ಭಾರತೀಯ ದ್ವಿಚಕ್ರ ವಾಹನ ಉದ್ಯಮದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸುತ್ತಿರುವ ಹಾಗೂ ಸ್ಕೂಟರ್ ವಿಭಾಗದ ಲೀಡರ್ ಎನಿಸಿಕೊಂಡಿರುವ ʻಹೊಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾʼ(ಎಚ್.ಎಂ.ಎಸ್.ಐ), ಸ್ಮಾರ್ಟ್ ಮತ್ತು ಸುಧಾರಿತ ಆಕ್ಟಿವಾ 2023 ಅನ್ನು ಇಂದು ಅನಾವರಣಗೊಳಿಸಿದೆ. ಇದು ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಚೊಚ್ಚಲ ʻಒಬಿಡಿ 2ʼ (ಆನ್-ಬೋರ್ಡ್ ಡೈಯಾಗ್ನಸ್ಟಿಕ್-2) ಮಾನದಂಡ ಪೂರೈಸುವ ದ್ವಿಚಕ್ರ ವಾಹನವಾಗಿದ್ದು, ಏಪ್ರಿಲ್ 2023ರ ಗಡುವಿಗೆ ಮುಂಚಿತವಾಗಿಯೇ ಬಿಡುಗಡೆಗೊಂಡಿದೆ.
Honda CB300F Launched: ಹೊಂಡಾ ಕಂಪನಿಯ ಹೊಚ್ಚ ಹೊಸ ಬೈಕ್ ಆಗಿರುವ CB300F ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಬೈಕ್ ದೂರದ ಪ್ರವಾಸದಲ್ಲಿ ಅತ್ಯುತ್ತಮ ಅನುಭವ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಬೈಕ್ ಅನ್ನು ಸ್ಪೋರ್ಟಿ ಏರ್ಗಾನಾಮಿಕ್ಸ್ ನೊಂದಿಗೆ ಬಿಡುಗಡೆಮಾಡಲಾಗಿದ್ದು. ಇದು 17 ಇಂಚಿನ ಅಲಾಯ್ ಚಕ್ರಗಳನ್ನು ಹೊಂದಿದೆ.
Honda NX500 Mid-Size Adventure Motorcycle: ಹೊಂಡಾ ತನ್ನ ಹೊಚ್ಚ ಹೊಸ ಅಡ್ವೆಂಚರ್ ಮೋಟರ್ ಸೈಕಲ್ ಆಗಿರುವ NX500 ನ ಫೈಲಿಂಗ್ ಅಂತಿಮಗೊಳಿಸಿದ್ದು, ಇದು ಬೈಕ್ ನ ವಿನ್ಯಾಸದ ಹಲವು ವಿಷಯಗಳನ್ನು ಬಹಿರಂಗಗೊಳಿಸಿದೆ. ಇದಲ್ಲದೆ ಶೀಘ್ರದಲ್ಲಿಯೇ ಕಂಪನಿ ಈ ಹೊಸ ಬೈಕ್ ಅನ್ನು ಮಾರುಕಟ್ಟೆಗೆ ಇಳಿಸುವ ನಿರೀಕ್ಷೆ ಹೊಂದಲಾಗಿದೆ. ಈ ಬೈಕ್ ನ ಸಂಭಾವ್ಯ ರೂಪ CB500X ಅನ್ನು ಆಧರಿಸಿರಲಿದೆ.
Honda New Bike: ಹೋಂಡಾ 2021 ರ ಗೈಕಿಂಡೋ ಇಂಡೋನೇಷ್ಯಾ ಇಂಟರ್ನ್ಯಾಷನಲ್ ಆಟೋ ಶೋನಲ್ಲಿ (Gaikindo Indonesia International Auto Show) ಹೊಸ ಅಡ್ವೆಂಚರ್ ಟೂರರ್ ಮೋಟಾರ್ಸೈಕಲ್ CB150X (Honda CB150X) ಅನ್ನು ಅನಾವರಣಗೊಳಿಸಿದೆ, ಇದು 150cc ವಿಭಾಗದಲ್ಲಿ ಕಠಿಣ ಭಾರಿ ಪೈಪೋಟಿ ನೀಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.