ಕಾಂಗ್ರೆಸ್ ತಿರುಕನ ಕನಸು ಕಾಣ್ತಿದೆ ಎಂಬ ಯಡಿಯೂರಪ್ಪ ಹೇಳಿಕೆ ಅಂತರಾಳದಿಂದ ಹೇಳೋ ಮಾತಲ್ಲ ಅದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರನ್ನು ಸಿಎಂ ಸ್ಥಾನದಿಂದ ತೆಗೆದಿದ್ದಾರೆ. ಆ ಬಗ್ಗೆ ಅವರಿಗೆ ನೋವಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ..
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತಾ ಅದರ ಅರ್ಥ ಎಂದು ಕಾಂಗ್ರೆಸ್ ತಿರುಕನ ಕನಸು ಕಾಣ್ತಿದೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಮೃತ ಸಂತೋಷ ಪತ್ನಿ ರೇಣುಕಾ ಪಾಟೀಲ್ ಅವರು ರಾಜ್ಯಪಾಲರಿಗೆ ಪತ್ರದ ಮೂಲಕ ಆತ್ಮಹತ್ಯೆ ಪ್ರಕರಣದ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿ, ಈ ಪ್ರಕರಣದ ತನಿಖೆ ಪ್ರಮುಖ ಆರೋಪಿ ಈಶ್ವರಪ್ಪ ನಿರ್ದೇಶನದಂತೆ ನಡೆಯುತ್ತಿದೆಯಂತೆ.
ರೈಲು ಸುಟ್ಟಿದ್ದಷ್ಟೇ ಅಲ್ಲ, ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ಅಗ್ನಿಪಥ್ ಯೋಜನೆ ಗಲಭೆ ವಿಚಾರ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಅಧಿಕಾರದ ಲಾಲಸೆಗೆ ಕಾಂಗ್ರೆಸ್ ಪಕ್ಷ ಗೂಂಡಾಗಳ ಕೈಗೆ ಸಿಲುಕಿದೆ. ನಿರುದ್ಯೋಗಿ ಯುವಕರನ್ನು ಏಕೆ ದಾರಿ ತಪ್ಪಿಸುತ್ತೀರಾ..? ಎಂದು ಪ್ರಶ್ನಿಸಿದ್ದಾರೆ..
ಕುರುಬರ ಸಮಾವೇಶಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಬಣ ಹಾಗೂ ಈಶ್ವರಪ್ಪ ಬಣಗಳ ನಡುವೆ ಕಿತ್ತಾಟ ನಡೆದಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಕುರುಬರ ಸಮಾವೇಶಕ್ಕೆ ಕೆ.ಎಸ್. ಈಶ್ವರಪ್ಪ ಅವರನ್ನು ಆಹ್ವಾನಿಸದೆ ಸಿದ್ದರಾಮಯ್ಯ ಅವರನ್ನು ಮಾತ್ರ ಆಹ್ವಾನಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಸುದ್ದಿಗೋಷ್ಠಿ ಬಳಿಕ ಎರಡು ಬಣಗಳು ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಪಠ್ಯಪುಸ್ತಕದಲ್ಲಿ ಹೆಡ್ಗೇವಾರ್ ಭಾಷಣ ಸೇರಿದ್ದಕ್ಕೆ ವಿರೋಧ ಮಾಡ್ತಿದ್ದಾರೆ. ಹೆಡ್ಗೇವಾರ್ ಬದಲು ಮಹಮ್ಮದ್ ಅಲಿ ಜಿನ್ನಾ ಹೆಸರು ಸೇರಿಸಬೇಕಿತ್ತಾ. ಈಶ್ವರ ಲಿಂಗ ಒಡೆದ ಔರಂಗಜೇಬನ ಹೆಸರು ಸೇರಿಸಬೇಕಿತ್ತಾ? ಎಂದು ಮಾಜಿ ಸಚಿವ ಈಶ್ವರಪ್ಪ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..
ದೇವೇಗೌಡರ ಬಗ್ಗೆ ನಾನು ಟೀಕೆಮಾಡಲ್ಲ.. ರಾಜ್ಯದ ಅಭಿವೃದ್ಧಿಗಾಗಿ ಹೆಚ್ಚು ಪ್ರವಾಸ ಮಾಡಿದ್ದು ದೇವೇಗೌಡ, ಯಡಿಯೂರಪ್ಪ ಇಬ್ಬರೇ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.. ಅವರ ಮನೆಯ ದೇಗುಲ ಪುಡಿ ಮಾಡಿದ್ರೆ ಸುಮ್ಮನಿರ್ತಿದ್ರಾ ಎಂದು ಈಶ್ವರಪ್ಪ ಕುಮಾಸ್ವಾಮಿಯನ್ನು ಪ್ರಶ್ನಿಸಿದ್ದಾರೆ..
ನಾನೇನಾದ್ರು ತಪ್ಪು ಮಾಡಿದ್ರೆ ಚೌಡೇಶ್ವರಿ ನನಗೆ ಶಿಕ್ಷೆ ನೀಡಲಿ.. ಮತ್ತೆ ಸಂಪುಟಕ್ಕೆ ಸೇರಿಸೋದು ಬಿಡೋದು ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಕೇಂದ್ರದ ನಾಯಕರ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ.
ಈಶ್ವರಪ್ಪ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದೇನೆ. ಅವರು ರಾಜೀನಾಮೆ ನೀಡಿದ್ದಾರೆ. ಆದರೆ ಬಂಧನ ಯಾಕೆ ಆಗಬೇಕು. ಈಶ್ವರಪ್ಪ ಪ್ರಕರಣದಲ್ಲಿ ಬೀದಿಗಿಳಿದವರು, ಅವರವರ ವಿಚಾರಕ್ಕೆ ಯಾಕೆ ಬಂದಿಲ್ಲ. ಧರ್ಮ ಧರ್ಮಗಳ ನಡುವೆ ಸಂಘರ್ಷ ಆದಾಗ, ಕಾಂಗ್ರೆಸ್ ಮೌನಕ್ಕೆ ಶರಣಾಗಿದ್ದು ಯಾಕೆ? ಎಂದು ಪ್ರಶ್ನಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.