Friendship Day Wishes: ಭಾನುವಾರ (ಆಗಸ್ಟ್ 4) ಪ್ರಪಂಚದಾದ್ಯಂತ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಇಂದು ನಾವು ಆಚರಿಸುವ ಫ್ರೆಂಡ್ ಶಿಪ್ ಡೇಗೆ ಸುಮಾರು 89 ವರ್ಷಗಳ ಇತಿಹಾಸವಿದೆ. ಏಕೆಂದರೆ.. ಸ್ನೇಹಿತರ ದಿನ ಮೊದಲು ಹುಟ್ಟಿದ್ದು ಅಮೆರಿಕದಲ್ಲಿ. ಗ್ರೀಟಿಂಗ್ಸ್ ಕಾರ್ಡ್ಗಳಿಂದ ಆರಂಭವಾದ ಈ ಆಚರಣೆ ಈಗ ಸರಳ ಸಂದೇಶಗಳು ಮತ್ತು ಉಲ್ಲೇಖಗಳೊಂದಿಗೆ ನಡೆಯುತ್ತಿದೆ. ಈ ಸ್ಪೆಷಲ್ ದಿನದಂದು ನಿಮ್ಮ ಜೀವನದ ಸ್ಪೆಷಲ್ ವ್ಯಕ್ತಿಗೆ ವಿಶ್ ರೆಡಿ ಮಾಡಿಕೊಂಡಿದ್ದೀರಾ..? ಇಲ್ಲಿವೆ ನೋಡಿ ಕೆಲವು ಸ್ಪೆಷಲ್ ವಿಶ್ ಐಡಿಯಾಸ್...
ನಿಮ್ಮ ಜೀವನದ ಮೊದಲ 14-15 ವರ್ಷಗಳಲ್ಲಿ, ನೀವು ಸುಮಾರು 2000 ವಿದ್ಯಾರ್ಥಿಗಳೊಂದಿಗೆ ಶಾಲೆಗೆ ಹೋಗಿದ್ದೀರಿ. ಆ ದಿನಗಳಲ್ಲಿ, ಆ 14-15 ವರ್ಷಗಳಲ್ಲಿ ನೀವು ಎಷ್ಟು ಜನ ಸ್ನೇಹಿತರನ್ನು ಸಂಪಾದಿಸಿದ್ದೀರಿ ಎಂದು ನೆನಪಿಸಿಕೊಳ್ಳಿ. ಬೆರಳೆಣಿಕೆಯಷ್ಟು ಇರಬಹುದು!, ಆ ಸ್ನೇಹಿತರ ಜೊತೆ ಜಗಳ ಆಡಿರಬಹುದು, ಅಸೂಯೆ ಪಟ್ಟಿರಬಹುದು ಅಥವಾ ಅವರೊಂದಿಗೆ ಸ್ಪರ್ಧಿಸಿರಬಹುದು, ಅವರನ್ನು ದೂಷಿಸಿರಬಹುದು ಅಥವಾ ಹೊಗಳಿರಬಹುದು. ಅದೇ ನಿಮ್ಮ ಜಗತ್ತಾಗಿತ್ತು .ಈ ರೀತಿಯಾಗಿ, ನಮ್ಮ ಜೀವನವು ಸೀಮಿತವಾಗಿ ಉಳಿಯಿತು. ಚಿಕ್ಕ ಬಾವಿಯಂತೆ, ಅಷ್ಟೇ ನಮ್ಮ ಜೀವನ ಆಗಿತ್ತು.ಆದರೆ ಜಗತ್ತಿನಲ್ಲಿ ಸಾವಿರಾರು ಜನರು ಇದ್ದಾರೆ, ಸ್ನೇಹ ಬೆಳೆಸಲು ನಮ್ಮ ಮುಂದೆ ಮನುಷ್ಯ ಜಾತಿಯ ವಿಶಾಲ ಸಾಗರವೇ ಇದೆ.
Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸ್ತುತ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಬೀದಿ ನಾಯಿಗಳು ಮಹಿಳೆಯೋರ್ವಳ ಮೇಲೆ ಪ್ರೀತಿಯ ಭಾರಿ ಸುರಿಮಳೆಯನ್ನೇಗೈಯ್ಯುತ್ತಿವೆ.
ಹೆಚ್ಚಿನ ದೇಶಗಳು ಜುಲೈ 30 ರಂದು ಅಂತಾರಾಷ್ಟ್ರೀಯ ಫ್ರೆಂಡ್ಶಿಪ್ ಡೇಯನ್ನು ಆಚರಿಸುತ್ತವೆ. ಈ ದಿನವನ್ನು ಮೊದಲು 1958ರಲ್ಲಿ ಅಂತಾರಾಷ್ಟ್ರೀಯ ನಾಗರಿಕ ಸಂಸ್ಥೆ - ವರ್ಲ್ಡ್ ಫ್ರೆಂಡ್ಶಿಪ್ ಕ್ರುಸೇಡ್ನಿಂದ ಪ್ರಸ್ತಾಪಿಸಲಾಯಿತು. ಇದು ಸ್ನೇಹವನ್ನು ಉತ್ತೇಜಿಸುವ ಮೂಲಕ ಶಾಂತಿಯ ಸಂಸ್ಕೃತಿಯನ್ನು ಬೆಳೆಸಲು ಪ್ರೇರೇಪಣೆ ನೀಡುತ್ತದೆ.
Friendship Day 2021: ಇಂದು ಸ್ನೇಹಿತರ ದಿನ. ಸ್ನೇಹಿತರ ದಿನವನ್ನು ಪ್ರತಿ ವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಜೀವನದಲ್ಲಿ ಸ್ನೇಹಿತರು ದೊಡ್ಡ ಪಾತ್ರವನ್ನು ವಹಿಸುತ್ತಾರೆ. ಒಬ್ಬ ನಿಜವಾದ ಸ್ನೇಹಿತ ವ್ಯಕ್ತಿಯ ಜೀವನವನ್ನು ಯಶಸ್ವಿಗೊಳಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.