Drawbacks of Consuming Curd: ಮೊಸರು ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ವಿಟಮಿನ್ ಬಿ 6, ವಿಟಮಿನ್ ಸಿ, ವಿಟಮಿನ್ ಎ ಸೇರಿದಂತೆ ಅನೇಕ ಪ್ರಯೋಜನಕಾರಿ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ದೇಹಕ್ಕೆ ಅವಶ್ಯಕ ಮತ್ತು ಪ್ರಯೋಜನಕಾರಿಯಾಗಿದೆ. ಆದರೆ ಮೊಸರಿನಲ್ಲಿ ಕೆಲವು ಅನಾನುಕೂಲಗಳೂ ಇವೆ. ಹಾಗಾಗಿ ಕೆಲವರು ಮೊಸರನ್ನು ತಿನ್ನಬಾರದು.
ಮೊಸರು ಎಂದರೆ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಬಹುತೇಕ ಜನರಿಗೆ ತುಂಬಾ ಇಷ್ಟ. ಕೆಲವರಿಗೆ ಯಾವುದೇ ತಿಂಡಿ, ಊಟದಲ್ಲಿ ಮೊಸರು ಬೇಕೇ ಬೇಕು. ಇನ್ನೂ ಕೆಲವರಿಗೆ ಊಟದ ನಂತರ ಮೊಸರು ಸೇವಿಸುವ ಅಭ್ಯಾಸವಿರುತ್ತದೆ. ಅದರಲ್ಲೂ ಮೊಸರಿಗೆ ಸಕ್ಕರೆ ಬೆರೆಸಿ ಸೇವಿಸುವುದೆಂದರೆ ತುಂಬಾ ಪ್ರೀತಿ. ಆದರೆ, ಇದು ನಿಮ್ಮ ತೂಕವನ್ನು ಹೆಚ್ಚಿಸಬಹುದು. ಮಾತ್ರವಲ್ಲ, ಇತರ ರೀತಿಯಲ್ಲೂ ಕೆಲವು ಅಡ್ಡಪರಿಣಾಮಗಳನ್ನು ಕೂಡ ಉಂಟು ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.