ ಅಭಿಮಾನಿ ಸಂಘದಿಂದ ಮಾಡುವ ನಿರ್ಧಾರ ಆಗಿತ್ತು. ಈಗ ಅಧ್ಯಕ್ಷರು ನಾವು ಕೂಡಾ ಪಕ್ಷದಿಂದ ಬೆಂಬಲಿಸುತ್ತೇವೆ ಅಂತಾ ಹೇಳಿದ್ದಾರೆ ಎಂದರು.. ಇದೇ 13 ರಂದು ಬೆಂಗಳೂರಲ್ಲಿ ನಡೆಯೋ ಸಭೆಯಲ್ಲಿ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಯಲಿದೆ ಅಂತಾ ಹೇಳಿದ್ರು.
ಬೆಳಗಾವಿಯ ಮೂಡಲಗಿಯಲ್ಲಿ 7 ಭ್ರೂಣಗಳು ಪತ್ತೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ವಿ. ಕಿವಡಸಣ್ಣವರ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡಿದೆ. ಕಾರ್ಯವೈಖರಿ ಸಮರ್ಪಕವಾಗಿಲ್ಲ ಎಂದು ಡಿಸಿ ನಿತೇಶ ಪಾಟೀಲ್ ಆರೋಗ್ಯ ಇಲಾಖೆಗೆ ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ.ಎ.ವಿ. ಕಿವಡಸಣ್ಣವರ ಅಧಿಕಾರ ಮೊಟಕು ಮಾಡಲಾಗಿದೆ. ಕಿವಡಸಣ್ಣವರ ಜಾಗಕ್ಕೆ ಡಾ.ತುಕ್ಕಾರ್ರನ್ನು ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ.
ಸ್ಮಶಾನಕ್ಕೆ ತೆರಳಲು ದಾರಿ ಇಲ್ಲದಿದ್ದಕ್ಕೆ ಗ್ರಾಮಸ್ಥರ ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆ ಬೆಳಗಾವಿಯ ಏಣಗಿ ಗ್ರಾಮಸ್ಥರಿಂದ ಡಿಸಿ ಕಚೇರಿ ಬಳಿ ಹೋರಾಟ ಮಾಡಲಾಯಿತು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಗ್ರಾಮಸ್ಥರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೂನ್ 20ರ ಬೆಳಗ್ಗೆ 10ಕ್ಕೆ ಬೆಳಗಾವಿ ಕೋಟೆ ಬಳಿ ಜಮಾವಣೆಗೊಳ್ಳುವಂತೆ ಕರೆಯ ವಾಟ್ಸಪ್ ಮೂಲಕ ನೂರಾರು ಯುವಕರಿಂದ ಅನಾಮಧೇಯ ಸಂದೇಶ ಒಂದು ಹರಿದಾಡುತ್ತಿದೆ. ಇದು ಸಧ್ಯ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.