ಪುದುಚೇರಿ ದಾಟಿದ ನಂತರ, ನಿವಾರ್ ಚಂಡಮಾರುತದ ವೇಗ ಕಡಿಮೆಯಾಗಿದೆ. ಆದರೆ ಈ ಮಧ್ಯೆ ಮಳೆ ಮತ್ತು ಬಿರುಗಾಳಿಯು ತಮಿಳುನಾಡು ಮತ್ತು ಪುದುಚೇರಿಯ ಅನೇಕ ಜಿಲ್ಲೆಗಳಲ್ಲಿ ಭಾರಿ ಹಾನಿಯನ್ನುಂಟುಮಾಡಿದೆ.
ನಿವಾರ್ ಚಂಡಮಾರುತದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ತಿರುವನಂತಪುರಂ ವಿಭಾಗದ ಆರು ವಿಶೇಷ ರೈಲುಗಳನ್ನು ಭಾರತೀಯ ರೈಲ್ವೆ ರದ್ದುಗೊಳಿಸಿದೆ.
ನಿವಾರ್ ಚಂಡಮಾರುತ (Cyclone Nivar) ವು ನವೆಂಬರ್ 25 ರ ತಡರಾತ್ರಿ ಕಾರೈಕಲ್ ಮತ್ತು ಮಾಮಲ್ಲಾಪುರಂ ನಡುವಿನ ತಮಿಳುನಾಡು ಮತ್ತು ಪುದುಚೇರಿ ತೀರಗಳನ್ನು ದಾಟಲಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತುಂಜಯ್ ಮೊಹಾಪಾತ್ರ ಮಂಗಳವಾರ ತಿಳಿಸಿದ್ದಾರೆ.
ನಿವಾರ್ ಚಂಡಮಾರುತವನ್ನು ಎದುರಿಸಲು ಕೇಂದ್ರದಿಂದ ಸಾಧ್ಯವಿರುವ ಎಲ್ಲ ಸಹಕಾರವನ್ನು ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡು ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ತ್ತು ಪುದುಚೇರಿ ಸಿಎಂ ವಿ.ನಾರಾಯಣಸಾಮಿ ಅವರಿಗೆ ಭರವಸೆ ನೀಡಿದ್ದಾರೆ.