ಹರ್ಮನ್ಪ್ರೀತ್ ಕೌರ್ ನೇತೃತ್ವದ ತಂಡವು ಜೂಲನ್ಗೆ ಸೂಕ್ತವಾದ ವಿದಾಯ ನೀಡಲು ಸರಣಿಯ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯವನ್ನು ಗೆಲ್ಲಲು ಪ್ರಯತ್ನಿಸುತ್ತಿತ್ತು. ಇದೀ ಆ ಪ್ರಯತ್ನ ಯಶಸ್ವಿಯಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 45.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 169 ರನ್ ಗಳಿಸಿತ್ತು.
ಜೂಲನ್ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಂತಿಮ ಬಾರಿಗೆ ಬ್ಯಾಟಿಂಗ್ ಮಾಡಲು ಮುಂದಾದಾಗ ಮೈದಾನದಲ್ಲಿ 'ಗಾರ್ಡ್ ಆಫ್ ಆನರ್' ಪಡೆದರು. ತನ್ನ 204 ನೇ ODI ನಲ್ಲಿ ಆಡುತ್ತಿರುವ ಜೂಲನ್ ದುರದೃಷ್ಟವಶಾತ್ ತನ್ನ ಅಂತಿಮ ಅಂತರಾಷ್ಟ್ರೀಯ ಇನ್ನಿಂಗ್ಸ್ನಲ್ಲಿ ಗೋಲ್ಡನ್ ಡಕ್ಗೆ ಔಟಾದರು. ಯುವ ಎಡಗೈ ವೇಗಿ ಫ್ರೇಯಾ ಕೆಂಪ್ ಅವರನ್ನು ಔಟ್ ಮಾಡಿದ್ದರು.
Jhulan Goswami Retirement: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಝೂಲನ್ ಗೋಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಝೂಲನ್ ತಮ್ಮ ಕೊನೆಯ ಪಂದ್ಯವನ್ನು ಎಲ್ಲಿ ಮತ್ತು ಯಾವಾಗ ಆಡಲಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಜೂಲನ್ ಗೋಸ್ವಾಮಿ ಅವರು ಈಗ ಆಡುವ ಪ್ರತಿಯೊಂದು ಪಂದ್ಯದಲ್ಲೂ ಒಂದರ ಹಿಂದೆ ಒಂದರಂತೆ ದಾಖಲೆಗಳನ್ನು ಮುರಿಯುತ್ತಿದ್ದಾರೆ.ಈಗ ಅವರು 200 ಏಕದಿನ ಪಂದ್ಯಗಳನ್ನು ಆಡಿರುವ ಎರಡನೇ ಆಟಗಾರ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಇದಕ್ಕೂ ಮೊದಲು ಜೂಲನ್ (jhulan goswami) ಏಕದಿನದಲ್ಲಿ 250 ವಿಕೆಟ್ಗಳನ್ನು ಪೂರೈಸಿದ್ದರು.
ICC Women World Cup 2022: ಹೋಳಿ ಹಬ್ಬದ ಒಂದು ದಿನ ನಂತರ ಮಹಿಳಾ ವಿಶ್ವಕಪ್ ಕ್ರಿಕೆಟ್ ನಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಕಹಿ ಸುದ್ದಿಯೊಂದು ಬಂದಿದೆ. ಇಂದು ನಡೆದ ಮಹತ್ವದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ, ಭಾರತ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿದೆ.
ಇತ್ತೀಚೆಗಷ್ಟೇ ಖ್ಯಾತ ಬಾಲಿವುಡ್ ಬೆಡಗಿ ಹಾಗೂ ವಿರಾಟ್ ಕೊಹ್ಲಿ ಪತ್ನಿ ಕೊಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಮಹಿಳೆಯರ ಟೀಮ್ ಇಂಡಿಯಾ ವೇಗಿ ಝೂಲನ್ ಗೋಸ್ವಾಮಿ ಅವರ ಜೊತೆಗೆ ಮಾತುಕತೆ ನಡೆಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.