Bramhos Update: ಮುಂದಿನ ಪೀಳಿಗೆಯ ಬ್ರಹ್ಮೋಸ್ ಕ್ಷಿಪಣಿ ಚಿಕ್ಕ ಆವೃತ್ತಿಯದ್ದಾಗಿರಲಿದೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥರು ಹೇಳಿದ್ದಾರೆ. ಈ ಕ್ಷಿಪಣಿಯನ್ನು ಇನ್ಮುಂದೆ ಸಣ್ಣ ವಿಮಾನಗಳಿಂದಲೂ ಹಾರಿಸಬಹುದು ಎಂದು ಅವರು ಹೇಳಿದ್ದಾರೆ. 2020 ರಲ್ಲಿ ಲಡಾಖ್ನಲ್ಲಿ ಚೀನಾದೊಂದಿಗಿನ ಚಕಮಕಿಯ ನಂತರ, ಅದರ ಭಾರಿ ಕೊರತೆ ಅನುಭವಿಸಬೇಕಾಯಿತು ಎಂದು ಅವರು ಹೇಳಿದ್ದಾರೆ, ಬಳಿಕ ಭಾರತೀಯ ವಾಯುಪಡೆಯು ಅದರ ಮೇಲೆ ತನ್ನ ಕೆಲಸ ಆರಂಭಿಸಿತ್ತು.
ಬ್ರಹ್ಮೋಸ್ ಕ್ಷಿಪಣಿಯ ಇತ್ತೀಚಿನ ಆವೃತ್ತಿ ಶಬ್ದದ ವೇಗಕ್ಕಿಂತ ಏಳು ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತದೆ. ಆದ್ದರಿಂದ ಅದರ ಗುರಿಗೆ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬ್ರಹ್ಮೋಸ್ ಭಾರತ ಮತ್ತು ರಷ್ಯಾದ ಜಂಟಿ ಉದ್ಯಮವಾಗಿದ್ದು, ಇದು ಇಂತಹ ಅದ್ಭುತ ಆಯುಧವಾಗಿದ್ದರೂ, ರಷ್ಯನ್ ಸೇನೆ ಇನ್ನೂ ಬ್ರಹ್ಮೋಸ್ ಕ್ಷಿಪಣಿಯನ್ನು ಸೇನೆಗೆ ಸೇರ್ಪಡೆಗೊಳಿಸಿಲ್ಲ. ಪ್ರಸ್ತುತ ಭಾರತ ಮಾತ್ರವೇ ಬ್ರಹ್ಮೋಸ್ ಅನ್ನು ಉಪಯೋಗಿಸುತ್ತಿದೆ. ಯಾಕೆ ಹೀಗೆ? ನಾವು ಬ್ರಹ್ಮೋಸ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತಾ, ಕ್ರೂಸ್ ಕ್ಷಿಪಣಿಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂದು ಗಮನಿಸೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.