ಸೆಪ್ಟೆಂಬರ್ 30, 2021 ರ ವೇಳೆಗೆ, ಎಲ್ಲಾ ಬ್ಯಾಂಕ್ ಗಳೂ ಇಮೇಜ್ ಆಧಾರಿತ ಸಿಟಿಎಸ್ ವ್ಯವಸ್ಥೆಯ ವ್ಯಾಪ್ತಿಗೆ ಬರುವುದು ಅನಿವಾರ್ಯವಾಗಿದೆ. ಎಲ್ಲಾ ಶಾಖೆ ಗಳಲ್ಲು ಸಿಟಿಎಸ್ ಅಳವಡಿಸಿರುವ ಬಗ್ಗೆ ಬ್ಯಾಂಕ್ ಖಚಿತಪಡಿಸಿಕೊಳ್ಳಬೇಕು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಇತ್ತೀಚೆಗೆ ಚೆಕ್ ಕ್ಲಿಯರೆನ್ಸ್ ನಿಯಮಗಳನ್ನು ಬದಲಾಯಿಸಿದೆ, ಇದರ ಅಡಿಯಲ್ಲಿ ಸಿಟಿಎಸ್ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಮತ್ತು ಇದು ಸುಮಾರು 18 ಸಾವಿರ ಬ್ಯಾಂಕ್ ಶಾಖೆಗಳನ್ನು ಒಳಗೊಂಡಿರುತ್ತದೆ. ಸರಳವಾಗಿ ಹೇಳುವುದಾದರೆ ಈಗ ಚೆಕ್ಗಳನ್ನು ಮೊದಲಿಗಿಂತ ಬೇಗನೆ ನಗದು ಮಾಡಲಾಗುತ್ತದೆ.
ಇನ್ನು ಮುಂದೆ ಚೆಕ್ ಕ್ಲಿಯರೆನ್ಸ್ ಗಾಗಿ ಬಹಳ ದಿನ ಕಾಯಬೇಕಿಲ್ಲ. ಅತಿ ಶೀಘ್ರದಲ್ಲೇ ಗ್ರಾಹಕರ ಚೆಕ್ ಗಳು ಕ್ಲಿಯರ್ ಆಗಲಿವೆ. ಚೆಕ್ ಕ್ಲಿಯರೆನ್ಸ್ ನಿಯಮಗಳನ್ನು ಬದಲಾಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.