Viral Video: ಮಹಿಳೆಯ ಮೇಲೆ ಪ್ರೀತಿಯ ಸುರಿಮಳೆಗೈದ ಬೀದಿ ನಾಯಿಗಳು, ವಿಡಿಯೋ ನೋಡಿ

Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸ್ತುತ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಬೀದಿ ನಾಯಿಗಳು ಮಹಿಳೆಯೋರ್ವಳ ಮೇಲೆ ಪ್ರೀತಿಯ ಭಾರಿ ಸುರಿಮಳೆಯನ್ನೇಗೈಯ್ಯುತ್ತಿವೆ.  

Written by - Nitin Tabib | Last Updated : Aug 8, 2022, 07:03 PM IST
  • ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸ್ತುತ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ.
  • ಈ ವಿಡಿಯೋದಲ್ಲಿ ಬೀದಿ ನಾಯಿಗಳು ಮಹಿಳೆಯೋರ್ವಳ ಮೇಲೆ ಪ್ರೀತಿಯ ಭಾರಿ ಸುರಿಮಳೆಯನ್ನೇಗೈಯ್ಯುತ್ತಿವೆ.
Viral Video: ಮಹಿಳೆಯ ಮೇಲೆ ಪ್ರೀತಿಯ ಸುರಿಮಳೆಗೈದ ಬೀದಿ ನಾಯಿಗಳು, ವಿಡಿಯೋ ನೋಡಿ title=
Street Dog Viral Video

Trending News: ಸಾಮಾನ್ಯವಾಗಿ ಶ್ವಾನಗಳನ್ನು ಮನುಷ್ಯರ ನಿಜವಾದ ಸ್ನೇಹಿತರು ಎಂದು ಕರೆಯಲಾಗುತ್ತದೆ. ಈ ಮಾತು ಅಕ್ಷರಶಃ ನಿಜ ಎಂದು ಹಲವಾರು ಬಾರಿ ಸಾಬೀತಾಗಿದೆ. ನಾಯಿಗಳು ಯಾವಾಗಲೂ ಮನುಷ್ಯರ ಮೇಲೆ ಪ್ರೀತಿ ಮತ್ತು ವಾತ್ಸಲ್ಯವನ್ನು ತೋರಿಸುತ್ತವೆ ಎಂಬುದನ್ನು ಸಾಬೀತುಪಡಿಸುವ ವೀಡಿಯೊವೊಂದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ  ಭಾರಿ ವೈರಲ್ ಆಗುತ್ತಿದೆ. ಹಲವು ನಾಯಿಗಳು ಮಹಿಳೆಯೋರ್ವಳ ಮೇಲೆ ಪ್ರೀತಿಯ ಸುರಿಮಳೆಗೈಯುತ್ತಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋವನ್ನು ಭಾರತದ ಖ್ಯಾತ ಉದ್ಯಮಿ ಹರ್ಷ್ ಗೋಯೆಂಕಾ ಶೇರ್ ಮಾಡಿದ್ದಾರೆ.

ವೈರಲ್ ಆಗುತ್ತಿರುವ ವಿಡಿಯೋ
ಭಾನುವಾರ ಫ್ರೆಂಡ್ ಶಿಪ್ ಡೇ ಸಂದರ್ಭದಲ್ಲಿ ಹರ್ಷ್ ಗೋಯೆಂಕಾ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೋವನ್ನು ಟ್ವೀಟ್ ಮಾಡುವಾಗ, ನಾನು ಫ್ರೆಂಡ್‌ಶಿಪ್ ಡೇಯ ಅನೇಕ ವೀಡಿಯೊಗಳನ್ನು ನೋಡಿದ್ದೇನೆ ಎಂದು ಬರೆದಿದ್ದಾರೆ. ಆದರೆ @joedelhi ಅವರ ಈ ವೀಡಿಯೊ ಅವುಗಳಲ್ಲಿ ಅತ್ಯುತ್ತಮವಾಗಿದೆ ಎಂದಿದ್ದಾರೆ.

ಮಹಿಳೆಯ ಮೇಲೆ ಪ್ರೀತಿಯ ಸುರಿಮಳೆಗೈದ ನಾಯಿಗಳು
53 ಸೆಕೆಂಡುಗಳ ಈ ಕ್ಲಿಪ್‌ನಲ್ಲಿ ನಾಯಿಗಳ ಹಿಂಡು ನೆಲದ ಮೇಲೆ ಕುಳಿತಿರುವ ಮಹಿಳೆಯನ್ನು ತಬ್ಬಿಕೊಳ್ಳಲು ಮತ್ತು ಕೆನ್ನೆಗೆ ಮುತ್ತಿಕ್ಕಲು ಪರಸ್ಪರ ಪೈಪೋಟಿ ನಡೆಸುತ್ತಿವೆ ಎಂಬಂತೆ ತೋರುತ್ತಿದೆ. ನಾಯಿಗಳು ಮಹಿಳೆಯ ಮುಖವನ್ನು ನೆಕ್ಕಲು ಮತ್ತು ಅವಳ ತೊಡೆಯ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸುತ್ತವೆ. ಅವರು ಪರಸ್ಪರ ಎಷ್ಟೊಂದು ಇಷ್ಟಪಡುತ್ತಾರೆ ಎಂಬುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು.

ಇದನ್ನೂ ಓದಿ-ಗಿಳಿ ಶಿಳ್ಳೆ ಹೊಡೆದಿದ್ದಕ್ಕೆ ಪೊಲೀಸ್‌ ಠಾಣೆಯಲ್ಲಿ ಕಂಪ್ಲೇಂಟ್!‌

ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ ಈ ವಿಡಿಯೋ
ಹರ್ಷ್ ಗೋಯೆಂಕಾ ಈ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ, 70,000 ಕ್ಕೂ ಹೆಚ್ಚು ಬಾರಿ ಅದು ವೀಕ್ಷಣೆಗೆ ಒಳಗಾಗಿದೆ. ಈ ವಿಡಿಯೋ ಅನ್ನು ಮೂಲತಃ @joedelhi ಟ್ವಿಟರ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವೀಡಿಯೋಗೆ ಜನರು ಕೂಡ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇಡೀ ಸಂಸಾರದಲ್ಲಿಯೇ ಪ್ರಾಣಿ ಪ್ರೇಮಿಗಳು ನಿಜವಾಗಿಯೂ ದಯೆ ಮತ್ತು ಪ್ರಕೃತಿಯಲ್ಲಿ ಉತ್ತಮ ಮನುಷ್ಯರಾಗಿರುತ್ತಾರೆ ಮತ್ತು ಅದಕ್ಕೆ. ಪ್ರತಿಯಾಗಿ, ಅವರು ಈ ಪ್ರಾಣಿಗಳಿಂದ ಕೂಡ ಆಳವಾದ ಪ್ರೀತಿ ಮತ್ತು ಕಾಳಜಿಯನ್ನು ಪಡೆಯುತ್ತಾರೆ. ದೇವರು ಅವರನ್ನು ಯಾವಾಗಲೂ ಆಶೀರ್ವದಿಸಲಿ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ-Viral Vieo : ಕ್ಯಾಮೆರಾದಲ್ಲಿ ಸೆರೆಯಾಯಿತು ಪ್ರೀತಿಯ ಕಳ್ಳಾಟ .! ಚಲಿಸುತ್ತಿರುವ ರೈಲಿನಲ್ಲೇ ಪ್ರೇಮದಾಟ

'ನಿಜವಾದ ಸ್ನೇಹ ಇದೆ'
ತನ್ನ ಉದಾತ್ತ ಹೃದಯದ ಕಾರಣ ಮಹಿಳೆ ಈ ಪ್ರೀತಿಗೆ ಅರ್ಹಳು ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಮನುಷ್ಯರಂತಲ್ಲದೆ, ನಾಯಿಗಳು ಯಾವಾಗಲೂ ನಿಷ್ಠಾವಂತವಾಗಿರುತ್ತವೆ. ವೀಡಿಯೊಗೆ ಕಾಮೆಂಟ್ ಮಾಡಿರುವ ಮೂರನೇ ನೆಟಿಜನ್ ಇದು ಬೇಷರತ್ತಾದ ನಿಜವಾದ ಸ್ನೇಹ ಎಂದು ಬರೆದಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News