FASTag Recharge: ಟೋಲ್ ಪ್ಲಾಜಾದಲ್ಲಿ ಗಂಟೆಗಟ್ಟಲೆ ಕ್ಯೂ ನಿಲ್ಲುವ ಸಮಸ್ಯೆಯಿಂದ ಮುಕ್ತಿ ಪಡೆಯಲು ಫಾಸ್ಟ್ಯಾಗ್ ತುಂಬಾ ಪ್ರಯೋಜನಕಾರಿ ಆಗಿದೆ. ಇದರ ಪ್ರಯೋಜನವನ್ನು ಪಡೆಯಲು ನೀವು ಸೂಕ್ತ ಸಮಯದಲ್ಲಿ ಫಾಸ್ಟ್ಯಾಗ್ ಅನ್ನು ರೀಚಾರ್ಜ್ ಮಾಡಿಸುವುದು ಕೂಡ ಅತ್ಯಗತ್ಯವಾಗಿದೆ. ನೀವು ಇರುವಲ್ಲಿಯೇ ಆನ್ಲೈನ್ನಲ್ಲಿ ಬಹಳ ಸುಲಭವಾಗಿ ಫಾಸ್ಟ್ಯಾಗ್ ರೀಚಾರ್ಜ್ ಮಾಡಬಹುದು.
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರ (NHAI) ಫಾಸ್ಟ್ಯಾಗ್ ವ್ಯವಸ್ಥೆಯ ಮೂಲಕ ಭಾರತದಾದ್ಯಂತ ಪ್ರತಿ ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹಿಸುತ್ತದೆ. ಫಾಸ್ಟ್ಟ್ಯಾಗ್ಗಳನ್ನು ಭಾರತ ಸರ್ಕಾರದಿಂದ ಅಧಿಕೃತ 'ಟ್ಯಾಗ್-ವಿತರಕರು' ಅಥವಾ ಬ್ಯಾಂಕ್ಗಳ ಮೂಲಕ ನೀಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.