Shubman Gill: ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಶುಭ್ಮನ್ ಗಿಲ್ ಅದ್ಭುತ ಆಟ ಪ್ರದರ್ಶಿಸಿದ್ದರು. ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಮೂಲಕ ಎಲ್ಲರ ಮನಸೆಳೆದಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಶಿಖರ್ ಧವನ್ ಆಯ್ಕೆಯಾಗಿರಲಿಲ್ಲ. ಆದರೆ ಶುಭ್ಮನ್ ಗಿಲ್, ನಾಯಕ ರೋಹಿತ್ ಶರ್ಮಾ ಅವರ ಹೊಸ ಆರಂಭಿಕ ಪಾಲುದಾರರಾಗಿ ಭರ್ಜರಿಯಾಗಿ ಆಟವಾಡಿದ್ದಾರೆ. ಇವರ ಬ್ಯಾಟಿಂಗ್ ನೋಡಿ ಎದುರಾಳಿ ಬೌಲರ್ ಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಇದರ ಜೊತೆಗೆ ಟೀಂ ಇಂಡಿಯಾದ ದೊಡ್ಡ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
IND vs SL 2nd ODI: ಶ್ರೀಲಂಕಾದ ನಾಯಕ ದಸುನ್ ಶನಕ ಅತ್ಯುತ್ತಮ ಫಾರ್ಮ್ನಲ್ಲಿ ಓಡುತ್ತಿದ್ದಾರೆ. ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಿರುಸಿನ ಶತಕ ಬಾರಿಸಿದ್ದು, 108 ರನ್ಗಳ ಇನಿಂಗ್ಸ್ ಆಡಿದ್ದರು. 9ನೇ ವಿಕೆಟ್ಗೆ ಕಸುನ್ ರಜಿತಾ ಜೊತೆಗೂಡಿ ಕೇವಲ 73 ಎಸೆತಗಳಲ್ಲಿ 100 ರನ್ಗಳ ಮುರಿಯದ ಜೊತೆಯಾಟವನ್ನೂ ಆಡಿದ್ದರು. ಇದಲ್ಲದೇ ಬೌಲಿಂಗ್ ಮಾಡಿದ ಸಂದರ್ಭದಲ್ಲಿ ಶುಭಮನ್ ಗಿಲ್ ವಿಕೆಟ್ ಪಡೆದಿದ್ದರು.
Team India Playing XI: ಸೆಪ್ಟೆಂಬರ್ 2022ರಂದು ನಡೆದ ಏಷ್ಯಾಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಬಾರಿಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಮೂರು ವರ್ಷಗಳ ಕಾಯುವಿಕೆಯನ್ನು ವಿರಾಟ್ ಕೊಹ್ಲಿ ಕೊನೆಗೊಳಿಸಿದ್ದರು, ಇದೀಗ ಗುವಾಹಟಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ತಮ್ಮ 73 ನೇ ಅಂತಾರಾಷ್ಟ್ರೀಯ ಶತಕವನ್ನು ಗಳಿಸಿ ಭಾರತವನ್ನು 67 ರನ್ಗಳ ಅಂತರದಿಂದ ಗೆಲ್ಲುವಂತೆ ಮಾಡಿದರು.
Rohit Sharma Viral Video: ರೋಹಿತ್ ಶರ್ಮಾ ಅಭಿಮಾನಿಗಳನ್ನು ಭೇಟಿ ಮಾಡಲು ಹೋದಾಗ ಬಾಲಕನೋರ್ವ ಶರ್ಮಾರನ್ನು ನೋಡಿ ಅಳಲು ಪ್ರಾರಂಭಿಸಿದ. ನಂತರ ರೋಹಿತ್ ಆತನನ್ನು ಸಮಾಧಾನಪಡಿಸಿದ್ದರು. ಬಾಲಕನನ್ನು ಸಮಾಧಾನಗೊಳಿಸಿದ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
India vs Sri Lanka ODI Series: ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯ ಜನವರಿ 10 ರಂದು ಗುವಾಹಟಿಯಲ್ಲಿ ನಡೆಯಲಿದೆ. ಇದಕ್ಕಾಗಿ ನಾಯಕ ರೋಹಿತ್ ಶರ್ಮಾ ಕಸರತ್ತು ಆರಂಭಿಸಿದ್ದು, ಕಠಿಣ ತಾಲೀಮು ನಡೆಸುತ್ತಿದ್ದಾರೆ. ಅದರ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Arshadeep Singh: ಈ ಮೊದಲು ಈ ದಾಖಲೆಯು ಜಂಟಿಯಾಗಿ ಮೂವರು ಬೌಲರ್ಗಳ ಹೆಸರಿನಲ್ಲಿತ್ತು. ಇವರಲ್ಲಿ ಪಾಕಿಸ್ತಾನದ ಹಸನ್ ಅಲಿ, ವೆಸ್ಟ್ ಇಂಡೀಸ್ನ ಕೀಮೋ ಪಾಲ್ ಮತ್ತು ಒಶಾನೆ ಥಾಮಸ್ ಸೇರಿದ್ದಾರೆ. ಮೂವರೂ 11-11 ನೋ ಬಾಲ್ಗಳನ್ನು ಎಸೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.