ನಳಿನ್ ಕುಮಾರ್ ಕಟೀಲ್ಗೆ ಏನು ರಾಜಕೀಯ ಗೊತ್ತು? ರಾಜಕೀಯ ಗೊತ್ತಿರದಿದ್ರೆ ಕಟೀಲು ಅನ್ನುವುದು ಬಿಟ್ಟು ಪಿಟೀಲು ಅಂತ ಇಟ್ಟುಕೊಳ್ಳುವುದು ಒಳ್ಳೆಯದು ಅಲ್ವಾ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಬ್ರಾಹ್ಮಣ ಬಡಿದಾಟದ ಬಿರುಗಾಳಿ ಎದ್ದಿದೆ.. ಬ್ರಾಹ್ಮಣರಿಗೆ ಸಿಎಂ ಸ್ಥಾನ ಹೆಚ್ಡಿಕೆ ಹೇಳಿಕೆ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದೆ.. ಲಿಂಗಾಯತ, ಒಕ್ಕಲಿಗ, SC/ST, ಒಬಿಸಿ ನಾಯಕರ ಪೀಕಲಾಟ ಶುರುವಾಗಿದೆ.
ಪೇಶ್ವೆಗಳ ಡಿಎನ್ ಎ ಇರುವ ವ್ಯಕ್ತಿಯನ್ನು ಸಿಎಂ ಮಾಡಲು ಬಿಜೆಪಿಯವರು ಹುನ್ನಾರ ಮಾಡಿದ್ದಾರೆ ಅಂತ ಹೇಳಿದ್ದೇನೆ. ಇದಕ್ಕೆ ಗಾಬರಿ ಯಾಕೆ? ಬ್ರಾಹ್ಮಣ ಸಮುದಾಯವೂ ಸೇರಿ ನಾನು ಯಾವುದೇ ಸಮಾಜಕ್ಕೆ ಅಗೌರವ ತೋರಿಲ್ಲ. ತೋರುವುದೂ ಇಲ್ಲ ಎಂದು ಎಂದು ಸ್ಪಷ್ಟ ಮಾತುಗಳಲ್ಲಿ ಕುಮಾರಸ್ವಾಮಿ ಹೇಳಿದರು.
ಫೆ. 4ರ ಬಳಿಕ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಆಗಲಿದೆ. ಸಿ.ಎಂ.ಇಬ್ರಾಹಿಂ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಮಾಡಲಾಗುತ್ತೆ ಎಂದು ಕೊಂಡಜ್ಜಿಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ನಾನು ಸ್ವತಂತ್ರವಾದ ಸರ್ಕಾರದ ಆಡಳಿತ ಕೊಡಲಿಕ್ಕೆ ಆಗಲಿಲ್ಲ. ಒಂದು ಬಾರಿ ಬಿಜೆಪಿ, ಒಂದು ಬಾರಿ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದೆ. ಸಿದ್ದರಾಮಯ್ಯ ಹೇಳಿದಂತೆ ನಾನು ಗೆದ್ದಿತ್ತಿನ ಬಾಲ ಹಿಡ್ಕೊಂಡು ಹೋಗಲಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಸೋತ ಎತ್ತಿನ ಬಾಲ ಹಿಡ್ಕೊಂಡು ಹೊರಟವು ಅಂತಾ ಸಿದ್ದರಾಮಯ್ಯ ಹೇಳಿಕೆಗೆ ಎಚ್ಡಿಕೆ ತಿರುಗೇಟು ನೀಡಿದ್ದಾರೆ..
ವೇಶ್ಯಾವಾಟಿಕೆ ಮತ್ತು ವರ್ಗಾವಣೆ ದಂಧೆಯ ಕಿಂಗ್ ಪಿನ್ ಎನಿಸಿಕೊಂಡಿರುವ ಸ್ಯಾಂಟ್ರೊ ರವಿ ಹೆಸರು ಈಗ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ರಾಜಕೀಯ ಕಿತ್ತಾಟ ಶುರುವಾಗಿದ್ದು ಬಿಜೆಪಿ ನಾಯಕರ ವಿರುದ್ಧ ವಿಪಕ್ಷ ನಾಯಕರು ಕೆಂಡಕಾರುತ್ತಿದ್ದಾರೆ. ಈ ಬಗ್ಗೆ ಗೃಹ ಸಚಿವರು ಕೂಡ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ
ಪ್ರಭಾವಿಗಳೊಂದಿಗೆ ಸ್ಯಾಂಟ್ರೋ ರವಿ ಲಿಂಕ್ ಕೇಸ್ ವಿಚಾರ..
ಯಾರು ಏನೆ ಹೇಳಿದ್ರು ತನಿಖೆಯಲ್ಲಿ ಸಂಪೂರ್ಣ ಮಾಹಿತಿ...
ಬೀದರ್ನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ...
20 ವರ್ಷದಲ್ಲಿ ಯಾರ ಯಾರ ಜೊತೆಗೆ ರವಿಗೆ ಸಂಬಂಧವಿದೆ...
ಈ ಬಗ್ಗೆ ತನಿಖೆಯಾಗಲಿ ಅಂತ ಹೇಳಿದ್ದೆನೆ ಎಂದ ಸಿಎಂ...
ಯಾರಿದ್ದಾರೆ ಕಾದೂ ನೋಡಿ ಎಂದು ಬಾಂಬ್ ಹಾಕಿದ ಸಿಎಂ...
ಪರೋಕ್ಷವಾಗಿ ಮಾಜಿ ಸಿಎಂ ಎಚ್ಡಿಕೆ ಗೆ ಟಾಂಗ್ ಕೊಟ್ಟ ಸಿಎಂ
ಗ್ರಾಮಕ್ಕೆ ಆಗಮಿಸಿದ ' ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ' ತೀರ್ಪುಗಾರರಾದ ಮೋಹಿತ್ ಕುಮಾರ್ ವತ್ಸ ಹಾಗೂ ' ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ' ತೀರ್ಪುಗಾರರಾದ ಆರ್.ಹರೀಶ್ ಮಾಜಿ ಮುಖ್ಯಮಂತ್ರಿ ಅವರಿಗೆ ಎರಡೂ ದಾಖಲೆಗಳ ಪತ್ರಗಳು ಮತ್ತು ಮೆಡಲ್ ಗಳನ್ನು ಹಸ್ತಾಂತರಿಸಿದ್ದಾರೆ.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ. ಶಾಸಕ ಗೌರಿಶಂಕರ್ ನೇತೃತ್ವದಲ್ಲಿ JDS ಯಾತ್ರೆ ಸಿದ್ಧತೆ. ಹೆಬ್ಬೂರಿನಿಂದ ಆರಂಭವಾಗಲಿರುವ ಪಂಚರತ್ನ ಯಾತ್ರೆ. ಯಲ್ಲಾಪುರದಲ್ಲಿ ರಾತ್ರಿ ವಾಸ್ತವ್ಯ ಹೂಡಲಿರುವ ಹೆಚ್ಡಿಕೆ. ಬೃಹತ್ ಗಾತ್ರದ ಕಟೌಟ್ ಮತ್ತು ಬ್ಯಾನರ್ಗಳ ಅಳವಡಿಕೆ.
ಮಂಡ್ಯದ ನಾಗಮಂಗಲ ಕ್ಷೇತ್ರಕ್ಕೆ ಎಚ್ಡಿಕೆ ಕೊಡುಗೆ ಏನು..? 2 ಬಾರಿ ಸಿಎಂ ಆಗಿದ್ರೂ ನಾಗಮಂಗಲಕ್ಕೆ ಏನು ಮಾಡಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ L.R.ಶಿವರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
HDK on Nikhil Kumaraswamy : ನಿಖಿಲ್ ಕುಮಾರಸ್ವಾಮಿ ಅವರು ಈಗಾಗಲೇ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಅವರ ಹೆಸರನ್ನು ಘೋಷಣೆ ಮಾಡುವುದಕ್ಕೆ ನನಗೆ ಯಾವುದೇ ಅಂಜಿಕೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಕಲ್ಪತರು ನಾಡಿನಲ್ಲಿ ಆರನೇ ದಿನದ ಜೆಡಿಎಸ್ ಪಂಚರತ್ನ ಯಾತ್ರೆ ನಡೀತು.. ಜೆಡಿಎಸ್ ಭದ್ರಕೋಟೆ ಗುಬ್ಬಿ ಕ್ಷೇತ್ರದಲ್ಲಿ HDK ಶಕ್ತಿ ಪ್ರದರ್ಶನ ಮಾಡಿದ್ರು. ಹಾಲಿ ಶಾಸಕ ಎಸ್.ಆರ್.ಶ್ರೀನಿವಾಸ್ HDKಗೆ ಠಕ್ಕರ್ ಕೊಟ್ಟರು..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.