Karnataka Election 2023 : ಕಾಂಗ್ರೆಸ್ಸಿಗರು ನನ್ನನ್ನು ಹಾವಿಗೆ ಹೋಲಿಕೆ ಮಾಡುತ್ತಿದ್ದಾರೆ. ನಾನು ಇದನ್ನ ಸ್ವೀಕಾರ ಮಾಡುವೆ, ಏಕೆಂದರೆ ಶಿವನ ಕೊರಳಲ್ಲಿ ಇರುವುದು ಇದೇ ನಾಗಸರ್ಪ. ನನಗೆ ಈ ದೇಶದ ಜನತೆಯೇ ಈಶ್ವರ ಸ್ವರೂಪಿ ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪಿಎಂ ನಮೋ ಪ್ರತ್ಯುತ್ತರ ನೀಡಿದ್ದಾರೆ.
Karnataka Assembly Election 2023 : ಈ ವರ್ಷದ ಕೊನೆಯ ಹೊತ್ತಿಗೆ ರಾಜಾಸ್ಥಾನ, ಛತ್ತೀಸಗಢಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಲ್ಲೆಲ್ಲ ಕಾಂಗ್ರೆಸ್ ಧೂಳೀಪಟ ಆಗಲಿದೆ. ಆ ವಿದ್ಯಮಾನದ ದೃಷ್ಟಿಯಿಂದ ಕರ್ನಾಟಕದ ಚುನಾವಣೆ ಮಹತ್ವದ್ದಾಗಿದೆ. ಹೀಗಾಗಿ ಬಿಜೆಪಿಗೆ ತಮ್ಮ ಮತ ಹಾಕಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದರು.
ರೈತರ ಆತ್ಮಹತ್ಯೆ ಆಗಿದ್ದು ಸಿದ್ರಾಮಣ್ಣನ ಕಾಲದಲ್ಲಿ. ಕರ್ನಾಕಟದ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಪ್ರಿಯಾಂಕಾ, ರಾಹುಲ್ ಬಂದೋದ್ರಾ..? ಯಾವುದು ಸೂಕ್ತವಲ್ಲವೋ ಅದನ್ನು ಮಾತನಾಡಿ ಜನರನ್ನು ಮರಳು ಮಾಡಲು ಸಾದ್ಯವಿಲ್ಲ. ಪ್ರಿಯಾಂಕಾ ಗಾಂದಿಗೆ ಕಾಂಗ್ರೆಸ್ ಸರಿಯಾದ ಮಾಹಿತಿ ನೀಡಿಲ್ಲ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದ ಅತ್ಯಂತ ಭ್ರಷ್ಟ ಸರ್ಕಾರಗಳಲ್ಲಿ ಒಂದು. ನರೇಂದ್ರ ನೋದಿ ಅವರ ಬಗ್ಗೆ ಖರ್ಗೆ ಅವರು ಆರೋಪಿಸಿದ್ದಾರೆ. ನರೇಂದ್ರ ಮೋದಿ ಅಂದ್ರೆ ಕಾಂಗ್ರೆಸ್ ನವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.
ಕಾಂಗ್ರೆಸ್ ಪಕ್ಷದ ಐದನೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಲಾಗಿದೆ. ಮಂಗಳೂರಿನಲ್ಲಿ ಇಂದು 5ನೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ ರಾಹುಲ್ ಗಾಂಧಿ ಸಾರ್ವಜನಿಕ ಬಸ್ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆ ನೀಡಿದರು
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಕುರಿತ ಹೇಳಿಕೆಗೆ ಕಮಲಪಾಳಯದ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ರಾಷ್ಟ್ರದ ಕ್ಷಮೇ ಕೇಳಬೇಕು ಎಂದು ಖರ್ಗೆ ಅವರಿಗೆ ಒತ್ತಾಯಿಸುತ್ತಿದ್ದಾರೆ. ಮೋದಿ ವಿಷ ಸರ್ಪ ಎಂಬ ಕಾಂಗ್ರೆಸ್ ಅಧ್ಯಕ್ಷನ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.