ನಾಳೆ ಪ್ರಮಾಣವಚನ ಸ್ವೀಕರಿಸಲಿರುವ ಸಿದ್ದರಾಮಯ್ಯ. 2ನೇ ಬಾರಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಲಿರುವ ಸಿದ್ದು. ಈ ಹಿನ್ನೆಲೆ ಸಿದ್ದು ನಿವಾಸದ ಬಳಿ ಅಭಿಮಾನಿಗಳ ಸಂಭ್ರಮ. ಅಪಾರ ಬೆಂಬಲಿಗರು ಸೇರಿ ಅಭಿಮಾನಿಗಳಿಂದ ಜೈಕಾರ. ಕಳೆದ 4 ದಿನಗಳಿಂದ ನೂರಾರು ಅಭಿಮಾನಿಗಳ ಜಮಾವಣೆ. ನಿತ್ಯವೂ ಸಿಹಿ ಹಂಚಿ ಸಂಭ್ರಮ ಪಡುತ್ತಿರುವ ಬೆಂಬಲಿಗರು.
ಕಳೆದ ದಶಕಗಳಿಂದ ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಇಡೀ ದೇಶಕ್ಕೆ ಚಿರಪರಿಚಿತವಾಗಿದ್ದ ಬಳ್ಳಾರಿ ಲೋಕಸಭೆಯ ಫಲಿತಾಂಶ ಈಗ ಬಿಜೆಪಿಗೆ ನಿಜಕ್ಕೂಅಚ್ಚರಿಯನ್ನುಂಟು ಮಾಡಿದೆ. ಇದಕ್ಕೆ ಕಾರಣವಿಷ್ಟೇ, ಕಳೆದ 14 ವರ್ಷಗಳಿಂದಲೂ ಕೂಡ ಇಲ್ಲಿ ಗಣಿಧಣಿಗಳಾದ ರೆಡ್ಡಿ ಸಹೋದರು ಹಾಗೂ ಶ್ರೀರಾಮಲು ಪ್ರಾಬಲ್ಯದಿಂದ ನೆಲೆಯೂರಿದ್ದ ಬಿಜೆಪಿಗೆ ಈಗ ಉಪ ಚುನಾವಣೆಯಲ್ಲಿನ ಸೋಲು ಚಿಂತೆಗೀಡುಮಾಡಿದೆ.
ಉಪಚುನಾವಣೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುವ ಮೂಲಕ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರು ಈಗ ಪ್ರತಿಪಕ್ಷ ಬಿಜೆಪಿ ಟಾಂಗ್ ಕೊಡಲು ಸಿದ್ದವಾಗಿದ್ದಾರೆ. ಆ ಮೂಲಕ ಸಮ್ಮಿಶ್ರ ಸರ್ಕಾರ ಬಲಿಷ್ಟವಾಗಿದೆ ಎನ್ನುವ ಸಂದೇಶವನ್ನು ಸಹ ಗೌಡ್ರು ರವಾನಿಸುತ್ತಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಪಾಲ್ಗೊಳ್ಳಲು ಆಗಮಿಸಿದ್ದ ಕೆ.ಎಸ್ ಈಶ್ವರಪ್ಪ ಪತ್ರಕರ್ತರೊಂದಿಗೆ ಮಾತನಾಡುತ್ತಾ ಎರಡು ದಿನ ಕಾದು ನೋಡಿ,ಡಿಕೆ ಶಿವಕುಮಾರ್ ಅರೆಸ್ಟ್ ಆಗಬಹುದು ಸರ್ಕಾರವೇ ಬಿದ್ದು ಹೋಗಬಹುದು ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.