Honda NX500: ಈ ರೀತಿ ಕಾಣುತ್ತದೆ ಹೊಂಡಾ ಕಂಪನಿಯ ಹೊಸ ಅಡ್ವೆಂಚರ್ ಬೈಕ್

Honda NX500 Mid-Size Adventure Motorcycle: ಹೊಂಡಾ ತನ್ನ ಹೊಚ್ಚ ಹೊಸ ಅಡ್ವೆಂಚರ್ ಮೋಟರ್ ಸೈಕಲ್ ಆಗಿರುವ NX500 ನ ಫೈಲಿಂಗ್ ಅಂತಿಮಗೊಳಿಸಿದ್ದು, ಇದು ಬೈಕ್ ನ ವಿನ್ಯಾಸದ ಹಲವು ವಿಷಯಗಳನ್ನು ಬಹಿರಂಗಗೊಳಿಸಿದೆ. ಇದಲ್ಲದೆ ಶೀಘ್ರದಲ್ಲಿಯೇ ಕಂಪನಿ ಈ ಹೊಸ ಬೈಕ್ ಅನ್ನು ಮಾರುಕಟ್ಟೆಗೆ ಇಳಿಸುವ ನಿರೀಕ್ಷೆ ಹೊಂದಲಾಗಿದೆ. ಈ ಬೈಕ್ ನ ಸಂಭಾವ್ಯ ರೂಪ  CB500X ಅನ್ನು ಆಧರಿಸಿರಲಿದೆ.  

Written by - Nitin Tabib | Last Updated : May 12, 2022, 11:48 AM IST

    ಶೀಘ್ರದಲ್ಲಿಯೇ ಹೊಂಡಾ ಕಂಪನಿಯ Honda NX500 ಬಿಡುಗಡೆ!

  • ಹೊಸ ಬೈಕ್ ನ ಫೈಲಿಂಗ್ ಅಂತಿಮಗೊಳಿಸಿದ ಹೊಂಡಾ
  • ಈ ಬೈಕ್ ನ ಸಂಭಾವ್ಯ ರೂಪ CB500X ಅನ್ನು ಆಧರಿಸಿರಲಿದೆ.
Honda NX500: ಈ ರೀತಿ ಕಾಣುತ್ತದೆ ಹೊಂಡಾ ಕಂಪನಿಯ ಹೊಸ ಅಡ್ವೆಂಚರ್ ಬೈಕ್ title=
Honda NX500 Mid-Size Adventure Motorcycle

Honda NX500 Mid-Size Adventure Motorcycle: ಹೊಂಡಾ ಕಂಪನಿ ಇತ್ತೀಚೆಗಷ್ಟೇ ತನ್ನ ಹೊಚ್ಚ ಹೊಸ ಎನ್ಎಕ್ಸ್500 ಮಿಡ್-ಸೈಜ್ ಅಡ್ವೆಂಚರ್ ಬೈಕ್ ನ ವಿನ್ಯಾಸವನ್ನು ಅಂತಿಮಗೊಳಿಸಿದೆ. ಅಷ್ಟೇ ಅಲ್ಲ ಕಂಪನಿ ಇತ್ತೀಚೆಗಷ್ಟೇ ತನ್ನ ಹೊಸ ಬೈಕ್ ನ ಟ್ರೇಡ್ ಮಾರ್ಕಿಂಗ್ ಕೂಡ ಕೈಗೊಂಡಿದ್ದು, ಶೀಘ್ರದಲ್ಲಿಯೇ ಹೊಸ ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರೀಕ್ಷೆ ಇದ್ದು, ಈ ಬೈಕ್ ಹೊಂಡಾ ಸಿಬಿ500ಎಕ್ಸ್ ಆಧಾರಿತವಾಗಿರಲಿದೆ ಎನ್ನಲಾಗಿದೆ. ಹೊಸ ಹೋಂಡಾ ಬೈಕ್ 471 cc ಲಿಕ್ವಿಡ್ ಕೂಲ್ಡ್ ಪ್ಯಾರಲಲ್ ಟ್ವಿನ್ ಎಂಜಿನ್‌ನೊಂದಿಗೆ CB500X ಜೊತೆಗೆ 47 Bhp ಪವರ್ ಮತ್ತು 43.2 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಸಾಧ್ಯತೆ ಇದೆ. 

ಇದನ್ನೂ ಓದಿ-ಒಮ್ಮೆ ಫುಲ್ ಚಾರ್ಜ್ ಮಾಡಿದರೆ 300 ಕಿಮೀ ವರೆಗೆ ಮೈಲೇಜ್ ನೀಡುತ್ತಂತೆ ಈ ಹೊಸ ಸ್ಕೂಟರ್

ಕಡಿಮೆ ಸಾಮರ್ಥ್ಯದ ಇಂಜಿನ್ ಕೂಡ ಇರುವ ಸಾಧ್ಯತೆ ಇದೆ
ಡಿಸೈನ್ ಫೈಲಿಂಗ್‌ನಲ್ಲಿ, ಶಕ್ತಿಶಾಲಿ ಎಂಜಿನ್‌ನ ಹೊರತಾಗಿ, ಕಂಪನಿ ಹೊಸ ಹೋಂಡಾ NX500 ನೊಂದಿಗೆ ಕಡಿಮೆ ಸಾಮರ್ಥ್ಯದ ಎಂಜಿನ್ ಅನ್ನು ಸಹ ನೀಡಬಹುದು ಎಂದು ತಿಳಿದುಬಂದಿದೆ. ಇದಲ್ಲದೆ, ಈ ಹೊಸ ಸಾಹಸಿ ಮೋಟಾರ್‌ ಸೈಕಲ್‌ನೊಂದಿಗೆ 184.4 cc ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಸಹ ನೀಡಬಹುದು ಎನ್ನಲಾಗಿದ್ದು, ಇದನ್ನು ಈಗಾಗಲೇ ಭಾರತದಲ್ಲಿ ತಯಾರಾದ ಹೋಂಡಾ CB200X ಮತ್ತು ಹೋಂಡಾ ಹಾರ್ನೆಟ್ 2.0 ಬೈಕ್ ಗಳಲ್ಲಿ ನೀಡಲಾಗಿದೆ. ಕಳೆದ ವರ್ಷ, ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ NX200 ಎಂಬ ಹೆಸರನ್ನು ಟ್ರೇಡ್‌ಮಾರ್ಕ್ ಮಾಡಿದೆ, ಆದರೆ ಕಂಪನಿಯು ಭಾರತದಲ್ಲಿ CB200X ಅನ್ನು ಬಿಡುಗಡೆಗೊಳಿಸಿತು ಮತ್ತು ಅದರ ಆಧಾರವನ್ನು ಹೋಂಡಾ ಹಾರ್ನೆಟ್ 2.0 ನಿಂದ ಪಡೆದುಕೊಂಡಿದೆ.

ಇದನ್ನೂ ಓದಿ-Honda Affordable Bikes: ಪ್ರತಿಯೊಬ್ಬರ ಬಜೆಟ್‌ಗೆ ಸರಿಹೊಂದುವ ಬೈಕ್ ಬಿಡುಗಡೆ ಮಾಡಲಿದೆ ಹೋಂಡಾ , ಶೀಘ್ರದಲ್ಲೇ ಮಾರುಕಟ್ಟೆಗೆ

ಹೋಂಡಾಗೆ ಸುವರ್ಣಾವಕಾಶ?
ಭಾರತದಲ್ಲಿ ಹೋಂಡಾ CB200X ಗೆ ಭಾರತೀಯ ಗ್ರಾಹಕರಿಂದ ಸಾಕಷ್ಟು ಮೆಚ್ಚುಗೆ ದೊರೆತಿದೆ, ಆದರೆ ಆಫ್-ರೋಡಿಂಗ್ ವಿಷಯದಲ್ಲಿ ಅದರ ಸಸ್ಪೆನ್ಶನ್ ಅಷ್ಟೊಂದು ಬಲಿಷ್ಠವಾಗಿಲ್ಲ. ಈ ಬೈಕ್ ಮಾರಾಟದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದೆ. Hero XPulse 200 4V ಸೇರಿದಂತೆ, ಪ್ರವೇಶ ಮಟ್ಟದ ಸಾಹಸ ಬೈಕ್‌ಗಳು ಭಾರತದಲ್ಲಿ ಸಾಕಷ್ಟು ಜನಪ್ರೀಯವಾಗಿರುವ ಕಾರಣ, ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾಗೆ ಈ ವಿಭಾಗದಲ್ಲಿ ಮಾರಾಟ ಹೆಚ್ಚಿಸಲು ಇದೊಂದು ಸುವರ್ಣಾವಕಾಶ ಎನ್ನಲಾಗುತ್ತಿದೆ. ಸುಜುಕಿ ಇತ್ತೀಚೆಗೆ ಭಾರತದಲ್ಲಿ ಹೊಸ V-Storm 250SX ಅನ್ನು ಸಹ ಬಿಡುಗಡೆ ಮಾಡಿದೆ. ಆದರೆ ಸಾಹಸ ಬೈಕ್ ರೂಪದಲ್ಲಿ ಅದರ ಕಾರ್ಯಕ್ಷಮತೆ ಅಷ್ಟೊಂದು ಸರಿಯಾಗಿಲ್ಲ ಎನ್ನಲಾಗುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News