ಮಂಡ್ಯದಲ್ಲಿ ರೈತರ ದಿನಾಚರಣೆಯಂದು ʻಕಾಟೇರʼ ಸ್ಪೆಷಲ್‌ ಇವೆಂಟ್‌!

Kaatera Update: ಸ್ಯಾಂಡಲ್‌ವುಡ್‌ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌  ನಟಿಸಿರುವ ಕಾಟೇರ ಸಿನಿಮಾದ ರೈತರ ಹಾಡು, ಮಂಡ್ಯದಲ್ಲಿ ರೈತರ ದಿನಾಚರಣೆಯೆಂದು ಚಿತ್ರತಂಡ ಬಿಡುಗಡೆ ಮಾಡಲಿದೆ.  

Written by - Zee Kannada News Desk | Last Updated : Dec 21, 2023, 02:13 PM IST
  • ʻಕಾಟೇರʼ ಚಿತ್ರದಲ್ಲಿರೋ ರೈತರ ಹಾಡನ್ನ ರಿಲೀಸ್ ಮಾಡುತ್ತಾರೆಂಬ ವಿಷಯ ಹೊರ ಬಿದ್ದಿದೆ.
  • ರೈತರ ದಿನಾಚರಣೆಯಂದು ಈ ಹಾಡು ರಿಲೀಸ್‌ ಆಗಲಿದೆ. ಇದಕ್ಕಾಗಿ ಚಿತ್ರತಂಡ ದೊಡ್ಡದಾಗಿ ಇವೆಂಟ್‌ ಪ್ಲಾನ್‌ ಮಾಡಿದೆ.
  • ಇದೇ ಡಿಸೆಂಬರ್‌ 23ಕ್ಕೆ ಶನಿವಾರ ಸಂಜೆ 5 ಗಂಟೆಗೆ ಮಂಡ್ಯದ ಬಾಯ್ಸ್ ಕಾಲೇಜ್ ಗ್ರೌಂಡ್‌ನಲ್ಲಿ ಕಾಟೇರ ಚಿತ್ರತಂಡ ದೊಡ್ಡ ಇವೆಂಟ್ ಪ್ಲಾನ್ ಮಾಡಿದೆ.
ಮಂಡ್ಯದಲ್ಲಿ ರೈತರ ದಿನಾಚರಣೆಯಂದು ʻಕಾಟೇರʼ ಸ್ಪೆಷಲ್‌ ಇವೆಂಟ್‌! title=

Kaatera Farmer Song: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಬಹುನಿರೀಕ್ಷಿತ ʻಕಾಟೇರʼ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದ್ದು, ಇದರಲ್ಲಿ ಚಿತ್ರತಂಡ ಹೆಚ್ಚಿನ ಮಾಹಿತಿ ರಿವಿಲ್‌ ಮಾಡದೇಯಿದ್ದರೂ, ರೈತರ ಸಿನಿಮಾನೇ ಆಗಿದೆ ಎಂದು ತಿಳಿದು ಬರುತ್ತದೆ. ಇದೀಗ ಚಿತ್ರದಲ್ಲಿರೋ ರೈತರ ಹಾಡನ್ನ ರಿಲೀಸ್ ಮಾಡುತ್ತಾರೆಂಬ ವಿಷಯ ಹೊರ ಬಿದ್ದಿದೆ.

ಕಾಟೇರ ಸಿನಿಮಾದಲ್ಲಿ ಒಂದು ರೈತರ ಹಾಡಿದ್ದು, ಇದರ ಬಗ್ಗೆ ಸಡನ್ ಆಗಿಯೇ ಒಂದು ವಿಚಾರ ಇದೀಗ ರಿವೀಲ್ ಆಗಿದೆ. ಈ ಒಂದು ದಿನಕ್ಕೇನೆ ಚಿತ್ರತಂಡ ಕಾಯ್ತಾ ಇತ್ತು ಎಂದು ಅನಿಸುತ್ತಿದ್ದು, ರೈತರ ದಿನಾಚರಣೆಯಂದು ಈ ಹಾಡು ರಿಲೀಸ್‌ ಆಗಲಿದೆ. ಇದಕ್ಕಾಗಿ ಚಿತ್ರತಂಡ ದೊಡ್ಡದಾಗಿ ಇವೆಂಟ್‌ ಪ್ಲಾನ್‌ ಮಾಡಿದೆ.

ಇದನ್ನೂ ಓದಿ: ‘ಕಾಟೇರ’ದಲ್ಲಿ ದರ್ಶನ್ ಜೊತೆ ನಟಿಸಲು ಮಾಲಾಶ್ರೀ ಮಗಳು ಆರಾಧನಾ ಪಡೆದ ಸಂಭಾವನೆ ಎಷ್ಟು?

ಹೌದು.. ಇದೇ ಡಿಸೆಂಬರ್‌ 23ಕ್ಕೆ ಶನಿವಾರ ಸಂಜೆ 5 ಗಂಟೆಗೆ ಮಂಡ್ಯದ ಬಾಯ್ಸ್ ಕಾಲೇಜ್ ಗ್ರೌಂಡ್‌ನಲ್ಲಿ ಕಾಟೇರ ಚಿತ್ರತಂಡ ದೊಡ್ಡ ಇವೆಂಟ್ ಪ್ಲಾನ್ ಆಗಿದ್ದು, ಅಲ್ಲಿಗೆ ಇಡೀ ಸಿನಿತಂಡ ತೆರಳುತ್ತಿದೆ. ರೈತರ ಸಾಂಗ್‌ ಬಿಡುಗಡೆಯ ಕಾರ್ಯಕ್ರಮದಲ್ಲಿ ಚಿತ್ರ ನಾಯಕ, ನಾಯಕಿ ಇತರ ಕಲಾವಿದರು ಎಲ್ಲೂ ಇಲ್ಲಿ ಹೋಗುತ್ತಿದ್ದಾರೆ. 

ಇದರ ಹಿನ್ನೆಲೆಯಲ್ಲಿ ಇದೇ ದಿನ ಚಿತ್ರದ ರೈತರ ಹಾಡು ರಿಲೀಸ್ ಆಗುತ್ತಿದ್ದು, ಈ ಮೂಲಕ ಚಿತ್ರದ ರೈತರ ವಿಶೇಷ ಮಾಹಿತಿ ಈ ಒಂದು ಹಾಡಿನಲ್ಲಿ ಸಿಗುವ ಸಾಧ್ಯತೆ ಇದೆ. ಅದರೊಟ್ಟಿಗೆ ಈ ಚಿತ್ರದಲ್ಲಿ 1974 ರಲ್ಲಿ ನಡೆದ ರೈತರ ವಿಚಾರವೂ ಪ್ರಮುಖವಾಗಿಯೇ ಇದೆ. ಸದ್ಯ ಎಲ್ಲೆಡೆ ಓಡಾಡಿಕೊಂಡು ಚಿತ್ರತಂಡ ಪ್ರಚಾರ ಮಾಡುತ್ತಿದ್ದು, ಇನ್ನುಳಿದಂತೆ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆಯಿದೆ  ಅಂತಲೇ ಹೇಳಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.

Trending News