ಸಿನಿಮಾ ನಿರ್ಮಾಣ ಮತ್ತು ನಿರ್ದೇಶನವನ್ನು ಬಿಜೆಪಿ ಮತ್ತು ಜೆಡಿಎಸ್ ಅವರಿಗೆ ಬಿಟ್ಟಿದ್ದೇವೆ. ನಿರ್ಮಾಣ, ಕಟ್, ಆಕ್ಷನ್ ಎಲ್ಲವನ್ನು ಅವರಿಬ್ಬರಿಗೇ ಬಿಟ್ಟಿದ್ದೇವೆ. ಡಿಕೆ ಸಹೋದರರನ್ನು ನೆನೆಸಿಕೊಳ್ಳದಿದ್ದರೆ ರಾಜಕೀಯವಾಗಿ ರಕ್ಷಣೆ ಸಿಗುವುದಿಲ್ಲ, ಮೇಲೆ ಬರಲು ಸಾಧ್ಯವಿಲ್ಲ. ಏನೇ ಮಾಡಿದರು ಡಿ.ಕೆ ಸಹೋದರರನ್ನು ಗುರಿಯಾಗಿಸಿಕೊಳ್ಳಬೇಕು ಎಂದು ಎಲ್ಲರೂ ಹವಣಿಸುತ್ತಿರುತ್ತಾರೆ ಎಂದು ಡಿ ಕೆ ಸುರೇಶ ಕಿಡಿ ಕಾರಿದ್ದಾರೆ.
ಇನ್ನೊಂದೆಡೆಗೆ ಸ್ಥಳೀಯವಾಗಿಯೂ ಕಾರ್ಯಕರ್ತರು ಡಿಕೆಶಿವಕುಮಾರ್ ಅವರೇ ಸ್ಪರ್ಧೆ ಮಾಡಬೇಕೆಂಬ ಒತ್ತಾಯಿಸಿದ್ದಾರೆ. ಜೊತೆಗೆ ಡಿಕೆಶಿ ಸ್ಪರ್ಧಿಸಿದರೆ ಮಾತ್ರ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲುವ ಅವಕಾಶವಿದೆ ಎನ್ನುವ ವರದಿ ಇದ್ದಿರುವುದರಿಂದಾಗಿ ಈಗ ಅವರು ರಾಜಕಾರಣದಲ್ಲಿ ಮತ್ತೊಮ್ಮೆ ಬಿಗ್ ರಿಸ್ಕ್ ತೆಗೆದುಕೊಳ್ಳಲು ಮುಂದಾಗಿದ್ದಾರೆ.
Bengaluru Rural Lok Sabha Result 2024: ಈಗ ಅವರು ಮೂರನೇ ಬಾರಿಗೆ ಕಣಕ್ಕೆ ಇಳಿದಿದ್ದು,ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಸಿಎನ್ ಮಂಜುನಾಥ್ ಅವರಿಂದ ತೀವ್ರ ಪೈಪೋಟಿಯನ್ನು ಎದುರಿಸುತ್ತಿದ್ದಾರೆ.ಹಾಗಾಗಿ 2024 ರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ವಿಜಯದ ಮಾಲೆ ಯಾರಿಗೆ ಸಿಗುತ್ತೆ ಎನ್ನುವುದನ್ನು ಫಲಿತಾಂಶ ಪ್ರಕಟವಾಗುವವರೆಗೆ ಕಾಯ್ದು ನೋಡಬೇಕಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.