Kaatera Update: ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ಕಾಟೇರ ಸಿನಿಮಾದ ರೈತರ ಹಾಡು, ಮಂಡ್ಯದಲ್ಲಿ ರೈತರ ದಿನಾಚರಣೆಯೆಂದು ಚಿತ್ರತಂಡ ಬಿಡುಗಡೆ ಮಾಡಲಿದೆ.
ಬ್ಯಾಂಕ್ ಆಫ್ ಬರೋಡ ವತಿಯಿಂದ ಕೊಳ್ಳೇಗಾಲ ತಾಲೂಕಿನ ಕೆಂಪನಪಾಳ್ಯ ಗ್ರಾಮದಲ್ಲಿ ಬರೋಡ ಕಿಸಾನ್ ಪಾಕ್ಷಿಕ ಅಭಿಯಾನ ಮತ್ತು ರೈತ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೈತರ ಆದಾಯ ದ್ವಿಗುಣಗೊಳಿಸುವ ಸಲುವಾಗಿ ರೈತರ ಅಭಿವೃದ್ಧಿ ಎಂಬ ಗುರಿಯೊಂದಿಗೆ ಬರೋಡ ಕಿಸಾನ್ ಪಾಕ್ಷಿಕ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ನಮ್ಮ ದೈನಂದಿನ ಜೀವನ ಮತ್ತು ಆರ್ಥಿಕತೆಯಲ್ಲಿ ರೈತರ ಕೊಡುಗೆ ಮಹತ್ವದ್ದಾಗಿದೆ.ದೇಶದಲ್ಲಿ ರೈತರನ್ನು ಗೌರವಿಸುವ ಸಲುವಾಗಿ, ಡಿಸೆಂಬರ್ 23 ಅನ್ನು ಕಿಸಾನ್ ದಿವಾಸ್ ಅಥವಾ ಭಾರತದಲ್ಲಿ ರೈತ ದಿನಾಚರಣೆಯೆಂದು ಆಚರಿಸಲಾಗುತ್ತದೆ.ಇದಲ್ಲದೆ ಈ ದಿನವು ಭಾರತದ 5 ನೇ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮ ದಿನಾಚರಣೆಯ ಸ್ಮರಣಾರ್ಥವಾಗಿಯೂ ಸಹಿತ ಆಚರಿಸಲಾಗುತ್ತದೆ.ಅವರು ಅನೇಕ ರೈತ ಸ್ನೇಹಿ ನೀತಿಗಳನ್ನು ತಂದಿದ್ದರು ಮತ್ತು ರೈತರ ಕಲ್ಯಾಣಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದರಿಂದಾಗಿ ಅವರನ್ನು ಈ ದಿನ ಸ್ಮರಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.