ಇತ್ತೀಚೆಗಷ್ಟೇ ಈ ಕುರಿತು ಮಾಹಿತಿ ನೀಡಿದ್ದ Google ಈ ಸೇವೆಯನ್ನು ಶೀಘ್ರದಲ್ಲಿಯೇ ಸರ್ವರ್ ನಿಂದ ಡಿಲೀಟ್ ಮಾಡಲಾಗುವುದು ಎಂದು ಹೇಳಿತ್ತು. ಹೀಗಾಗಿ ಇದೀಗ ಎಲ್ಲ ಬಳಕೆದಾರರಿಗೆ ಈ ಕುರಿತು ಸೂಚನೆ ನೀಡಿರುವ ಗೂಗಲ್, ಫೆಬ್ರುವರಿ 24, 2021 ರ ಮೊದಲು Play Musicನಿಂದ ತಮ್ಮ ಡೇಟಾ ತೆಗೆಯಲು ಹೇಳಿದೆ. ಇದಾದ ಬಳಿಕ ಕಂಪನಿ ಕೂಡ ಈ ಸೇವೆಯನ್ನು ತನ್ನ ಸರ್ವರ್ ನಿಂದ ತೆಗೆದುಹಾಕಲಿದೆ. ಅಂದರೆ, ಭವಿಷ್ಯದಲ್ಲಿ ಬಳಕೆ ದಾರರು ಇಲ್ಲಿರುವ ಡೇಟಾ ಬಳಸಲು ಸಾಧ್ಯವಿಲ್ಲ.
ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ಬಳಸಲಾಗುವ ಗೂಗಲ್ ಪ್ಲೇ ಮ್ಯೂಸಿಕ್ ಅಪ್ಲಿಕೇಶನ್ ಅನ್ನು ಇನ್ನು ಕೆಲವೇ ದಿನಗಳವೆರೆಗ ಮಾತ್ರ ಬಳಸಬಹುದು. ಯಾಕೆಂದರೆ, ಫೆಬ್ರವರಿ 24 ರ ನಂತರ ಆಪ್ ಕಾರ್ಯನಿರ್ವಹಿಸುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.