ಸಿಎಂ ತವರು ಜಿಲ್ಲೆಯಲ್ಲಿ ಮಾಜಿ ಸಿಎಂ ಹೆಚ್ಡಿಕೆ ಪಂಚರತ್ನ ಯಾತ್ರೆ. ರಾಣೆಬೆನ್ನೂರು ತಾ. ಹಲಗೇರಿಯಿಂದ ಮೆಡ್ಲೇರಿವರೆಗೂ ಯಾತ್ರೆ. ಚುನಾವಣೆ ಬಂದಾಗ ಐಟಿ ರೇಡ್ ನಡೆಸುವುದು ಬಿಜೆಪಿ ಪ್ಲ್ಯಾನ್. ರಾಜ್ಯದಲ್ಲಿ ವಿರೋಧ ಪಕ್ಷಗಳ ಮುಖಂಡರ ಮೇಲೆ ರೇಡ್ ಆಗ್ತಾವೆ ಎಂದ ಕುಮಾರಸ್ವಾಮಿ.
ಹಾವೇರಿಯಲ್ಲಿಂದು ಜೆಡಿಎಸ್ ಪಂಚರತ್ನ ರಥಯಾತ್ರೆ ನಡೆಯಲಿದೆ.. ರಾಣೇಬೆನ್ನೂರು ತಾಲೂಕಿನ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಯಲಿದೆ. ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ರಥಯಾತ್ರೆ ನಡೆಯಲಿದೆ.
ಕುಮಾರಸ್ವಾಮಿ ಭಾಷಣದ ವೇಳೆ ವ್ಯಕ್ತಿಯೊಬ್ಬ ಕುಮಾರಸ್ವಾಮಿಗೆ ಪ್ರಶ್ನೆ ಕೇಳಿದ್ದಾನೆ. ಭವಾನಿ ರೇವಣ್ಣಗೆ ಟಿಕೆಟ್ ಕೊಡ್ತೀರಾ ನೀವು..? ಎಂದು ಪ್ರಶ್ನಿಸಿದ್ದಾನೆ. ಆಗ ಟಿಕೆಟ್ ಕೊಡಬೇಕಾ ? ಎಂದ ಹೆಚ್.ಡಿ.ಕುಮಾರಸ್ವಾಮಿ, ಆ ಚಿಂತೆ ಇಲ್ಲಿ ಯಾಕೆ ನಿನಗೆ, ಯಾವ ಊರು ನಿನ್ನದು..? ಎಂದು ಪ್ರಶ್ನಿಸಿದ್ದಾರೆ.
ಇಂದಿನಿಂದ ಬೀದರ್ ಜಿಲ್ಲೆಯಿಂದ 2ನೇ ಹಂತದ ಪಂಚರತ್ನ ರಥಯಾತ್ರೆ ನಡೆಯಲಿದೆ. ಜನವರಿ 13ನೇ ತಾರೀಕಿನವರೆಗೆ ರಥಯಾತ್ರೆ ನಡೆಯಲಿದೆ. ಕ. ಕರ್ನಾಟಕದ ಬೀದರ್, ಕಲಬುರ್ಗಿಯಲ್ಲಿ ರಥಯಾತ್ರೆ ಸಾಗಲಿದೆ.
ಗ್ರಾಮಕ್ಕೆ ಆಗಮಿಸಿದ ' ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ' ತೀರ್ಪುಗಾರರಾದ ಮೋಹಿತ್ ಕುಮಾರ್ ವತ್ಸ ಹಾಗೂ ' ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ' ತೀರ್ಪುಗಾರರಾದ ಆರ್.ಹರೀಶ್ ಮಾಜಿ ಮುಖ್ಯಮಂತ್ರಿ ಅವರಿಗೆ ಎರಡೂ ದಾಖಲೆಗಳ ಪತ್ರಗಳು ಮತ್ತು ಮೆಡಲ್ ಗಳನ್ನು ಹಸ್ತಾಂತರಿಸಿದ್ದಾರೆ.
Mandya Politics: ಶಕುನಿಗಳ ಮಾತು ಕೇಳುವಂತ ಪ್ರಮೇಯ ನಮಗಿಲ್ಲ. ಅಧಿವೇಶನಕ್ಕೆ ಯಾವಾಗ ಹೋಗಬೇಕು, ಪಕ್ಷ ಹೇಗೆ ಕಟ್ಟಬೇಕು, ಅಭಿವೃದ್ಧಿ ಹೇಗೆ ಮಾಡಬೇಕು ಅನ್ನೋದನ್ನು ಅವರಿಂದ ಕಲಿಯುವ ಅವಶ್ಯಕತೆ ಇಲ್ಲ ಅಂತಾ ಸುರೇಶ್ ಗೌಡ ಹೇಳಿದ್ದಾರೆ.
ಕೋಲಾರದ ಕೆಜಿಎಫ್ನಲ್ಲಿ ಪಂಚರತ್ನ ಸಮಾವೇಶ ಕಾರ್ಯಕ್ರಮದ ನಂತರದಲ್ಲಿ ಆಯೋಜಕರ ಮೇಲೆ ಕಾರ್ಯಕರ್ತರ ಆಕ್ರೋಶ. ಮಧ್ಯಾಹ್ನ 12 ಗಂಟೆಗೆ ಕರೆತಂದು ಊಟ ಕೊಟ್ಟಿಲ್ಲ. ಕೊನೆಪಕ್ಷ ಕುಡಿಯೋದಕ್ಕೆ ನೀರು ಕೊಟ್ಟಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕೋಲಾರದಲ್ಲಿ ಜೆಡಿಎಸ್ 4ನೇ ದಿನದ ಪಂಚರತ್ನ ರಥಯಾತ್ರೆ JDS ಪಕ್ಷಕ್ಕೆ ಬಹುಮತ ಬಂದ್ರೆ ದಲಿತರಿಗೆ ಡಿಸಿಎಂ ಪಟ್ಟ ಖಚಿತ ಕೋಲಾರದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಘೋಷಣೆ ಕೋಲಾರದ ನರಸಾಪುರದಲ್ಲಿ ಪಂಚರತ್ನ ಯಾತ್ರೆ ವೇಳೆ HDK ಹೇಳಿಕೆ ದಲಿತ ಸಮಾಜಕ್ಕೆ ಸಂಪೂರ್ಣ ರಕ್ಷಣೆ ನೀಡಲಾಗುವುದು ಜೊತೆಗೆ ಅಸ್ಪೃಶ್ಯತೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಕೋಲಾರದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ
Pancharatna Rath Yatra : ಜೆಡಿಎಸ್ ನ ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆಗೆ ಗುರುವಾರ ಬಸವನಗುಡಿಯ ಶ್ರೀ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಅಭಿಷೇಕ, ಪೂಜೆ ಮಾಡಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.