Kedar Jadhav father missing: ಭಾರತೀಯ ಕ್ರಿಕೆಟಿಗ ಕೇದಾರ್ ಜಾಧವ್ ಅವರ ತಂದೆ ಮಹದೇವ್ ಜಾಧವ್ ಪುಣೆಯಿಂದ ನಾಪತ್ತೆಯಾಗಿದ್ದಾರೆ. ಮಹಾದೇವ್ ಜಾಧವ್ ಅವರು ಮಾರ್ಚ್ 27 ರಂದು ಬೆಳಿಗ್ಗೆ 11:30 ರಿಂದ ಪುಣೆಯ ಕೊತ್ರೋಡ್ ಪ್ರದೇಶದಿಂದ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಸುಮಾರು 75 ವರ್ಷದ ಮಹದೇವ್ ಜಾಧವ್ ಅವರು ಬೆಳಿಗ್ಗೆ 11.30 ರ ಸುಮಾರಿಗೆ ರಿಕ್ಷಾದಲ್ಲಿ ತೆರಳಿದ್ದಾರೆ.
ಇನ್ನು ಐಪಿಎಲ್‌ನಲ್ಲಿ ಜಾಧವ್ ಅವರ ಪ್ರದರ್ಶನ ತೀರಾ ಸಾಧಾರಣವಾಗಿತ್ತು. ಜಾಧವ್ 2018 ರಿಂದ 2020 ರವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ಆಟವಾಡಿದ್ದಾರೆ. ಆ ಬಳಿಕ 2021 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಅವರನ್ನು ಖರೀದಿಸಿತು. ಆದರೆ ಹೈದರಾಬಾದ್ ಫ್ರಾಂಚೈಸಿಯ ನಿರೀಕ್ಷೆಗಳನ್ನು ಹುಸಿ ಮಾಡಿದ್ದರು. ಐಪಿಎಲ್ 2021 ರಲ್ಲಿ, ಜಾಧವ್ 6 ಪಂದ್ಯಗಳಲ್ಲಿ ಕೇವಲ 55 ರನ್ ಗಳಿಸಿದ್ದರು.