RBI Update : ಇನ್ನು ಫಟಾಫಟ್ ಆಗುತ್ತೆ ಬ್ಯಾಂಕ್ ಕೆಲಸ, ಯಾವುದೇ ಜಂಜಾಟ ಇರಲ್ಲ..!

ಇನ್ನು ಮುಂದೆ ಚೆಕ್ ಕ್ಲಿಯರೆನ್ಸ್ ಗಾಗಿ ಬಹಳ ದಿನ ಕಾಯಬೇಕಿಲ್ಲ. ಅತಿ ಶೀಘ್ರದಲ್ಲೇ ಗ್ರಾಹಕರ ಚೆಕ್ ಗಳು ಕ್ಲಿಯರ್ ಆಗಲಿವೆ. ಚೆಕ್ ಕ್ಲಿಯರೆನ್ಸ್ ನಿಯಮಗಳನ್ನು ಬದಲಾಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ.  

Written by - Ranjitha R K | Last Updated : Feb 7, 2021, 03:05 PM IST
  • ಇನ್ನು ಮುಂದೆ ಚೆಕ್ ಕ್ಲಿಯರೆನ್ಸ್ ಗಾಗಿ ಬಹಳ ದಿನ ಕಾಯಬೇಕಿಲ್ಲ
  • ಚೆಕ್ ಕ್ಲಿಯರೆನ್ಸ್ ನಿಯಮ ಬದಲಾಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರ
  • ಈ ವರ್ಷದ ಸೆಪ್ಟೆಂಬರ್‌ನಿಂದ ಹೊಸ ನಿಯಮಗಳನ್ನು ಜಾರಿಗೆ
RBI Update :  ಇನ್ನು ಫಟಾಫಟ್ ಆಗುತ್ತೆ ಬ್ಯಾಂಕ್ ಕೆಲಸ, ಯಾವುದೇ ಜಂಜಾಟ ಇರಲ್ಲ..! title=
ಚೆಕ್ ಕ್ಲಿಯರೆನ್ಸ್ ನಿಯಮ ಬದಲಾಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರ (file photo)

ದೆಹಲಿ: ಇನ್ನು ಮುಂದೆ ಚೆಕ್ ಕ್ಲಿಯರೆನ್ಸ್ ಗಾಗಿ ಬಹಳ ದಿನ ಕಾಯಬೇಕಿಲ್ಲ. ಅತಿ ಶೀಘ್ರದಲ್ಲೇ ಗ್ರಾಹಕರ ಚೆಕ್ ಗಳು ಕ್ಲಿಯರ್ ಆಗಲಿವೆ. ಚೆಕ್ ಕ್ಲಿಯರೆನ್ಸ್ ನಿಯಮಗಳನ್ನು ಬದಲಾಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಹೊಸ ನಿಯಮ ಜಾರಿಯಾದರೆ, ಚೆಕ್ ಮೊದಲಿಗಿಂತ ವೇಗವಾಗಿ  ಕ್ಲಿಯರ್ ಆಗಲಿದೆ. ಮಾಹಿತಿಯ ಪ್ರಕಾರ, ಈ ವರ್ಷದ ಸೆಪ್ಟೆಂಬರ್‌ನಿಂದ ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದು.

ನಗದು ಪಾವತಿ ಮತ್ತು ಸೆಟಲ್ ಮೆಂಟ್ ಸಿಸ್ಟಮ್ ಅನ್ನು ಇನ್ನೂ ಹೆಚ್ಚು ಉತ್ತಮಗೊಳಿಸುವ ನಿಟ್ಟಿನಲ್ಲಿ ಉಳಿದ 18,000 ಶಾಖೆಗಳನ್ನು ಅಪ್ ಡೆಟ್ ಮಾಡಲು  ಆರ್‌ಬಿಐ ನಿರ್ಧರಿಸಿದೆ. Cheque Truncation System (CTS)ಅನ್ನು ಎಲ್ಲಾ ಬ್ಯಾಂಕುಗಳಲ್ಲೂ ಜಾರಿಗೆ ತರಲಾಗುವುದು. ಸೆಪ್ಟಂಬರ್ ತಿಂಗಳ ಒಳಗೆ ಎಲ್ಲಾ ಬ್ಯಾಂಕುಗಳಲ್ಲಿ ಸಿಟಿಎಸ್ ಅನ್ನು ಜಾರಿಗೆ ತರಲು ಆರ್ ಬಿಐ (RBI) ನಿರ್ಧರಿಸಿದೆ. ಸಿಟಿಎಸ್ ಅನ್ನು 2010 ರಿಂದ ಬಳಸಲಾಗುತ್ತಿದೆ.  ಸುಮಾರು 1 ಲಕ್ಷ 50 ಸಾವಿರ ಬ್ಯಾಂಕ್ ಶಾಖೆಗಳಲ್ಲಿ ಸಿಟಿಎಸ್ ಅನ್ನು ಜಾರಿಗೊಳಿಸಲಾಗಿದೆ. 

ಇದನ್ನೂ ಓದಿ : ಸಾಲ ಪಡೆದವರಿಗೂ, ಪಡೆಯುವವರಿಗೂ RBI ಗುಡ್ ನ್ಯೂಸ್..? ಕಾರಣ ತಿಳಿಯಿರಿ.

ವಂಚನೆ ಮತ್ತು ಮೋಸದ ಜಾಲದಿಂದ ಗ್ರಾಹಕರನ್ನು ರಕ್ಷಿಸುವ ಉದ್ದೇಶದಿಂದ ನಿರಂತರವಾಗಿ ಕಾರ್ಯನಿರ್ವಹಿಸುವ ಸಹಾಯವಾಣಿಯನ್ನು ತೆರೆಯುವುದಾಗಿ ರಿಸರ್ವ್ ಬ್ಯಾಂಕ್ ಹೇಳಿದೆ. Nation One Ombudsman ನೀತಿಯಡಿ ದೂರು ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಇದರಿಂದ ಗ್ರಾಹಕರು (Customer) ಒಂದೇ ಸ್ಥಳದಲ್ಲಿ ದೂರು ನೀಡಲು ಸಾಧ್ಯವಾಗುತ್ತದೆ. ಅಲ್ಲದೆ, ಗ್ರಾಹಕರ ಸಮಸ್ಯೆಯನ್ನು ಶೀಘ್ರ ಪರಿಹರಿಸುವುದು ಕೂಡಾ ಸಾಧ್ಯವಾಗುತ್ತದೆ. ಈ ಯೋಜನೆಯಡಿ ದೂರುಗಳನ್ನು ಹೊಂದಿರುವ ಗ್ರಾಹಕರು ಫೋನ್, ಆನ್‌ಲೈನ್ (Online), ಮೇಲ್, ಪೋಸ್ಟ್ ಮೂಲಕ ದೂರುಗಳನ್ನು ದಾಖಲಿಸಬಹುದು.

ಸಾಲ ನೀಡುವ ಸಂಸ್ಥೆಗಳು ಯಾವುದೇ ಪೂರ್ವ ಮಾಹಿತಿ ನೀಡದೆ, ತಮ್ಮ ಸಾಲದ ಅವಧಿಯನ್ನು ವಿಸ್ತರಿಸುತ್ತವೆ ಅಥವಾ ಇಎಂಐ (EMI) ಅನ್ನು ಹೆಚ್ಚಿಸುತ್ತವೆ ಎನ್ನುವುದು ಬಹುತೇಕ ಗ್ರಾಹಕರ ದೂರು.   ಆದರೆ, ಬಡ್ಡಿ (Interest)  ದರದಲ್ಲಿಆಗುವ ಬದಲಾವಣೆಯು ಸಾಲದ ಅವಧಿ ಅಥವಾ ಇಎಂಐ ಮೊತ್ತದಲ್ಲಿನ ಬದಲಾವಣೆಗೆ ಕಾರಣವಾಗುತ್ತದೆ. ರೆಪೊ ದರದಲ್ಲಿನ ಬದಲಾವಣೆ ಸಾಲದ ನಿಯಮಗಳ ಮೇಲೂ ಪರಿಣಾಮ ಬೀರುತ್ತದೆ. ಫೆಬ್ರವರಿ 5 ರಂದು ಆರ್‌ಬಿಐ ವಿತ್ತೀಯ ನೀತಿಯನ್ನು ಘೋಷಿಸಿತು. 3 ದಿನಗಳ ಹಣಕಾಸು ನೀತಿ ಸಮಿತಿಯ ಸಭೆಯ (Monetary Policy Committee) ನಂತರ, ರೆಪೊ ದರವನ್ನು (Repo rate) ಬದಲಾಯಿಸದಿರಲು ನಿರ್ಧರಿಸಲಾಗಿದೆ.

ಇದನ್ನೂ ಓದಿ : ಇನ್ಮುಂದೆ PFನಲ್ಲಿ ಸಿಗಲ್ಲ ಈ ದೊಡ್ಡ ರಿಯಾಯಿತಿ, 1.2 ಲಕ್ಷ ಚಂದಾದಾರರಿಗೆ ಆಘಾತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News