ಹುಬ್ಬಳ್ಳಿಯ ಭೈರಿದೇ ವರಕೊಪ್ಪದಲ್ಲಿರುವ ಪ್ರತಿಷ್ಠಿತ ದರ್ಗಾ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಭಾರೀ ಭದ್ರತೆ ನೀಡಲಾಗಿದೆ. ಮೂವರು ಡಿವೈಎಸ್ಪಿ, ಆರು ಜನ ಪಿಐ, ಹತ್ತು ಜನ ಪಿಎಸ್ಐ, ಮೂವರು ಎಎಸ್ಐ, ಹೆಡ್ ಕಾನ್ಸಟೇಬಲ್ 20, ಪಿಸಿ 30, ಡಬ್ಲೂಪಿಸಿ ಹಾಗೂ ಡಬ್ಲೂ ಎಚ್ ಸಿ ನಾಲ್ಕು ಜನ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿರುವ ಹಜರತ್ ಸೈಯದ್ ಮೆಹಮೂದ್ ಶಾ ಖಾದ್ರಿ ದರ್ಗಾ ತೆರವಿಗೆ ಹೈಕೋರ್ಟ್ ಆದೇಶ ಹಿನ್ನೆಲೆ ಕಾರ್ಯಾಚರಣೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
ರಾತ್ರೋ ರಾತ್ರಿ ಕಟ್ಟಡ ಸಾಮಗ್ರಿ ಕದಿಯುತ್ತಿದ್ದ ಕಳ್ಳರ ತಂಡ ಹುಬ್ಬಳ್ಳಿ ಹೊರವಲಯದಲ್ಲಿ ಕಳ್ಳತನ ನಡೆಸುತ್ತಿದ್ದ ಇಬ್ಬರು ಅಂದರ್ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಹಾಗೂ ಕ್ರೈಂ ಸಿಬ್ಬಂದಿ ಕಾರ್ಯಚರಣೆ
ಹುಬ್ಬಳ್ಳಿಯ ಕುಂದಗೋಳ ತಾಲೂಕಿನ ಅಕ್ಕಪಕ್ಕ ಯುವ ರೈತರಿಗೆ ಮದುವೆಗೆ ಹೆಣ್ಣೇ ಸಿಗ್ತಿಲ್ವಂತೆ... ಇದರಿಂದಾಗಿ ಕೃಷಿಕರು ಆತಂಕದಲ್ಲಿದ್ದಾರೆ. ಮದುವೆಯಾಗಲು ಹೆಣ್ಣು ಸಿಗದೇ ಯುವಕರು ವಯಸ್ಸು ಮೀರುವ ಆತಂಕದಲ್ಲಿದ್ದಾರೆ.
ಹುಬ್ಬಳ್ಳಿಯ ಈದ್ಗಾ ಮೈದಾನ ಈಗ ಮತ್ತೆ ಸುದ್ದಿಯಲ್ಲಿದೆ. ಕಳೆದ ಗಣೇಶೋತ್ಸವ ಸಂದರ್ಭದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶಕ್ಕೆ ಆಗ್ರಹಿಸಿ ಹಿಂದು ಪರ ಸಂಘಟನೆಗಳು ಪಟ್ಟು ಹಿಡಿದು ಆಚರಣೆ ಮಾಡಿದವು. ಆದರೆ ಈಗ ಅದೇ ಹೋರಾಟ ಹಿಂದು ಪರ ಸಂಘಟನೆಗಳಿಗೆ ತಿರುಗಬಾಣವಾಗಿದೆ.
ಈದ್ಗಾ ಮೈದಾನವೆಂದೇ ಖ್ಯಾತಿ ಪಡೆದಿದ್ದ ಹುಬ್ಬಳ್ಳಿ ನಗರದ ಹೃದಯ ಭಾಗದಲ್ಲಿರುವ ಕಿತ್ತೂರು ಚೆನ್ನಮ್ಮ ಮೈದಾನಕ್ಕೆ ನೂತನ ಮೇಯರ್ ವಿರೇಶ ಅಂಚಟಗೇರಿ "ಕಿತ್ತೂರು ರಾಣಿ ಚೆನ್ನಮ್ಮ ಮೈದಾನ" ಎಂದು ಮರು ನಾಮಕರಣ ಮಾಡಿದ್ದಾರೆ.
ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ. ವಿಜಯ್ ಗುಂಟ್ರಾಳ್ರಿಂದ ಟಿಪ್ಪು ಜಯಂತಿ ಆಚರಣೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ
ಗಣೇಶೋತ್ಸವಕ್ಕೆ ಅವಕಾಶ ಕೊಟ್ಟ ಹಾಗೆ ಅವಕಾಶ ಅವಕಾಶ ನೀಡಿದ್ದಕ್ಕೆ ಹಿಂದೂ ಸಂಘಟನೆಗಳ ವಿರೋಧ
ಅದು ಕಳೆದ ಹದಿನೈದು ದಿನಗಳ ಹಿಂದೆ ಎಂದಿನಂತೆ ಇದ್ದ ಮನೆ..ಇಂದು ಆ ಮನೆ ದೇವಸ್ಥಾನವಾಗಿದೆ..ಜನ ಮರಳೋ ಜಾತ್ರೆ ಮರಳೋ ಅನ್ನೋವಂತೆ ಜನ ಅಲ್ಲಿಗೆ ಬಂದು ಪೂಜೆ ಮಾಡ್ತೀದಾರೆ.ಸರತಿ ಸಾಲಿನಲ್ಲಿ ನಿಂತು ಆ ಮನೆಯೊಳಗೆ ಕೈ ಮುಗಿದು ಹೋಗ್ತೀದಾರೆ..ಮನೆಯೊಂದು ದೇವಸ್ಥಾನ ಆಗಿರೋದು ಎಲ್ಲಿ,ಜನ ಯಾಕೆ ಅಲ್ಲಿಗೆ ಬಂದು ಕೈ ಮುಗೀತಿದಾರೆ.ಅಲ್ಲಿ ಸೃಷ್ಟಿಯಾದ ಪವಾಡವೇನು ಅಂತೀರಾ ಈ ಸ್ಟೋರಿ ನೋಡಿ...
ಸಂದೀಪಗೌಡ ಮೂಲತಃ ಬೆಂಗಳೂರ ನಿವಾಸಿ. ಹುಬ್ಬಳ್ಳಿಯ ಮನೋಜ್ ಪಾರ್ಕ್ ಬಳಿ ಇರೋ ಜಿಯೋ ಮಾರ್ಟ್ ನಲ್ಲಿ ಕೆಲಸಕ್ಕೆ ಸೇರಿದ್ದ. ತಾನು ಕೆಲಸ ಮಾಡುವ ಜಿಯೋ ಮಾರ್ಟ್ ನಲ್ಲಿಯೇ 6 ಲಕ್ಷ ಕಳ್ಳತನ ಮಾಡಿದ್ದ. ಕಳ್ಳತನ ಮಾಡೋ ಉದ್ದೇಶದಿಂದಲೇ ಕೆಲಸಕ್ಕೆ ಸೇರಿದ್ದ ಎನ್ನಲಾಗಿದೆ.
ಸ್ವಚ್ಛ ಕನ್ನಡ ಮಾತನಾಡುವ ಸರದಾರ ಹುಬ್ಬಳ್ಳಿಯ ದೇವಪ್ಪಜ್ಜ ವನಹಳ್ಳಿ ಈಶ್ವರ ನಗರದ ನಿವಾಸಿಯಾಗಿರೋ ಇವರು ದೇವಸ್ಥಾನದ ಧರ್ಮದರ್ಶಿ ಪ್ರತಿ ನವೆಂಬರ್ ಬಂತೆಂದರೆ ಅವರನ್ನು ‘ಸೋಲಿಸಲು’ ಸ್ಪರ್ಧೆಗಳ ಆಯೋಜನೆ ಆಂಗ್ಲ ಪದಗಳನ್ನು ನುಡಿಸುವ ಸ್ಪರ್ಧೆಯಲ್ಲೂ ಸಾವಿರಾರು ಜನರಿಗೆ ಸೋಲು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.